Advertisment

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​.. ಪ್ಲೇ ಆಫ್ ಕನಸು ಕಾಣ್ತಿರುವ ಆರ್​ಸಿಬಿಗೆ ಇದು ಆತಂಕದ ಸುದ್ದಿ..!

author-image
Ganesh
Updated On
ಆರ್​​​ಸಿಬಿ, ಗುಜರಾತ್​ ನಡುವಿನ ಪಂದ್ಯ ದಿಢೀರ್​ ರದ್ದು? ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!
Advertisment
  • ಕಪ್ ಎತ್ತು ಕನಸನ್ನು ಇನ್ನೂ ಇಟ್ಟುಕೊಂಡಿರುವ ಆರ್​ಸಿಬಿ
  • ಮುಂದಿನ 4 ಪಂದ್ಯಗಳನ್ನು ಗೆಲ್ಲಲೇಬೇಕಿದೆ ಬೆಂಗಳೂರು ತಂಡ
  • ಒಂದು ವೇಳೆ ಹೀಗಾದರೆ ಪ್ಲೇ-ಆಫ್ ಕನಸು ಭಗ್ನಗೊಳ್ಳಲಿದೆ

10 ಪಂದ್ಯಗಳನ್ನು ಆಡಿ ಮೂರು ಪಂದ್ಯಗಳಲ್ಲಿ ಗೆದ್ದುಕೊಂಡಿರುವ ಆರ್​ಸಿಬಿ ಇನ್ನೂ ಪ್ಲೇ-ಆಫ್ ಕನಸು ಕಾಣುತ್ತಿದೆ. ಉಳಿದಿರುವ ಪಂದ್ಯಗಳನ್ನು ಅಂದುಕೊಂಡಂತೆ ಆಡಿದರೆ, ಜೊತೆಗೆ ಅದೃಷ್ಟವೂ ಕೈಹಿಡಿದರೆ ಆರ್​ಸಿಬಿ ಪ್ಲೇ-ಆಫ್​ಗೆ ಹೋಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

Advertisment

ಇದೀಗ ಆರ್​ಸಿಬಿ ಅಭಿಮಾನಿಗಳಲ್ಲಿ, ತಂಡದಲ್ಲಿ ಒಂದು ಸಣ್ಣ ಆತಂಕ ಕಾಡಲು ಶುರುಮಾಡಿದೆ. ಅದು ಏನೆಂದರೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ. ಹೌದು ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರಲ್ಲಿ ಸಂಜೆ ಮತ್ತು ರಾತ್ರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯ ನಡೆಯುವ ವೇಳೆ ಭರ್ಜರಿಯಾಗಿ ಮಳೆ ಬಂದರೆ ರದ್ದಾಗುವ ಸಾಧ್ಯತೆ ಇದೆ. ಅಂದ್ಹಾಗೆ ನಾಳೆ ಆರ್​ಸಿಬಿ ತಂಡವು ಗುಜರಾತ್ ಟೈಟನ್ಸ್ ತಂಡವನ್ನು ಚಿನ್ನಸ್ವಾಮಿ ಮೈದಾನದಲ್ಲಿ ಎದುರಿಸುತ್ತಿದೆ.

ಇದನ್ನೂ ಓದಿ:ರಾಯ್ ಬರೇಲಿಯಿಂದ ರಾಹುಲ್ ಸ್ಪರ್ಧೆ.. ಅಮೇಥಿ ಕ್ಷೇತ್ರ ಬೇರೆಯವರಿಗೆ ಬಿಟ್ಟುಕೊಟ್ಟ ಗಾಂಧಿ ಕುಟುಂಬ!

publive-image

ಒಂದು ವೇಳೆ ಮಳೆ ಜೋರಾಗಿ ಬಂದರೆ, ಪಂದ್ಯ ರದ್ದಾದರೆ ಆರ್​ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಈ ವಿಚಾರ ಆರ್​ಸಿಬಿ ಹಾಗೂ ಅಭಿಮಾನಿಗಳಲ್ಲಿ ಭಾರೀ ಆತಂಕವನ್ನು ಮಾಡುತ್ತಿದೆ. ಒಂದು ವೇಳೆ ಮಳೆ ಬಂದರೆ ಏನ್ ಗತಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು, ಆರ್​ಸಿಬಿಗೆ ಉಳಿದಿರೋದು ಕೇವಲ 4 ಪಂದ್ಯಗಳು ಮಾತ್ರ. ಆಡಿರೋ 10 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕ ಪಡೆದುಕೊಂಡಿದೆ. ತಂಡದ ರನ್​ ರೇಟ್​ ಕೂಡ ಸುಧಾರಿಸಿದೆ. ಆರ್​​ಸಿಬಿ ಇನ್ನೂ 4 ಪಂದ್ಯಗಳು ಆಡಲಿದ್ದು. 4ಕ್ಕೆ 4 ಗೆಲ್ಲಬೇಕಿದೆ. ಆಗ ಆರ್​​ಸಿಬಿಗೆ ಮತ್ತೆ 8 ಅಂಕ ದೊರೆಯಲಿದ್ದು, ಟೋಟಲ್​​ 14 ಪಾಯಿಂಟ್ಸ್​ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್​​ ಕನ್ಫರ್ಮ್​​. 14 ಅಂಕ ಪಡೆದ್ರೂ ಪ್ಲೇ ಆಫ್​ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್​ ಆಗಿರಲಿದೆ.

Advertisment

ಇದನ್ನೂ ಓದಿ:ಅಂತೂ ಇಂತೂ ಬೆಂಗಳೂರಿಗೆ ಕೃಪೆ ತೋರಿದ ಮಳೆರಾಯ.. ಇವತ್ತೂ ಕೂಡ ಮಳೆ ಬರುತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment