/newsfirstlive-kannada/media/post_attachments/wp-content/uploads/2024/06/RAHUL-GANDHI-6.jpg)
- 52 ಸ್ಥಾನಗಳಿಂದ ಈಗ 99 ಸ್ಥಾನಗಳಿಗೆ ಏರಿಕೆ ಕಂಡ ಕಾಂಗ್ರೆಸ್
- ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಲಿದ ವಿಪಕ್ಷ ಸ್ಥಾನ
- ವೇಣು ಗೋಪಾಲ್, ತರೂರ್ ನಡುವೆ ಸಖತ್ ಫೈಟ್
ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಬಿಜೆಪಿ ನೇತೃತ್ವದ ಎನ್‍ಡಿಎ ಕಸರತ್ತು ನಡೆಸಿದರೆ ಇತ್ತ ಕಾಂಗ್ರೆಸ್‍ನಲ್ಲಿ ವಿಪಕ್ಷ ಸ್ಥಾನವನ್ನು ಯಾರು ಏರ್ತಾರೆ ಅನ್ನೋದ್ರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕಳೆದ ಬಾರಿ ವಿಪಕ್ಷ ನಾಯಕನಾಗಲೂ ಕೂಡ ಅಗತ್ಯವಿದ್ದ ಸ್ಥಾನಗಳನ್ನು ಹಸ್ತಪಡೆ ಗೆದ್ದಿದ್ದಿಲ್ಲ. ಈ ಬಾರಿ 99 ಸ್ಥಾನಗಳನ್ನು ಗೆದ್ದು ಇಂಡಿಯಾ ಒಕ್ಕೂಟದ ಜೊತೆಗೆ ಕಾಂಗ್ರೆಸ್​ ವಿರೋಧ ಪಕ್ಷದ ನಾಯಕನಾಗಲು ಮುಂದಾಗಿದೆ. ಆದ್ರೆ ಇದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್​​​​ ಪಕ್ಷಕ್ಕೆ ಒಲಿದ ವಿಪಕ್ಷ ಸ್ಥಾನ
ಯಾವಾಗಲೂ ಮೋದಿ ಸರ್ಕಾರದ ವಿರುದ್ಧ ಗುಟುರು ಹಾಕುತ್ತಾ ಸುದ್ದಿಯಲ್ಲಿರೋ ರಾಹುಲ್​ ಗಾಂಧಿಗೆ ಅದೃಷ್ಟ ಕೂಡಿ ಬಂದಿದೆ. ಅದು ಭಾರೀ ಜವಾಬ್ದಾರಿ ಹೊಂದಿರುವ ವಿಪಕ್ಷ ಸ್ಥಾನ. ಯಾಕಂದ್ರೆ ರಾಹುಲ್‍ಗೆ ಮತ್ತೆ ದೊಡ್ಡ ಜವಾಬ್ದಾರಿ ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎನ್ನಲಾಗ್ತಿದೆ. ಕಾಂಗ್ರೆಸ್ 52 ಸ್ಥಾನಗಳಿಂದ ಈಗ 99 ಸ್ಥಾನಗಳಿಗೆ ಏರಿಕೆಯಾಗಿರುವುದಕ್ಕೆ ರಾಗಾ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆ ಅವರಿಗೇ ವಿಪಕ್ಷ ನಾಯಕನ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಇಲ್ಲೊಂದು ಸಮಸ್ಯೆ ಇದೆ.
ವಿಪಕ್ಷ ನಾಯಕನಾಗಲು ರಾಹುಲ್ ಗಾಂಧಿ ಹಿಂದೇಟು
ಅವಕಾಶ ತಾನೇ ಕೂಡಿ ಬಂದು ಬಾಗಿಲು ತಟ್ಟಿದ್ರೂ ರಾಹುಲ್ ಗಾಂಧಿ ಮಾತ್ರ ವಿಪಕ್ಷ ನಾಯಕನಾಗಲು ನಾ ಒಲ್ಲೆ ಅಂತಿದ್ದಾರೆ. ಕಾಂಗ್ರೆಸ್​ಗೆ ಲೋಕಸಭೆಯಲ್ಲಿ ವಿಪಕ್ಷ ಸ್ಥಾನ ಒಲಿದಿದೆ. ಸರ್ಕಾರವನ್ನ ಪ್ರತಿ ಹಂತದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿದೆ. ರಾಹುಲ್ ಗಾಂಧಿ ಮಾತ್ರ ವಿಪಕ್ಷ ಸ್ಥಾನದ ಗಾದಿ ಮೇಲೆ ಕೂರಲು ಒಪ್ಪಿಗೆ ಸೂಚಿಸಿಲ್ಲ. ಯಾಕಂದ್ರೆ ಜವಾಬ್ದಾರಿ.
ಜವಾಬ್ದಾರಿಗೆ ಬೆದರಿದ್ರಾ ರಾಹುಲ್ ಗಾಂಧಿ?
- ವಿಪಕ್ಷ ನಾಯಕನಾಗಲು ಹಿಂದೆ ಸರಿದ ರಾಹುಲ್ ಗಾಂಧಿ
- ವಿರೋಧ ಪಕ್ಷ ನಾಯಕನ ಮೇಲೆ ಜವಾಬ್ದಾರಿಗಳ ಮೂಟೆ
- ಪ್ರತಿ ಅಧಿವೇಶನದಲ್ಲಿ ಸರ್ಕಾರದ ತಪ್ಪು ಎತ್ತಿ ಹಿಡಿಯಬೇಕು
- ಸದನದ ಪ್ರತಿ ದಿನವೂ ಕಲಾಪದಲ್ಲಿ ಉಪಸ್ಥಿತಿ ಇರಲೇಬೇಕು
- ಪ್ರತಿದಿನ ಕಲಾಪದಲ್ಲಿ ಭಾಗಿಯಾಗುವುದು ಕಷ್ಟವಾಗಲಿದೆ
- ಅಧಿಕಾರದಲ್ಲಿರುವರು ವಿಪಕ್ಷನಾಯಕನನ್ನೇ ಟಾರ್ಗೆಟ್ ಮಾಡ್ತಾರೆ
- ಈ ಕಾರಣಗಳಿಂದ ಹಿಂದೆ ಸರಿಯುತ್ತಿರೋ ರಾಹುಲ್ ಗಾಂಧಿ
- ರಾಹುಲ್ ಬದಲು ವೇಣುಗೋಪಾಲ್​ಗೆ ವಿಪಕ್ಷ ಸ್ಥಾನ ಸಾಧ್ಯತೆ
ಒಂದು ವೇಳೆ ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಒಪ್ಪದಿದ್ರೆ ಕೆ.ಸಿ ವೇಣುಗೋಪಾಲ್​ಗೆ ಅದೃಷ್ಟ ಒಲಿಯುವ ಸಾಧ್ಯತೆಗಳಿವೆ. ಕಾಂಗ್ರೆಸ್ ಮುನ್ನಡೆಸುತ್ತಿರೋ ನಾಯಕರಲ್ಲಿ ಕೆಸಿವಿ ಒಬ್ಬರಾಗಿರುವ ಹಿನ್ನೆಲೆ ವೇಣುಗೋಪಾಲ್​ಗೆ ಸ್ಥಾನ ನೀಡುವ ಲೆಕ್ಕಾಚಾರ ಇದೆ. ಆದ್ರೆ ಶಶಿ ತರೂರ್ ಕೂಡ ವಿರೋಧ ಪಕ್ಷದ ನಾಯಕನ ರೇಸ್​ನಲ್ಲಿದ್ದಾರೆ. ಅಂತಿಮವಾಗಿ ಯಾರಿಗೆ ಈ ಅದೃಷ್ಟ ಒಲಿಯುತ್ತೋ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ