newsfirstkannada.com

ಫಲಿಸಿತು ಪ್ರಾರ್ಥನೆ.. ಬೆಂಗಳೂರಿಗೆ ತಂಪೆರದ ಮಳೆರಾಯ; ಬಿಸಿಲಿಗೆ ಬೆಂದು ಹೋದ ಸಿಟಿ ಕೂಲ್, ಕೂಲ್‌!

Share :

Published May 2, 2024 at 6:43pm

Update May 2, 2024 at 6:46pm

    ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣದೇವ

    ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿರು ಬಿಸಿಲಿನ ತಾಪಮಾನ ಜಾಸ್ತಿ

    ಜಿಟಿ ಜಿಟಿ ಮಳೆ ನೋಡಿ ಫುಲ್​ ಖುಷ್​ ಆದ ರಾಜಧಾನಿ ಜನರು

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿರು ಬಿಸಿಲಿನ ತಾಪಮಾನ ಜಾಸ್ತಿಯಾಗುತ್ತಿದೆ. ಮಧ್ಯಾಹ್ನದಲ್ಲಿ ಜನರು ಮನೆಯಿಂದ ಹೊರ ಬರೋದಕ್ಕೂ ಭಯ ಪಡುವಂತ ಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಜನರಿಗೆ ಕೂನೆಗೂ ಮಳೆರಾಯ ತಂಪೆರೆದಿದ್ದಾನೆ.

ಇದನ್ನೂ ಓದಿ: ಬೆಂಗಳೂರಿಗೆ ಬಿಗ್ ಶಾಕ್! ಮತ್ತೆ ಹೆಚ್ಚಾಗುತ್ತಿದೆ ಬಿರು ಬಿಸಿಲು; ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಇಷ್ಟು ದಿನ ಸಿಲಿಕಾನ್​ ಸಿಟಿ ಜನ ಮಳೆ ಯಾವಾಗ ಆಗುತ್ತೆ ಅಂತ ಕಾದು ಕುಳಿತ್ತಿದ್ದರು. ಆದರೆ ಇದೀಗ ಬೆಂಗಳೂರಿನ ಹಲವೆಡೆ ಜಿಟಿ ಜಿಟಿ ಮಳೆಯಾಗಿದೆ. ಇನ್ನು ಜಿಟಿ ಜಿಟಿ ಮಳೆಯಿಂದ ಸಿಲಿಕಾನ್​ ಸಿಟಿ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಸದ್ಯ ಬಿಸಿಲಿಗೆ ಬೆಂದು ಹೋದ ಸಿಲಿಕಾನ್ ಸಿಟಿ ಕೂಲ್ ಆಗಿದೆ.

ಇನ್ನು, ಮೇ ತಿಂಗಳ ಮೊದಲ ವಾರದಲ್ಲಿ ಬೆಂಗಳೂರು ಸೇರಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಬರಲಿದೆ ಎನ್ನಲಾಗಿದೆ. ಜೊತೆಗೆ ಬೆಂಗಳೂರು, ಮೈಸೂರು, ಹಾಸನ ಸೇರಿ ರಾಮನಗರ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕೂಡ ಭರ್ಜರಿ ಮಳೆ ಬೀಳಲಿದೆ ಎಂದು ಹವಾಮಾನ ತಜ್ಞರ ಮಾಹಿತಿ ನೀಡಿದ್ದಾರೆ. ಇನ್ನೊಂದು ವಿಚಾರ ಎಂದರೆ ಬೆಂಗಳೂರಿನಲ್ಲಿ ಇದೇ ವಾರದಲ್ಲಿ ಭರ್ಜರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಲಿಸಿತು ಪ್ರಾರ್ಥನೆ.. ಬೆಂಗಳೂರಿಗೆ ತಂಪೆರದ ಮಳೆರಾಯ; ಬಿಸಿಲಿಗೆ ಬೆಂದು ಹೋದ ಸಿಟಿ ಕೂಲ್, ಕೂಲ್‌!

https://newsfirstlive.com/wp-content/uploads/2023/07/bng-rain.jpg

Load More