newsfirstkannada.com

ವಯನಾಡ್‌ಗೆ ರಾಹುಲ್ ಗಾಂಧಿ ಗುಡ್‌ಬೈ? ಕೇರಳದಲ್ಲಿ ಏನಾಯ್ತು? ಕರ್ನಾಟಕದಿಂದ ಸ್ಪರ್ಧೆ ಮಾಡ್ತಾರಾ?

Share :

Published February 26, 2024 at 8:17pm

  ವಯನಾಡ್‌ ಕ್ಷೇತ್ರ ಬಿಟ್ಟು ಕೊಡುವಂತೆ ಕಾಂಗ್ರೆಸ್ ಮಿತ್ರಪಕ್ಷ ಒತ್ತಡ

  ಸಿಪಿಐ ಅಭ್ಯರ್ಥಿಯಾಗಿ ಡಿ.ರಾಜಾ ಪತ್ನಿ ಅನ್ನಿರಾಜಾ ಹೆಸರು ಘೋಷಣೆ

  ಈ ಬಾರಿ 2 ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಮೆಗಾ ಪ್ಲಾನ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸೋ ಲೋಕಸಭಾ ಕ್ಷೇತ್ರ ಮತ್ತೆ ಬದಲಾವಣೆ ಆಗುವ ಸಾಧ್ಯತೆ ಇದೆ. 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡ್‌ನಿಂದ ಸ್ಪರ್ಧಿಸುವ ಸಾಧ್ಯತೆ ಕ್ಷೀಣಿಸಿದೆ. ಈ ಬಾರಿ ದಕ್ಷಿಣ ಭಾರತದ ಒಂದು ಲೋಕಸಭಾ ಕ್ಷೇತ್ರ ಹಾಗೂ ಉತ್ತರ ಭಾರತದ ಮತ್ತೊಂದು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಸದ್ಯ ರಾಹುಲ್ ಗಾಂಧಿ ಸ್ಪರ್ಧಿಸಿರುವ ವಯನಾಡ್‌ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಕಾಂಗ್ರೆಸ್ ಮಿತ್ರಪಕ್ಷ ಮುಸ್ಲಿಂ ಲೀಗ್ ಒತ್ತಡ ಹಾಕುತ್ತಿದೆ. ಕೇರಳದಲ್ಲಿ ಈ ಬಾರಿ 3 ಲೋಕಸಭಾ ಕ್ಷೇತ್ರ ನೀಡಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಕಾಂಗ್ರೆಸ್ ಮೇಲೆ ಒತ್ತಡ ಹೇರುತ್ತಿದೆ. ವಯನಾಡ್ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಹೀಗಾಗಿ ವಯನಾಡ್ ಕ್ಷೇತ್ರವನ್ನು ತಮಗೆ ನೀಡಬೇಕೆಂದು ಮುಸ್ಲಿಂ ಲೀಗ್‌ ಬಿಗಿ ಪಟ್ಟು ಹಿಡಿದಿದೆ.

ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೆ ರೋಚಕ ಟ್ವಿಸ್ಟ್​​; JDS ಬೆಂಬಲ ಕೇಳ್ತೀನಿ ಎಂದ ಸುಮಲತಾ; ಏನಿದು ಹೊಸ ಕಹಾನಿ?

2019ರಲ್ಲಿ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸಿಪಿಐ ಅಭ್ಯರ್ಥಿ ಪಿ.ಪಿ ಸುನ್ನೀರ್ ವಿರುದ್ಧ 4 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗಾಗಲೇ ವಯನಾಡ್ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಡಿ.ರಾಜಾ ಪತ್ನಿ ಅನ್ನಿರಾಜಾ ಹೆಸರು ಘೋಷಣೆ ಆಗಿದೆ. ಸಿಪಿಐ ಕೂಡ ಇಂಡಿಯಾ ಮೈತ್ರಿಕೂಟದ ಅಂಗಪಕ್ಷವೇ ಆಗಿದೆ. ಎಲ್‌ಡಿಎಫ್ ಮೈತ್ರಿಯಲ್ಲಿ ವಯನಾಡ್ ಕ್ಷೇತ್ರವನ್ನು ಸಿಪಿಐಗೆ ನೀಡಲಾಗಿದೆ ಎಂದ ಡಿ.ರಾಜಾ ಹೇಳಿದ್ದಾರೆ. ಹೀಗಿರುವಾಗ ಡಿ.ರಾಜಾ ಪತ್ನಿ ಅನ್ನಿರಾಜಾ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸುವುದು ಸರಿಯಲ್ಲ ಅನ್ನೋ ಲೆಕ್ಕಾಚಾರವಿದೆ. ಈ ಹಿನ್ನೆಲೆಯಲ್ಲಿ ಸಿಪಿಐ ಅಭ್ಯರ್ಥಿ ವಿರುದ್ಧ ಮುಸ್ಲಿಂ ಲೀಗ್ ಸ್ಪರ್ಧಿಸಲು ಒತ್ತಡ ಹಾಕಲಾಗುತ್ತಿದೆ.

ಒಂದು ವೇಳೆ ರಾಹುಲ್ ಗಾಂಧಿ ಅವರು ಮಿತ್ರ ಪಕ್ಷಕ್ಕೆ ವಯನಾಡ್ ಕ್ಷೇತ್ರವನ್ನು ಬಿಟ್ಟು ಕೊಟ್ಟರೆ ಕರ್ನಾಟಕ, ತೆಲಂಗಾಣದ ಒಂದು ಕ್ಷೇತ್ರ ಹಾಗೂ ಉತ್ತರಪ್ರದೇಶದ ಮತ್ತೊಂದು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಯನಾಡ್‌ಗೆ ರಾಹುಲ್ ಗಾಂಧಿ ಗುಡ್‌ಬೈ? ಕೇರಳದಲ್ಲಿ ಏನಾಯ್ತು? ಕರ್ನಾಟಕದಿಂದ ಸ್ಪರ್ಧೆ ಮಾಡ್ತಾರಾ?

https://newsfirstlive.com/wp-content/uploads/2024/01/RAHUL-GANDHI-4.jpg

Load More