newsfirstkannada.com

ಚೆನ್ನೈ, ಆರ್​​ಸಿಬಿ ನಡುವಿನ ಪಂದ್ಯ ದಿಢೀರ್​​ ಸ್ಥಗಿತ.. ಅಸಲಿಗೆ ಆಗಿದ್ದೇನು?

Share :

Published May 18, 2024 at 7:52pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

    ಇಂದು ಚೆನ್ನೈ ಸೂಪರ್​​ ಕಿಂಗ್ಸ್​, ಆರ್​​ಸಿಬಿ ತಂಡದ ಮಧ್ಯೆ ರೋಚಕ ಪಂದ್ಯ

    ಆರ್​​ಸಿಬಿ ಫಸ್ಟ್​ ಬ್ಯಾಟಿಂಗ್​​, ಚೆನ್ನೈ ಸೂಪರ್​ ಕಿಂಗ್ಸ್​​ ಟೀಮ್​ ಬೌಲಿಂಗ್​​!

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಕೆಕೆಆರ್​​, ರಾಜಸ್ತಾನ್​ ರಾಯಲ್ಸ್, ಸನ್​​ರೈಸರ್ಸ್​ ಹೈದರಾಬಾದ್​​ ಈಗಾಗಲೇ ಪ್ಲೇ ಆಫ್​ಗೆ ಹೋಗಿವೆ. ಉಳಿದ 1 ಸ್ಥಾನಕ್ಕಾಗಿ ಸಿಎಸ್​​ಕೆ, ಆರ್​​ಸಿಬಿ ತಂಡಗಳ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಇಂದು ನಡೆಯೋ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆದ್ದು ಪ್ಲೇ ಆಫ್​ ಪ್ರವೇಶ ಮಾಡಲೇಬೇಕು ಎಂದು ಚೆನ್ನೈ, ಆರ್​​ಸಿಬಿ ತಂಡಗಳು ಎದುರು ನೋಡುತ್ತಿವೆ.

ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ರುತುರಾಜ್​​ ಗಾಯಕ್ವಾಡ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಆರ್​​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ.

ಇನ್ನು, ಇಂದು ಗೆಲ್ಲಲೇಬೇಕಾದ ಕಾರಣ ಆರ್​​ಸಿಬಿ ಪ್ಲೇಯಿಂಗ್​ ಎಲೆವೆನ್​ನಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ವಿಲ್​ ಜಾಕ್ಸ್​ ಜಾಗಕ್ಕೆ ಮ್ಯಾಕ್ಸಿ ಬಂದಿದ್ದಾರೆ. ಸ್ವಪ್ನಿಲ್​ ಸಿಂಗ್​​ ಇಂಪ್ಯಾಕ್ಟ್​ ಪ್ಲೇಯರ್​ ಆಗಬಹುದು ಎಂದು ವರದಿಯಾಗಿದೆ.

ಬ್ಯಾಟಿಂಗ್​ ಶುರು ಮಾಡಿದ ಆರ್​​ಸಿಬಿ ಪರ ಎಂದಿನಂತೆ ಓಪನರ್ಸ್ ಆಗಿ ವಿರಾಟ್​ ಕೊಹ್ಲಿ, ಫಾಫ್​ ಡುಪ್ಲೆಸಿಸ್​ ಬಂದಿದ್ದಾರೆ. ಆರ್​​ಸಿ ಮೊಲದ ಮೂರು ಓವರ್​ಗಳಲ್ಲಿ 31 ರನ್​ ಸಿಡಿಸಿದೆ. ಕೊಹ್ಲಿ 19 ಮತ್ತು ಫಾಫ್​ 12 ರನ್​​ ಚಚ್ಚಿದ್ದಾರೆ. ಸದ್ಯ ಮಳೆ ಬಂದಿದ್ದು, ಪಂದ್ಯ ದಿಢೀರ್​​ ನಿಂತು ಹೋಗಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಮ್​ಗೆ ಮ್ಯಾಚ್​​ ನೋಡಲು ಬಂದ ಆರ್​​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಏನಾಯ್ತು?​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೆನ್ನೈ, ಆರ್​​ಸಿಬಿ ನಡುವಿನ ಪಂದ್ಯ ದಿಢೀರ್​​ ಸ್ಥಗಿತ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/Kohli_Faf_RCB.jpg

Load More