Advertisment

ಬೆಳ್ಳಂಬೆಳಗ್ಗೆ ಮಳೆ ತಂದ ಸಂಕಷ್ಟ.. ಕುಮಾರಸ್ವಾಮಿ‌ ಲೇಔಟ್ ರಸ್ತೆ ಜಲಾವೃತ

author-image
AS Harshith
Updated On
ಬೆಳ್ಳಂಬೆಳಗ್ಗೆ ಮಳೆ ತಂದ ಸಂಕಷ್ಟ.. ಕುಮಾರಸ್ವಾಮಿ‌ ಲೇಔಟ್ ರಸ್ತೆ ಜಲಾವೃತ
Advertisment
  • ಸಿಲಿಕಾನ್​​ ಸಿಟಿಯಲ್ಲಿ ಬೆಳಗಿನ ಜಾವ ಸುರಿದ ಮಳೆ
  • ಮನೆಗಳಿಗೆ ನುಗ್ಗಿದ ಮಳೆ ನೀರು.. ಪರದಾಡುತ್ತಿರುವ ಜನರು
  • ಯೆಲ್ಲೊ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಬೆಂಗಳೂರು: ಬೆಳಗಿನ ಜಾವ ಸುರಿದ ಮಳೆಗೆ ಸಿಲಿಕಾನ್​ ಸಿಟಿ ಮಂದಿ ಕಂಗಾಲಾಗಿದ್ದಾರೆ. ಪರಿಣಾಮ ಕುಮಾರಸ್ವಾಮಿ‌ ಲೇಔಟ್ ರಸ್ತೆ ಜಲಾವೃತಗೊಂಡಿದೆ.

Advertisment

ಮುಂಜಾನೆ ಸುರಿದ ವರುಣನಿಂದಾಗಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸದ್ಯ ಮಳೆ ನೀರನ್ನು ಹೊರಹಾಕಲು ನಿವಾಸಿಗಳು ಪರದಾಡಿದ್ದಾರೆ. ಅತ್ತ ಬಿಬಿಎಂಪಿ ಸಿಬ್ಬಂದಿಗಳು ಮನೆಗಳಿಗೆ ನುಗ್ಗಿದ ಮಳೆ ನೀರನ್ನು ತೆರವುಗೊಳಿಸುತ್ತಿದ್ದಾರೆ.

ಇದನ್ನೂ ಓದಿ: ಪಾತ್ ಟು ಪೇರೆಂಟ್​ಹುಡ್ ಸಮಾವೇಶಕ್ಕೆ ಇಂದೇ ಕೊನೆಯ ದಿನ; ವೈದ್ಯರ ಸಲಹೆ, ಸೂಚನೆಗಾಗಿ ಭೇಟಿ ನೀಡಿ

publive-image

ಸದ್ಯ ಬೆಂಗಳೂರು ವೆದರ್ ಫುಲ್ ಕೂಲ್ ಕೂಲ್ ಆಗಿದೆ. ಮುಂಜಾನೆಯಿಂದಲೇ ನಗರದದ ಹಲವೆಡೆ ಮಳೆ ಸುರಿದಿದೆ. ಮಳೆಯ ಅವಾಂತರ ನೋಡಿ ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ. ಬೆಳಗಾವಿ, ಧಾರವಾಡ. ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್' ಘೋಷಣೆ ಮಾಡಿದೆ.

Advertisment

ಇದನ್ನೂ ಓದಿ: ಸರ್ಕಾರಿ ಉದ್ಯೋಗ ಬೇಕಾ? ಕೂಡಲೇ ಅರ್ಜಿ ಸಲ್ಲಿಸಿ; ಸಂಬಳ ಬರೋಬ್ಬರಿ 177500 ರೂ!

13 ಜಿಲ್ಲೆಗಳಿಗೆ ಇಲಾಖೆಯು 'ಯೆಲ್ಲೊ ಅಲರ್ಟ್' ಘೋಷಣೆ ಮಾಡಿದೆ. ಈ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಪ್ರತಿ ಗಂಟೆಗೆ 35 ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಚಂಡಮಾರುತದ ವಾತಾವರಣ ಇರಲಿದೆ. ಮೀನುಗಾರರು ಎಚ್ಚರ ವಹಿಸಲು ಸೂಚನೆ ನೀಡಿದೆ.

ಸೋಮವಾರ ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸಾಧ್ಯತೆಯಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment