Advertisment

ತಂಪೆರೆದ ಮಳೆರಾಯ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಭಾರೀ ಮಳೆ..?

author-image
Ganesh
Updated On
ಬೆಂಗಳೂರಿಗೆ ಮಳೆ ಬರೋದು ಯಾವಾಗ? ಒಂದು ವಾರದಿಂದ ಉರಿ ಬಿಸಿಲು.. ದಾಖಲೆಯ ತಾಪಮಾನ..!
Advertisment
  • ಬಿಸಿಲಿನಿಂದ ಕಂಗೆಟ್ಟ ಧಾರವಾಡ ಮಂದಿಗೆ ತಂಪೆರೆದ ವರುಣ
  • ಮಳೆಯಿಂದ ರಕ್ಷಣೆಗೆ ಮರದ ಕೆಳಗೆ ನಿಂತಿದ್ದ ಯುವಕ ಸಾವು
  • ಕಳೆದ ಮೂರು ದಿನಗಳಿಂದ ಸಿಡಿಲ ಅಬ್ಬರ ಜನ-ಜಾನುವಾರು ಬಲಿ

ದಿನದಿಂದ ದಿನಕ್ಕೆ ಏರುತ್ತಿದ್ದ ಬಿಸಿಲಿನ ತಾಪಮಾನಕ್ಕೆ ಜನ ರೋಸಿ ಹೋಗಿದ್ದರು. ಈ ಬಿರುಬಿಸಿಲಿನ ಶಾಖಕ್ಕೆ ಜನ ಹೈರಾಣಾಗಿರಬೇಕಾದ್ರೇನೇ ವರುಣ ನಾಲ್ಕೈದು ದಿನಗಳಿಂದ ರಾಜ್ಯದ ನಾನಾ ಕಡೆ ಧೋ ಅಂತ ಸುರಿಯುತ್ತಿದ್ದಾನೆ.

Advertisment

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ಹಲವೆಡೆ ಮಳೆ ಸುರಿದಿದ್ದು, ಬಿರುಬೇಸಿಗೆಯಿಂದ ಕಾದ ಕಾವಲಿಯಂತಾಗಿದ್ದ ಭೂಮಿ ತಂಪೆರೆದಿದೆ. ಮಳೆ ಜೊತೆಗೆ ಗುಡುಗು ಸಿಡಿಲು ಕೂಡ ಸಂಭವಿಸಿದೆ. ಎನ್.ಆರ್ ಪುರ ತಾಲೂಕಿನ ಅರಳಿಕೊಪ್ಪದ 48 ವರ್ಷದ ರೈತ ಶಂಕರ್​ ತೋಟಕ್ಕೆ ಹೋಗಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇತ್ತ ಬಯಲು ಭಾಗದ ತರೀಕೆರೆ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು ರಸ್ತೆಗಳ ಮೇಲೆ 2-3 ಅಡಿಗಳಷ್ಟು ನೀರು ಹರಿದಿದೆ.

ಮಳೆಯಿಂದ ರಕ್ಷಣೆಗೆ ಮರದ ಕೆಳಗೆ ನಿಂತಿದ್ದ ಯುವಕ ಸಾವು
ಯಾದಗಿರಿ ಜಿಲ್ಲೆಯ ಅಬ್ಬರದ ಮಳೆ ಸುರಿದಿದೆ. ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಿನ್ನೆ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮಳೆಯಿಂದ ರಕ್ಷಣೆಗೆ ಅಂತ ಮರದ ಕೆಳಗೆ ಯುವಕ ಮಂಜುನಾಥ್ ನಿಂತಿದ್ದ. ಇದೇ ವೇಳೆ ಸಿಡಿಲು ಬಡಿದು ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕಳೆದ ಮೂರು ದಿನಗಳಿಂದ ಸಿಡಿಲ ಅಬ್ಬರ ಜನ-ಜಾನುವಾರು ಬಲಿ
ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಿಡಿಲ ಅಬ್ಬರ ಜೋರಾಗಿದೆ. ಇನ್ನೂ ಸಿಡಿಲ ಬಡಿತಕ್ಕೆ ಲಾಳಸಂಗಿ ಗ್ರಾಮದ ರೈತ ಕಾಸಿಮ್ ಬಾಗವಾನ್ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ.

Advertisment

ಕೊಪ್ಪಳದಲ್ಲಿ ಹಲವಡೆ ಗುಡುಗು-ಸಿಡಿಲು ಸಹಿತ ಮಳೆರಾಯನ ಅಬ್ಬರ
ಕೊಪ್ಪಳದ ಹಲವಡೆ ಗುಡುಗು-ಸಿಡಿಲು ಸಹಿತ ಮಳೆರಾಯ ಅಬ್ಬರ ಜೋರಾಗಿದೆ. ಸಿಡಿಲು ಬಡಿತದಿಂದಾಗಿ ಕನಕಗಿರಿ ತಾಲೂಕಿನ ನವಲಿ ತಾಂಡದಲ್ಲಿರುವ ದುರ್ಗಾದೇವಿಯ ದೇವಸ್ಥಾನದ ಗೋಪುರ ಕುಸಿದಿದೆ. ಸಿಡಿಲಿನ ಹೊಡೆತಕ್ಕೆ ಗೋಪುರದ ಮೇಲ್ಬಾಗ ಸಂಪೂರ್ಣ ಬಿರುಕು ಬಿಟ್ಟು ಕುಸಿತಕಂಡಿದೆ. ಗೋಪುರದ ಕುಸಿತದಿಂದಾಗಿ ಭಕ್ತರು ಆತಂಕದಲ್ಲಿದ್ದಾರೆ.

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಜೋರಾಗಿದೆ. ಕಾದು ಕೆಂಡದಾಂತದ ಭೂಮಿಗೆ ಸುಮಾರು ಅರ್ಧ ಗಂಟೆಗಳ ಕಾಲ ಮಳೆರಾಯ ತಾಂಡವವಾಡಿ ತಂಪೆರೆದಿದ್ದಾನೆ. ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿದೆ.

ಬಿಸಿಲಿನಿಂದ ಕಂಗೆಟ್ಟ ಧಾರವಾಡ ಮಂದಿಗೆ ತಂಪೆರೆದ ವರುಣ
ಪೇಡಾನಗರಿ ಧಾರವಾಡದಲ್ಲಿ ಧಾರಾಕಾರವಾಗಿ ಮೊದಲ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟ ಧಾರವಾಡ ಮಂದಿಗೆ ವರುಣದೇವ ತಂಪೆರೆದಿದ್ದಾನೆ. ಮಳೆಯ ಆಗಮನದಿಂದ ಧಾರವಾಡದಲ್ಲಿ ಫುಲ್ ಕೂಲ್ ಆದ ವಾತಾವರಣ ಇದೆ.

Advertisment

ಇದನ್ನೂ ಓದಿ: ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್​​ನಲ್ಲಿ ಸೀತಾ, ಗೀತಾ.. ಇಬ್ಬರು ಆಟಗಾರರ ಸಿಕ್ರೇಟ್​ ರಿವೀಲ್ ಮಾಡಿದ ಕೊಹ್ಲಿ..!

ಮಲೆನಾಡಿಗೆ ತಂಪೆರೆದ ವರುಣ, ರೈತರ ಮುಖದಲ್ಲಿ ಮಂದಹಾಸ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ವರುಣರಾಯನ ಎಂಟ್ರಿ ಕೊಟ್ಟಿದ್ದು, ಬಿಸಿಲಿನಲ್ಲಿ ಬೆಂದ ಮಲೆನಾಡಿಗೆ ಮಳೆರಾಯ ತಂಪೆರೆದಿದ್ದಾನೆ. ಹಲವು ದಿನಗಳಿಂದ ಮಳೆ ಇಲ್ಲದೇ ಕಂಗೆಟ್ಟಿದ್ದು, ಗುಡುಗು ಸಹಿತ ಸುರಿದ ಮಳೆಗೆ ಶಿವಮೊಗ್ಗ, ತೀರ್ಥಹಳ್ಳಿ ತಾಲೂಕು ಭಾಗದ ರೈತರ ಮಂದಹಾಸ ಮೂಡಿದೆ.

ಬಿಸಿಲ ನಾಡಲ್ಲಿ ಎರಡು ದಿನಗಳಿಂದ ಮಧ್ಯಾಹ್ನ ವೇಳೆ ಮಳೆ ಎಂಟ್ರಿ
ಕಳೆದೆರಡು ದಿನಗಳಿಂದ ಬಿಸಿಲ ನಾಡು ಬಾಗಲಕೋಟೆಗೆ ಮಧ್ಯಾಹ್ನ ವೇಳೆ ಮಳೆ ಸುರಿಸುತ್ತಾ ವರುಣದೇವ ತಂಪೆರೆದಿದ್ದು, ತುಂತುರು ಮಳೆಯಿಂದ ಬಾಗಲಕೋಟೆ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ಗುಡುಗು ಮಿಂಚು ಸಹಿತ ಅರ್ಧ ಗಂಟೆಯಿಂದ ಜಿಟಿಜಿಟಿ ಮಳೆ ಸುರಿದಿದೆ. ಒಟ್ಟಾರೆ ರಾಜ್ಯದಲ್ಲಿ ಬೇಸಿಗೆ ಕಾಲದಲ್ಲೇ ಮಳೆಗಾಲ ಶುರುವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment