Advertisment

ಭೀಕರ ಮಳೆ, ಸಿಡಿಲು ಬಡಿದು 6 ಸಾವು, ಮುಂದುವರೆದ ವರುಣಾರ್ಭಟ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

author-image
Bheemappa
Updated On
ಭೀಕರ ಮಳೆ, ಸಿಡಿಲು ಬಡಿದು 6 ಸಾವು, ಮುಂದುವರೆದ ವರುಣಾರ್ಭಟ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Advertisment
  • ಹವಾಮಾನ ಇಲಾಖೆಯಿಂದ ರಾಜ್ಯಾದ್ಯಂತ ಯೆಲ್ಲೋ ಅಲರ್ಟ್​
  • ಮನೆಗೆ ಹೋಗುವಾಗ ಬಡಿದ ಸಿಡಿಲು ಸ್ಥಳದಲ್ಲೇ ಪ್ರಾಣ ಬಿಟ್ಟ ವ್ಯಕ್ತಿ
  • ರಸ್ತೆಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು, ಜನರಲ್ಲಿ ಆತಂಕ

ಹೈದರಾಬಾದ್, ರಂಗಾರೆಡ್ಡಿ ಜಿಲ್ಲೆ ಸೇರಿದಂತೆ ತೆಲಂಗಾಣದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಒಟ್ಟು 6 ಜನರು ಮೃತಪಟ್ಟಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರೆಯವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ತೆಲಂಗಾಣ ರಾಜ್ಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ.

Advertisment

ಇದನ್ನೂ ಓದಿ:ಇಂದು ಕೂಡ ಧಾರಾಕಾರ ಮಳೆ.. 4 ಜಿಲ್ಲೆಗಳಿಗೆ ಅಲರ್ಟ್; ಮನೆಗಳಿಗೆ ನುಗ್ಗಿದ ನೀರು, ಬೆಳೆ ಎಲ್ಲ ಜಲಾವೃತ

publive-image

ತೆಲಂಗಾಣದಲ್ಲಿ ಮಳೆ, ಸಿಡಿಲಿನಿಂದ 6 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಗದ್ವಾಲ್ ಜಿಲ್ಲೆಯಲ್ಲಿ ಅರಗಿದ್ದ ಗ್ರಾಮದ ರೈತ ನಲ್ಲ ರೆಡ್ಡಿ (28), ಕಾತೂರು ಗ್ರಾಮದ ವೇಮುಲ ರಾಜು (40) ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದೆ. ಮಲ್ದಕಲ್ ಮೂಲದ ಆದಿಲಕ್ಷ್ಮಿ (15), ವಿಕಾರಾಬಾದ್ ಜಿಲ್ಲೆಯ ಕಾರ್ತಿಕ್ (15) ಕೂಡ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮಂಚಿರ್ಯಾಲ ಜಿಲ್ಲೆಯಲ್ಲಿ ರೈತ ಜಕ್ಕುಳ ಭಾಸ್ಕರ್ ಗೌಡ್ (57) ಮನೆಗೆ ಹೋಗುವಾಗ ಸಿಡಿಲು ಬಡಿದಿದೆ. ದನ ಮೇಯಿಸುತ್ತಿದ್ದ ಪೆದ್ದಪಲ್ಲಿ ಜಿಲ್ಲೆಯ ಉಡುತ ನಾರಾಯಣ (58) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಿನೇಶ್ ಫೋಗಟ್​ಗೆ ಗೋಲ್ಡ್​ ಮೆಡಲ್​.. ಸಾವಿರ ಪದಕಗಳಿಗೆ ಇದೊಂದೇ ಸಮವೆಂದ ಕುಸ್ತಿಪಟು, ಭಾವುಕ 

Advertisment

ಹೈದರಾಬಾದ್ ನಗರ ಹಾಗೂ ರಂಗಾರೆಡ್ಡಿ ಜಿಲ್ಲೆಯ ವಿವಿಧ ಪ್ರದೇಶದಲ್ಲಿ ನಿರತಂರವಾಗಿ ಜೋರಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ರಸ್ತೆಗಳ ಅವೈಜ್ಞಾನಿಕ ಕಾಮಗಾರಿಯಿಂದ ಮಳೆನೀರೆಲ್ಲ ಮನೆಗಳಿಗೆ, ಅಂಗಡಿಗಳಿಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳಲ್ಲಿ ಓಡಾಡದಂತೆ ನೀರು ನಿಂತಿದ್ದು ಜೊತೆಗೆ ಮಳೆ ಕೂಡ ಬೀಳುತ್ತಿದ್ದರಿಂದ ಸಾರ್ವಜನಿಕರಿಗೆ ಏನು ಮಾಡಬೇಕೆಂದು ದೋಚುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಸರ್ಕಾರ ತುರ್ತು ಕೆಲಸಗಳಿಗೆ ಸಹಾಯವಾಣಿ ನಂಬರ್​ಗಳನ್ನ (040-21111111 ಮತ್ತು 9000113667) ತೆರೆದಿದೆ ಎಂದು ಹೇಳಲಾಗಿದೆ.

ಕೇವಲ 2 ಗಂಟೆಗಳಲ್ಲಿ ಸುಮಾರು 5 ಸೆಂ.ಮೀ ಮಳೆಯಾಗಿದ್ದು ಈ ವೇಳೆ ನಗರ ಅನೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಎಡೆಬಿಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ತೆಲಂಗಾಣ ಸರ್ಕಾರ ಹೈದರಾಬಾದ್ ನಗರ ಹಾಗೂ ರಂಗಾರೆಡ್ಡಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಇಂದು ಕೂಡ ಮಳೆ ಮುಂದುವರೆದಿದ್ದು ಹವಾಮಾನ ಇಲಾಖೆ ರಾಜ್ಯಾದ್ಯಂತ ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment