‘ಶಿವನ ಫೋಟೋ ತೋರಿಸಿ ಹಿಂದೂಗಳಿಗೆ ಅವಮಾನ ಮಾಡಿದ ರಾಹುಲ್​ ಗಾಂಧಿ’- ಬಿಜೆಪಿಯಿಂದ ಟ್ರೋಲ್​​

author-image
Bheemappa
Updated On
‘ಶಿವನ ಫೋಟೋ ತೋರಿಸಿ ಹಿಂದೂಗಳಿಗೆ ಅವಮಾನ ಮಾಡಿದ ರಾಹುಲ್​ ಗಾಂಧಿ’- ಬಿಜೆಪಿಯಿಂದ ಟ್ರೋಲ್​​
Advertisment
  • ಲೋಕಸಭೆಯಲ್ಲಿ ಪರಮಾತ್ಮನ ಫೋಟೋ ತೋರಿಸಿದ ರಾಹುಲ್ ಗಾಂಧಿ
  • PM ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ
  • ಪರಮಾತ್ಮನ ಫೋಟೋ ತೋರಿಸಿ ಹಿಂದೂಗಳಿಗೆ ಅವಮಾನ ಮಾಡಿದ್ರಾ..?

ನವದೆಹಲಿ: ಪ್ರಧಾನಿ ಮೋದಿ, ಬಿಜೆಪಿ, ಆರ್​ಎಸ್ಎಸ್​ನವರು ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಸಂಸತ್​ನಲ್ಲಿ ಶಿವನ ಫೋಟೋವನ್ನು ತೋರಿಸಿದ್ದ ರಾಹುಲ್ ಗಾಂಧಿಯವರನ್ನ ಬಿಜೆಪಿ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ಟೀಮ್​ ಬಗ್ಗೆ KL ರಾಹುಲ್ ಏನಂದ್ರು..? ವಿಶ್ವಕಪ್ ಗೆಲುವಿನ ಬಗ್ಗೆ ಕನ್ನಡಿಗನ ಮನದ ಮಾತುಗಳು

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮಾತನಾಡಿದರು. ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅವರು ಮಾತನಾಡಲು ಎದ್ದು ನಿಂತಾಗ, ಬಿಜೆಪಿ ಸದಸ್ಯರೆಲ್ಲ ಜೈ ಶ್ರೀರಾಮ್ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಜೈ ಸಂವಿಧಾನ ಎಂದು ಹೇಳಿದ್ದಾರೆ. ಈ ವೇಳೆ ಲೋಕಸಭಾ ಸದನದಲ್ಲಿ ರಾಹುಲ್ ಗಾಂಧಿ ಅವರು, ಶಿವನ ಫೋಟೋವನ್ನು ಕೂಡ ಪ್ರದರ್ಶನ ಮಾಡಿದ್ದಾರೆ.

ಇದನ್ನೂ ಓದಿ:ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ


">July 1, 2024

ಆದರೆ ಬಿಜೆಪಿ ಬೆಂಬಲಿಗರು ಈ ಒಂದು ಫೋಟೋವನ್ನು ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ರಾಹುಲ್ ಗಾಂಧಿಯವರನ್ನು ಟ್ರೋಲ್ ಮಾಡುತ್ತಿದ್ದಾರೆ. ಶಿವನ ಫೋಟೋ ತೋರಿಸಿ ಹಿಂದೂಗಳಿಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿಯವರು ಮಾತನಾಡಿರುವ ಬಗ್ಗೆ ದೊಡ್ಡ ಡಿಬೇಟ್ ನಡೆಯುತ್ತಿದೆ. ಅಲ್ಲದೇ ಸಂಸತ್​​ ಒಳಗೆ ಮಾತನಾಡಿದ ವಿಡಿಯೋಗಳು ವೈರಲ್ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment