Advertisment

ಕಾರು ಅಡ್ಡಗಟ್ಟಿ ಕಿಡ್ನಾಪ್​ಗೆ ಯತ್ನ.. ರೈಸ್ ಮಿಲ್ ಮಾಲೀಕನ ಪ್ಲಾನ್​ಗೆ ಐವರು ಖದೀಮರು ಅರೆಸ್ಟ್​

author-image
AS Harshith
Updated On
ಕಾರು ಅಡ್ಡಗಟ್ಟಿ ಕಿಡ್ನಾಪ್​ಗೆ ಯತ್ನ.. ರೈಸ್ ಮಿಲ್ ಮಾಲೀಕನ ಪ್ಲಾನ್​ಗೆ ಐವರು ಖದೀಮರು ಅರೆಸ್ಟ್​
Advertisment
  • ಕಿಡ್ನಾಪ್​ ಮಾಡುವ ಸಮಯ ಖದೀಮರ ಯಡವಟ್ಟು!
  • ಪ್ಲಾನ್​ ಫೇಲ್​ ಆಗಿ ಜೈಲು ಸೇರಿದ ಆರು ಕಿಡ್ನಾಪರ್ಸ್​!
  • ನರೇಂದ್ರಕುಮಾರ್​ ಕುತ್ತಿಗೆಗೆ ಕತ್ತಿ ಇಟ್ಟು ಹಣಕ್ಕೆ ಬೇಡಿಕೆ

ಬೇಗನೆ ದುಡ್ಡು ಮಾಡೋ‌ ಆಸೆಗೆ ಮನುಷ್ಯ ಮಾಡಬಾರದ ಕೆಲಸವನ್ನ ಮಾಡ್ತಾನೆ. ರಾಯಚೂರಲ್ಲೂ ಸಹ ಖದೀಮರ ಗುಂಪೊಂದು ಹಣ ಇದ್ದವರನ್ನೇ ಟಾರ್ಗೆಟ್ ಮಾಡಿ ಅಪಹರಿಸಿ ಖಜಾನೆ ತುಂಬಿಸಿಕೊಳ್ಳುವ ಯತ್ನ ಮಾಡಿದ್ರು. ಆದ್ರೆ ಕಿಡ್ನ್ಯಾಪ್ ಮಾಡುವ ವೇಳೆ ಆದ ಯಡವಟ್ಟು ಖದೀಮರ ಪ್ಲ್ಯಾನ್​ನ್ನೇ ಉಲ್ಟಾ ಹೊಡೆಸಿದ್ದು, ಆರೋಪಿಗಳು ಅಂದರ್ ಆಗಿದ್ದಾರೆ.

Advertisment

ಇದು ಹುಚ್ಚು ಚಪಲ. ಐಶಾರಾಮಿ ಜೀವನದ ಮೋಹ. ಹರಾಮಿ ದುಡ್ಡಿಗೆ ಆಸೆ. ಇದಕ್ಕಾಗಿ ಹುಚ್ಚು ಕೋಡಿ ಮನಸ್ಸು ಏನ್​ ಬೇಕಾದ್ರೂ ಮಾಡಲು ಸಿದ್ಧ ನೋಡಿ. ಕೃಷ್ಣೆ, ತುಂಗಭದ್ರೆ ನೀರಿನಲ್ಲಿ ಥಳತಳಿಸಿ ನಿಂತ ಭತ್ತ, ರಾಯಚೂರು ಜನರ ಬದುಕ್ಕನ್ನ ಸಂಪಾಗಿಸಿದೆ. ಇಲ್ಲಿ ಬೇಕಾದಷ್ಟು ರೈಸ್​​ ಮಿಲ್​ಗಳು ಧನಕನಿಕರನ್ನ ಸೃಷ್ಟಿ ಮಾಡಿವೆ. ಧನವೇ ಹಲವರ ಹೊಟ್ಟೆ ಕಿಚ್ಚಿಗೂ ಕಾರಣ. ಅಂದ್ಹಾಗೆ ರಾಯಚೂರಿನ ರೈಸ್​​ ಮಿಲ್​ ಮಾಲೀಕನ ಕಿಡ್ನಾಪ್​ ಕಹಾನಿಯೊಂದು ಸಿನಿಮಾದ ಕಥಾ ಹಂದರವನ್ನೇ ಮೀರಿಸಿದೆ.

ರೈಸ್​​ ಮಿಲ್ ಮಾಲೀಕನ ಕಿಡ್ನಾಪ್ ಕಹಾನಿ​

ನರೇಂದ್ರ ಕುಮಾರ್​​ರವರು​ ಸತ್ಯನಾರಾಯಣ ರೈಸ್ ಮಿಲ್ ಮಾಲೀಕ. ರಾಯಚೂರಿನ ಹೊರವಲಯದ ಸತ್ಯನಾರಾಯಣ್​​​ ರೈಸ್​​​ ಮಿಲ್​ ಸಾಕಷ್ಟು ಖ್ಯಾತಿ ಗಳಿಸಿದೆ. ಆ ಮಿಲ್​​​ನ ಖ್ಯಾತಿಗೆ ತಕ್ಕಂತೆ ಸಂಪತ್ತಿನ ಲಕ್ಷ್ಮೀ ಒಲಿದಿದ್ಲು. ಇದೇ ದುಡ್ಡು ಕೆಲ ಅಡ್ನಾಡಿಗಳ ಕಣ್ಣು ಕುಕ್ಕಿತ್ತು. ಬಹುದಿನಗಳಿಂದ ನರೇಂದ್ರ ಕುಮಾರ್​ ಮೇಲೆ ಕಣ್ಣಿಟ್ಟಿದ್ದ ಕಿಡ್ನಾಪರ್ಸ್​​ ಡಬಲ್​ ಟೀಂ ಜಿದ್ದಿಗೆ ಬಿದ್ದು ಜೈಲು ಕಂಬಿ ಎಣಿಸ್ತಿದ್ದಾರೆ.

ಇದನ್ನೂ ಓದಿ: ಅಪರಿಚಿತರಿಂದ ಮೋಸ ಸಾಧ್ಯತೆ, ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ; ಇಲ್ಲಿದೆ ಇಂದಿನ ಭವಿಷ್ಯ

Advertisment

publive-image

ಬೈಕ್ ಅಪಘಾತದಂತೆ ನಟಿಸಿದ ಐವರು ಕಿಡ್ನಾಪರ್ಸ್​​

ಎಂದಿನಂತೆ ನರೇಂದ್ರಕುಮಾರ್​​​ ಕೆಲಸ ಮುಗಿಸಿ ಇನ್ನೇನು ಕಾರು ಹತ್ತಿ ಮನೆಗೆ ತೆರಳಬೇಕು. ಅಷ್ಟರಲ್ಲಿ ರಿಯಾಜ್ ಪಾಷಾ, ಗುರುರಾಜ್, ಶೇಕ್‌ ಮುಕ್ತಿಯಾರ್, ಶೇಕ್ ಅಬ್ದುಲ್, ಗುರುಕುಮಾರ್ ಎಂಬ ಐವರು ಕಿಡ್ನಾಪರ್ಸ್​​​ ಬೈಕ್ ಅಪಘಾತದಂತೆ ನಟಿಸಿದ್ರು. ಏಕಾಏಕಿ ಕಾರ್ ಅಡ್ಡಗಟ್ಟಿ ಕಾರ್ ಗಾಜು ಒಡೆದು, ಡೋರ್ ಓಪನ್ ಮಾಡಿದ್ದಾರೆ. ನರೇಂದ್ರ ಕುತ್ತಿಗೆಗೆ ಕತ್ತಿ ಇಟ್ಟಿದ್ದ ಆರೋಪಿಗಳು ನರೇಂದ್ರನಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.. ಆಗ ಕಾರ್​ನಲ್ಲಿದ್ದ 50 ಸಾವಿರ ನೀಡಲು ನರೇಂದ್ರ ಮುಂದಾಗಿದ್ದಾರೆ. ಆದರೆ, ಇನ್ನೂ ಹೆಚ್ಚಿನ ಹಣಕ್ಕೆ ಕಿಡ್ನಾಪರ್ಸ್​​​ ಬೇಡಿಕೆ ಇಟ್ಟಿದ್ದಾರೆ. ಅಪಹರಿಸುವ ದೃಷ್ಟಿಯಿಂದ ಆರೋಪಿಯೊಬ್ಬ ಕಾರನ್ನ ಸ್ಟಾರ್ಟ್ ಮಾಡಲು ಯತ್ನಿಸಿದ್ರೂ ಸ್ಟಾರ್ಟ್ ಆಗಿಲ್ಲ. ಇದಕ್ಕೆ ಕಾರಣ ಕಾರ್​ ಎಂಜಿನ್​ ಸ್ಟಾರ್ಟ್​ ಆಗದಂತೆ ನರೇಂದ್ರರ ಸಮಯೋಜಿತ ಪ್ಲಾನ್​​​.

publive-image

ಇದನ್ನೂ ಓದಿ: ಹೊಸ ಬಾಂಬ್ ಸಿಡಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ; ರಾಜೀನಾಮೆ ಕೊಡಲು ಸಿದ್ಧ ಎಂದಿದ್ದೇಕೆ?

ಹೊತ್ತಿಗೆ ಕೂಗಳತೆ ದೂರದಲ್ಲಿದ್ದ ಕೆಲ ಕೆಲಸಗಾರರು ಮಾಲೀಕನನ್ನ ಬಿಡಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ, ಮಾಲೀಕನಿಗೆ ಚಾಕು ತೋರಿಸಿ ಬೈಕ್​ನಲ್ಲಿ ಕರೆದೊಯ್ದಿದ್ದಾರೆ. ಈ ಹೊತ್ತಿಗೆ ಯಡವಟ್ಟೊಂದು ನಡೆದಿದೆ. ಒಬ್ಬ ಆರೋಪಿಯನ್ನ ಹಿಡಿದ ಕಾರ್ಮಿಕರು, ಬಳಿಕ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಂದೇ ಗಂಟೆಯಲ್ಲಿ ಕಿಡ್ನಾಪರ್ಸ್​ನ್ನ ಬಲೆಗೆ ಕೆಡವಿದ್ದಾರೆ.

Advertisment

ಇಂಟ್ರಸ್ಟಿಂಗ್​​ ಅಂದ್ರೆ ಬಂಧಿತ ಆರೋಪಿಗಳಲ್ಲಿ ರಿಯಾಜ್ ಹಾಗೂ ಗುರುರಾಜ್ ಈ ಮೊದಲು ಇದೇ ನರೇಂದ್ರಕುಮಾರ್ ಬಳಿ ಕೆಲಸ ಮಾಡ್ಕೊಂಡಿದ್ರು. ಉಳಿದ ಕಿರಾತಕರು ಇದೇ ರೀತಿಯ ಹಲವು ಕೃತ್ಯಗಳಲ್ಲಿ ಭಾಗಿ ಆಗಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment