/newsfirstlive-kannada/media/post_attachments/wp-content/uploads/2024/06/IND-VS-SA-2.jpg)
ಇಂದು ಬಾರ್ಬಡೋಸ್ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ, ಟೀಮ್ ಇಂಡಿಯಾ ಮುಖಾಮುಖಿ ಆಗಲಿದ್ದು, ಮ್ಯಾಚ್ಗೆ ಮಳೆ ಅಡ್ಡಿಯಾಗಲಿದೆ ಎಂದು ತಿಳಿದು ಬಂದಿದೆ.
ಸದ್ಯ ವೆಸ್ಟ್ ಇಂಡೀಸ್ನಲ್ಲಿ ಭಾರೀ ಮಳೆಯಾಗುತ್ತಿದೆ. ಬಾರ್ಬಡೋಸ್ನಲ್ಲೂ ಸುಮಾರು 90 ಪ್ರತಿಶತದಷ್ಟು ಮಳೆ ಸುರಿಯುತ್ತಿದೆ. ಟಿ20 ವಿಶ್ವಕಪ್ 2024ರ ಫೈನಲ್‌ಗೆ ಮೀಸಲು ದಿನ ಇರಿಸಲಾಗಿದ್ದು, ಮಳೆ ನಿಲ್ಲದ ಕಾರಣ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಒಂದು ವೇಳೆ ರದ್ದಾದ್ರೆ ನಾಳೆ ಫೈನಲ್ ಪಂದ್ಯ ನಡೆಯಲಿದೆ.
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ 6 ಗೆಲುವು ಸಾಧಿಸಿತ್ತು. ಗ್ರೂಮ್ ಸ್ಟೇಜ್ನಲ್ಲಿ ಟೀಮ್ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್ ಇಂಡಿಯಾ ಸೆಮಿ ಫೈನಲ್‌ಗೆ ಎಂಟ್ರಿ ನೀಡಿತ್ತು. ಬಳಿಕ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದು ಈಗ ಸೌತ್ ಆಫ್ರಿಕಾ ವಿರುದ್ಧ ಫೈನಲ್ಸ್ ಆಡಲಿದೆ.
ಇದನ್ನೂ ಓದಿ: ಸೌತ್ ಆಫ್ರಿಕಾ ವಿರುದ್ಧ ಗೆಲ್ಲಲು ಭಾರತದ ಬಳಿ ಇದೆ ಅತಿ ದೊಡ್ಡ ಬ್ರಹ್ಮಾಸ್ತ್ರ.. ಏನದು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ