/newsfirstlive-kannada/media/post_attachments/wp-content/uploads/2024/06/CKM-RAIN-1.jpg)
ಕಳೆದೊಂದು ವಾರದಿಂದ ಬಿಡುವು ನೀಡಿದ್ದ ವರುಣ ಮಲೆನಾಡು ಸೇರಿ ಹಲವೆಡೆ ಮತ್ತೆ ಅಬ್ಬರಿಸಿದ್ದಾನೆ. ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ರೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ..
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮುಂಗಾರು ಆರಂಭ ಆಗ್ತಿದ್ದಂತೆ ಮಲೆನಾಡು ಈಗ ಮಳೆನಾಡು ಆಗಿ ಬದಲಾಗಿದೆ. ಕಳೆದೊಂದು ವಾರದಿಂದ ವಿರಾಮದಲ್ಲಿದ್ದ ವರುಣ ಮತ್ತೆ ಆರ್ಭಟ ಶುರು ಮಾಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರಿ ವರ್ಷಧಾರೆಗೆ ಸಮಸ್ಯೆಗಳು ಸೃಷ್ಟಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ, ಹೊರನಾಡು, ಬಾಳೆಹೊನ್ನೂರು ಸೇರಿ ಹಲವೆಡೆ ವರುಣ ಅಬ್ಬರಿಸ್ತಿದ್ದಾನೆ. ಕಳಸ ಬಳಿಯ ಮಹಲ್ಗೊಡು ಸೇತುವೆಯಲ್ಲಿ ಹಳ್ಳ ಉಕ್ಕಿ ಹರಿದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ. ಬಾಳೆಹೊನ್ನೂರು-ಕಳಸ-ಹೊರನಾಡು ಹಾಗೂ ಮಂಗಳೂರಿಗೆ ತೆರಳುವ ಸಂಚಾರ ಅಸ್ತವ್ಯಸ್ತವಾಗಿದೆ. ಇದಲ್ಲದೇ ಮಹಲ್ಗೋಡು ಸೇತುವೆಯನ್ನು ಸ್ವಚ್ಛತೆ ಮಾಡಿಲ್ಲ. ಹಲವು ವರ್ಷಗಳಿಂದ ಹೊಸ ಸೇತುವೆ ಮಾಡಿ ಅನ್ನೋ ಬೇಡಿಗೆಗೂ ಸ್ಪಂದಿಸಿಲ್ಲ ಅಂತಾ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆಯನ್ನು ಅನುಭವಿಸ್ತೇವೆ. ಹಳ್ಳದ ನೀರು ಹರಿದು ಅವಾಂತರವೇ ಸೃಷ್ಟಿಯಾಗುತ್ತದೆ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?
ಅತ್ತ ಕಗ್ಗನಳ್ಳ, ಬಾಳೆಹೊಳೆಯಲ್ಲಿಯೂ ಭಾರಿ ಮಳೆ ಸುರಿಯುತ್ತಿದೆ. ಪಂಚವಟಿ ಎಸ್ಟೇಟ್​​​ನಲ್ಲಿರುವ ಮನೆಗಳಿಗೆ ನೀರು ನುಗ್ಗಿ ಆವಾಂತರವೇ ಸೃಷ್ಟಿಯಾಗಿದೆ. ಮಲೆನಾಡಿನ ಚಾರ್ಮಾಡಿ ಘಾಟ್, ಬಣಕಲ್, ಬಾಳೂರು ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗಿದ್ದು ಹೆಟ್​​ಲೈಟ್ ಹಾಕಿಕೊಂಡು ಕೆಲವು ವಾಹನ ಸಂಚರಿಸಿದ್ರೆ ಇನ್ನೂ ಕೆಲವು ವಾಹನಗಳು ಕೊಟ್ಟಿಗೆಹಾರದಲ್ಲೇ ಬೀಡುಬಿಟ್ಟಿವೆ. ಅಬ್ಬರದ ಮಳೆಗೆ ಜನಜೀವನವೇ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ:‘ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!
ಅತ್ತ ಕಲಬುರಗಿ ಜಿಲ್ಲೆಯ ಹಲವೆಡೆ ವರುಣನ ಅಬ್ಬರ ಮುಂದುವರಿದಿದೆ. ಧಾರಾಕಾರ ಮಳೆ ಬಿಸಿಲನಾಡಿಗೆ ತಂಪೆರೆದಿದೆ. ಅರ್ಧಗಂಟೆ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜನ ಪರದಾಟ ನಡೆಸಿದ್ರು. ಒಟ್ಟಾರೆ, ರಾಜ್ಯದ ಹಲವೆಡೆ ಮುಂಗಾರು ಮಳೆ ಚುರುಕಾಗಿದೆ. ಮತ್ತಷ್ಟು ಅವಾಂತರಗಳು ಸೃಷ್ಟಿಯಾಗುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ.
ಇದನ್ನೂ ಓದಿ:Karnataka Rain : ಕಾವೇರಿ ನದಿಯಲ್ಲಿ ಜೀವಕಳೆ.. ತುಂಬುತ್ತಿದೆ ಕೆಆರ್​ಎಸ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್