newsfirstkannada.com

ಶಾಸಕಿ ಕೆರಮ್ಮ ಪುತ್ರ, PA ವಿರುದ್ಧ ಅಟ್ರಾಸಿಟಿ ಕೇಸ್; ರೊಚಿಗೆದ್ದು ಠಾಣೆ ಎದುರು ಪ್ರತಿಭಟಿಸಿದ ನಾಯಕಿ..!

Share :

Published February 12, 2024 at 12:12pm

  ಅಕ್ರಮ ಮರಳು ಸೀಜ್ ಮಾಡಿದ್ಕೆ ಪೇದೆ ಮೇಲೆ ಗೂಂಡಾಗಿರಿ

  ಶಾಸಕಿ ಕರೆಮ್ಮ ಪುತ್ರ, ಸಹೋದರನ ವಿರುದ್ಧ ಗಂಭೀರ ಆರೋಪ

  ಅಕ್ರಮ ಮರಳು ಸೀಜ್ ಮಾಡಿದ್ದಕ್ಕೆ ಪೇದೆಗೆ ಹಿಗ್ಗಾಮುಗ್ಗಾ ಹಲ್ಲೆ

ಅಕ್ರಮ ಮರಳು ಸೀಜ್ ಮಾಡಿದ್ದಕ್ಕೆ ಪೇದೆಯನ್ನು ಐಬಿಗೆ ಕರೆಸಿಕೊಂಡು ಮನಸೋ ಇಚ್ಛೆ ಥಳಿಸಿ ನಿಂದಿಸಿದ ಆರೋಪ ಪ್ರಕರಣದಲ್ಲಿ, ದೇವದುರ್ಗ ಶಾಸಕಿ ಕೆರಮ್ಮ ಅವರ ಆಪ್ತ ಸಹಾಯಕ ಹಾಗೂ ಪುತ್ರನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಶಾಸಕಿ ಪುತ್ರ ಸಂತೋಷ್ ನಾಯಕ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ತಿಮ್ಮಾರೆಡ್ಡೆ ಸೇರಿದಂತೆ 8 ಜನರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ.

ಶಾಸಕರ ಮಗ ಸಂತೋಷ್
ಶಾಸಕರ ಮಗ ಸಂತೋಷ್

ತನಿಖೆ ಮಾಡದೇ ಹೇಗೆ ಕೇಸ್ ಹಾಕಿದ್ರಿ?
ಜಾತಿ ನಿಂದನೆ ಆರೋಪದ ಮೇಲೆ ಕೇಸ್ ದಾಖಲಾಗ್ತಿದ್ದಂತೆಯೇ ರೊಚ್ಚಿಗೆದ್ದ ಶಾಸಕಿ ಪೊಲೀಸ್ ಠಾಣೆ ಮುಂದೆ ಮಧ್ಯರಾತ್ರಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ. ಪುತ್ರ, ಸಹೋದರ ಹಾಗೂ ಆಪ್ತ ಕಾರ್ಯದರ್ಶಿ ಪರವಹಿಸಿ ಪ್ರತಿಭಟನೆ ಮಾಡಿದ್ದಾರೆ. ತನಿಖೆ ಮಾಡದೇ ಹೇಗೆ‌ ಅಟ್ರಾಸಿಟಿ ದಾಖಲಿಸಿದ್ದೀರಿ? ನಾವೂ ಕೂಡ ಅಟ್ರಾಸಿಟಿ ದಾಖಲಿಸುತ್ತೇವೆ ಎಂದು ದೂರು ನೀಡಲು ಮುಂದಾದರು. ಈ ವೇಳೆ ದೂರು ತೆಗೆದುಕೊಳ್ಳಲು ದೇವದುರ್ಗ ಪೊಲೀಸರು ನಿರಾಕರಣೆ ಮಾಡಿದರು. ಆಗ ಶಾಸಕಿ ನಮಗೆ ನ್ಯಾಯ ಬೇಕು ಎಂದು ಪ್ರತಿಭಟನೆಗೆ ಕೂತಿದ್ದಾರೆ. ಬೆಳಗಿನ ಜಾವ 5 ಗಂಟೆವರೆಗೂ ಶಾಸಕಿ ಪ್ರತಿಭಟನೆ ನಡೆಸಿದರು.

ಡಿವೈಎಸ್​ಪಿ ವಿರುದ್ಧವೂ ಆಕ್ರೋಶ
ಅಟ್ರಾಸಿಟಿ ವಿರುದ್ಧ ಸಿಡಿದೆದ್ದ ಶಾಸಕಿಯಿಂದ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಿಎಸ್​ಐ ಅಶೋಕ್ ಸದಲಗಿ ಹಾಗೂ ಪೇದೆ ವಿರುದ್ಧ ಕ್ರಮಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಅಕ್ರಮ ಮರಳು ಸಾಗಾಟಕ್ಕೆ ಪೊಲೀಸರ ಕುಮ್ಮಮ್ಮು ಇದೆ. ಪ್ರಮುಖವಾಗಿ ಪಿಐ ಅಶೋಕ್ ಸದಲಗಿ ಅಕ್ರಮ ಮರಳು ಮಾರಾಟಕ್ಕೆ ಸಪೋರ್ಟ್ ಇದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಪೊಲೀಸ್ ಪೇದೆಗಳನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿಅಕ್ರಮ ಮರಳು ಸೀಜ್ ಮಾಡಿದ್ಕೆ ಪೇದೆ ಮೇಲೆ ಗೂಂಡಾಗಿರಿ; ಶಾಸಕಿ ಕರೆಮ್ಮ ಪುತ್ರ, ಸಹೋದರನ ವಿರುದ್ಧ ಗಂಭೀರ ಆರೋಪ

ಏನಿದು ಪ್ರಕರಣ..?
ದೇವದುರ್ಗ ತಾಲೂಕಿನ ಕೃಷ್ಣಾ ನದಿ ಪಾತ್ರದ ದೊಡಂಬಳಿ ಹಾಗೂ ಗೋಪಾಳಪುರ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ದಂಧೆ ನಡೆಯುತ್ತಿದೆ. ನಿರಂತರ ಟಿಪ್ಪರ್ ಲಾರಿ ಹಾಗೂ ಟ್ರ್ಯಾಕ್ಟರ್​​ಗಳ ಓಡಾಟದಿಂದ ರೈತರು ಬಿತ್ತನೆ ಮಾಡಿದ ಮೆಣಸಿನಕಾಯಿ ಬೆಳೆ ಧೂಳನಿಂದಾಗಿ ನಷ್ಟವಾಗ್ತಿದೆ. ಈ ದೂರಿನ ಹಿನ್ನೆಲೆ ಸ್ಥಳ ಪರಿಶೀಲನೆಗೆ ಪೇದೆ ಹನುಮಂತರಾಯ ಸ್ಥಳಕ್ಕೆ ಹೋಗಿದ್ದರು. ಇದೇ ವಿಚಾರ ಇಟ್ಟುಕೊಂಡು ಪೇದೆ ಹನುಮಂತರಾಯ ನಾಯಕ್​​ರನ್ನು ಐಬಿಗೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇದೆ. ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ನಾಯಕ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ರಾಮಣ್ಣ ನಾಯಕ್ ಸೇರಿದಂತೆ 8 ಮಂದಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಸಕಿ ಕೆರಮ್ಮ ಪುತ್ರ, PA ವಿರುದ್ಧ ಅಟ್ರಾಸಿಟಿ ಕೇಸ್; ರೊಚಿಗೆದ್ದು ಠಾಣೆ ಎದುರು ಪ್ರತಿಭಟಿಸಿದ ನಾಯಕಿ..!

https://newsfirstlive.com/wp-content/uploads/2024/02/KERAMMA.jpg

Load More