newsfirstkannada.com

ವಯನಾಡು, ರಾಯ್​ ಬರೇಲಿಯಲ್ಲಿ ರಾಹುಲ್​ ಗಾಂಧಿಗೆ ಐತಿಹಾಸಿಕ ಜಯ; ಪ್ರಧಾನಿ ಆಗ್ತಾರಾ?

Share :

Published June 4, 2024 at 1:38pm

Update June 4, 2024 at 1:42pm

  ವಯನಾಡು, ರಾಯ್​ ಬರೇಲಿಯಲ್ಲಿ ರಾಹುಲ್​ ಗಾಂಧಿಗೆ ಭರ್ಜರಿ ಗೆಲುವು

  2 ಕ್ಷೇತ್ರಗಳಲ್ಲೂ 2 ಲಕ್ಷಕ್ಕೂ ಹೆಚ್ಚು ವೋಟ್​ಗಳಿಂದ ಗೆದ್ದು ದಾಖಲೆ ನಿರ್ಮಾಣ

  ಕಳೆದ ಸಲ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸೋತಿದ್ದ ರಾಹುಲ್​ ಗಾಂಧಿ!

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಯನಾಡು ಮತ್ತು ರಾಯ್​ ಬರೇಲಿ ಕಣಕ್ಕಿಳಿದಿದ್ದ ರಾಹುಲ್​ ಗಾಂಧಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಕೇರಳದ ವಯನಾಡಿನಲ್ಲಿ ರಾಹುಲ್​ ಗಾಂಧಿಯವರು 530498 ಮತಗಳು ಪಡೆದಿದ್ದಾರೆ. ಕಮ್ಯೂನಿಸ್ಟ್​ ಪಾರ್ಟಿ ಆಫ್​ ಇಂಡಿಯಾದ ಅನ್ನಿ ರಾಜ ಅವರು 239460 ವೋಟ್​ ತೆಗೆದುಕೊಂಡಿದ್ದಾರೆ. ಬಿಜೆಪಿಯ ಕೆ. ಸುರೇಂದ್ರನ್​​ ಅವರು 1 ಲಕ್ಷ ಮತ ಗಳಿಸಿದ್ದಾರೆ.

ಇನ್ನೊಂದೆಡೆ ರಾಯ್​ ಬರೇಲಿಯಲ್ಲಿ ರಾಹುಲ್​ ಗಾಂಧಿಗೆ 382467 ಮತಗಳು ಲಭಿಸಿವೆ. ಬಿಜೆಪಿ ಅಭ್ಯರ್ಥಿ ದಿನೇಶ್​ ಪ್ರತಾಪ್​ ಸಿಂಗ್​​ ಅವರು 170104 ಮತ ಪಡೆದುಕೊಂಡಿದ್ದಾರೆ.

ಕಳೆದ ಸಲ ರಾಹುಲ್​ ಅಮೇಥಿ ಹಾಗೂ ವಯನಾಡಿನಲ್ಲಿ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತರೂ ರಾಹುಲ್​ ಗಾಂಧಿ ಅವರನ್ನು ಕೇರಳದ ವಯನಾಡಿನ ಜನ ಗೆಲ್ಲಿಸಿದ್ರು. ಸದ್ಯ ಕಳೆದ ಬಾರಿಗಿಂತಲೂ ರಾಹುಲ್ ಗಾಂಧಿ ಚಾರ್ಮ್​ ಈ ಸಲ ಹೆಚ್ಚಿದೆ ಎನ್ನುತ್ತಿವೆ ಎಕ್ಸಿಟ್‌ ಪೋಲ್​​ ಸಮೀಕ್ಷೆಗಳು.

2019ರಲ್ಲಿ ರಾಹುಲ್ ಗಾಂಧಿ ಶೇಕಡಾ 64.7 ಮತಗಳನ್ನು ಪಡೆದಿದ್ದರು. ಈ ಬಾರಿ ಮತಗಳ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ. ಅಂದರೆ ಗೆಲುವಿನ ಅಂತರ ಕಡಿಮೆ ಆಗಲಿದೆ ಎನ್ನಲಾಗಿತ್ತು.

ಇದನ್ನೂ ಓದಿ: ಲೋಕಸಭಾ ಅಗ್ನಿಪರೀಕ್ಷೆ.. ಫಲಿತಾಂಶಕ್ಕೆ ಮುನ್ನ ರಾಹುಲ್​ ಗಾಂಧಿ ಮೋದಿಗೆ ಕೊಟ್ಟ ವಾರ್ನಿಂಗ್​ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಯನಾಡು, ರಾಯ್​ ಬರೇಲಿಯಲ್ಲಿ ರಾಹುಲ್​ ಗಾಂಧಿಗೆ ಐತಿಹಾಸಿಕ ಜಯ; ಪ್ರಧಾನಿ ಆಗ್ತಾರಾ?

https://newsfirstlive.com/wp-content/uploads/2024/04/RAHUL_GANDHIi.jpg

Load More