/newsfirstlive-kannada/media/post_attachments/wp-content/uploads/2024/05/KKR_SRH-1.jpg)
ಇಂದು ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಫೈನಲ್​​ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಕೆಕೆಆರ್​​, ಸನ್​ರೈಸರ್ಸ್​ ಹೈದರಾಬಾದ್​​​​ ಮುಖಾಮುಖಿ ಆಗಲಿವೆ.
ಒಂದೆಡೆ ಕ್ವಾಲಿಫೈಯರ್-1ರಲ್ಲಿ ಗೆದ್ದು ಬೀಗಿದ್ದ ಕೆಕೆಆರ್​​ ಮತ್ತೆ ಹೈದರಾಬಾದ್​​ ತಂಡವನ್ನು ಸೋಲಿಸಿ ಫೈನಲ್​​ ಪಂದ್ಯ ಆತ್ಮವಿಶ್ವಾಸದಲ್ಲಿದೆ. ಇನ್ನೊಂದೆಡೆ ಕೆಕೆಆರ್​ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳಲು ಹೈದರಾಬಾದ್​​​ ಎದುರು ನೋಡುತ್ತಿದೆ. ಈ ಮಧ್ಯೆ ಎರಡು ತಂಗಳಿಗೂ ಮಳೆ ಶಾಕ್​ ನೀಡಿದೆ.
ಯೆಸ್​​, ಹೈದರಾಬಾದ್​​ ಮತ್ತು ಕೆಕೆಆರ್​ ನಡುವಿನ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಶನಿವಾರ ಸಂಜೆ ಚೆನ್ನೈನಲ್ಲಿ ಭಾರೀ ಮಳೆಯಾಗಿದ್ದು, ಕೆಕೆಆರ್ ಅಭ್ಯಾಸದ ಪಂದ್ಯ ಕೂಡ ರದ್ದಾಗಿತ್ತು. ಹೀಗಾಗಿ ಇಂದು ನಡೆಯಲಿರೋ ಪಂದ್ಯಕ್ಕೂ ಮಳೆ ಅಡ್ಡಿಯಾಗಲಿದೆ ಎಂದು ವರದಿಯಾಗಿದೆ.
ಮಳೆಯಿಂದಾಗಿ ಪಂದ್ಯ ರದ್ದಾದ್ರೆ ಏನಾಗಲಿದೆ?
ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದ್ರೆ ಫೈನಲ್‌ಗಾಗಿ ಮೀಸಲು ದಿನ ಇದೆ. ಅಂದರೆ ನಾಳೆ ಫೈನಲ್​ ನಡೆಯಲಿದೆ. ಒಂದು ವೇಳೆ ಕೂಡ ಪಂದ್ಯ ರದ್ದಾದ್ರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಕೆಕೆಆರ್​​ಗೆ ಕಪ್​ ಸಿಗಲಿದೆ. ಇದು ಹೈದರಾಬಾದ್​​ಗೆ ಶಾಕಿಂಗ್​ ನ್ಯೂಸ್​ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us