/newsfirstlive-kannada/media/post_attachments/wp-content/uploads/2024/05/rain22.jpg)
- ನಿನ್ನೆ ಸಂಜೆ ವೇಳೆಗೆ ಸಿಲಿಕಾನ್ ಸಿಟಿಯಲ್ಲಿ ಮಳೆ ಬಿದ್ದಿದೆ
- ‘ಇವತ್ತೂ ಮಳೆ ಬಂದರೆ..’ ಎಂಬ ನಿರೀಕ್ಷೆಯಲ್ಲಿ ಜನರು
- ಹವಾಮಾನ ಇಲಾಖೆ ಪ್ರಕಾರ ಇವತ್ತು ಮಳೆ ಬೀಳಲಿದ್ಯಾ?
ಬೆಂಗಳೂರು ಜನರಿಗೆ ಕೊನೆಗೂ ಮಳೆರಾಯ ಕೃಪೆ ತೋರಿದ್ದಾನೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ನಿನ್ನೆ ಸಂಜೆ ಮಳೆ ತಂಪೆರೆದಿದ್ದು, ಜನರು ಫುಲ್ ಖುಷಿಯಾಗಿದ್ದಾರೆ. ಅದರಂತೆ ಇಂದು ಸಂಜೆ ಕೂಡ ಮಳೆ ಬರುವ ನಿರೀಕ್ಷೆಯಿದ್ದು, ಒಂದು ವೇಳೆ ಇವತ್ತೂ ಕೂಡ ಮಳೆ ಬಂದರೆ ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್ ಆಗಲಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇಂದು ಕೂಡ ಬೆಂಗಳೂರಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ. ಕೇವಲ ಇವತ್ತು ಮಾತ್ರವಲ್ಲ ಇನ್ನೂ ಎರಡು ದಿನಗಳ ಕಾಲ ಮಳೆ ಬೀಳುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ. ಜೊತೆಗೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿದೆ.
ಎಲ್ಲೆಲ್ಲಿ ಮಳೆಯಾಗಿದೆ..?
ಕತ್ರಿಗುಪ್ಪೆ, ಚಾಮರಾಜಪೇಟೆ, ಹನುಮಂತನಗರ, ಸೀತಾ ಸರ್ಕಲ್, ಚೆನ್ನಮ್ಮನ ಅಚ್ಚುಕಟ್ಟು, ಹೊಸೂರು, ಮೈಸೂರು ರೋಡ್​​, ಎಲೆಕ್ಟ್ರಾನಿಕ್ ಸಿಟಿ, ಮೆಜೆಸ್ಟಿಕ್​, ಕೆ.ಆರ್.ಮಾರ್ಕೆಟ್, ರಾಜಾಜಿನಗರ, ಮಲ್ಲೇಶ್ವರಂ, ಕೆ.ಆರ್​ ಪುರಂ, ಹೊಸಕೋಟೆ, ಆರ್​.ಆರ್​ ನಗರ, ಕೆಂಗೇರಿ, ನಾಗರಬಾವಿ, ವಿಜಯನಗರ, ಕುರುಬರಹಳ್ಳಿ, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ