Advertisment

ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು.. ಬಾನೆಟ್​​​ನಲ್ಲಿ ಸಿಲುಕಿಕೊಂಡ ಒಂಟೆ.. ಏನಾಯಿತು ಗೊತ್ತಾ?

author-image
Bheemappa
Updated On
ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು.. ಬಾನೆಟ್​​​ನಲ್ಲಿ ಸಿಲುಕಿಕೊಂಡ ಒಂಟೆ.. ಏನಾಯಿತು ಗೊತ್ತಾ?
Advertisment
  • ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಒಂಟೆಯ ಆರ್ತನಾದ
  • ಕಾರನ್ನು ನಿಯಂತ್ರಣ ಮಾಡಲಾಗದೇ ಒಂಟೆಗೆ ಡಿಕ್ಕಿ ಮಾಡಿದ ಚಾಲಕ
  • ಒಂಟೆ ಮೇಲೆ ಸಿಲುಕಿಕೊಂಡಿದ್ದರಿಂದ ಕಾರಿನ ಮೇಲ್ಭಾಗವೆಲ್ಲ ಅಪ್ಪಚ್ಚಿ

ರಾಜಸ್ಥಾನ: ರಾತ್ರಿ ವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಟೆಯೊಂದು ಕಾರಿನ ಬಾನೆಟ್ ಮೇಲೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡು ಕಿರುಚಾಡಿದೆ. ಈ ಘಟನೆಯು ರಾಜಸ್ಥಾನದ ಹನುಮಾನ್‌ಗಢ ಪ್ರದೇಶದಲ್ಲಿ ನಡೆದಿದೆ.

Advertisment

ಇದನ್ನೂ ಓದಿ:ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್​ ಆಗಿರುವಂತೆ ಖಡಕ್ ವಾರ್ನಿಂಗ್

ರಾತ್ರಿ ಸಮಯದಲ್ಲಿ ಹೆದ್ದಾರಿಯಲ್ಲಿ ಕಾರು ವೇಗವಾಗಿ ಹೋಗುತ್ತಿರುವಾಗ ಒಂಟೆ ರಸ್ತೆಗೆ ಅಡ್ಡ ಬಂದಿದೆ. ವೇಗದಲ್ಲಿದ್ದ ಕಾರನ್ನು ನಿಲ್ಲಿಸಲಾಗದೇ ಒಂಟೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಬಾನೆಟ್ ಮೇಲೆ ಒಂಟೆ ಸಿಲುಕಿಕೊಂಡಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರೆಲ್ಲ ಸುರಕ್ಷಿವಾಗಿದ್ದು ಸಣ್ಣಪುಟ್ಟ ಗಾಯಗಳು ಆಗಿವೆ. ಒಂಟೆ ಮೇಲೆ ಕುಳಿತ್ತಿದ್ದರಿಂದ ಕಾರಿನ ಮುಂದಿನ ಗ್ಲಾಸ್ ಸೇರಿದಂತೆ ಎಲ್ಲ ಗ್ಲಾಸ್​ಗಳು ಒಡೆದು ಹೋಗಿವೆ. ಕಾರಿನ ಮೇಲ್ಭಾಗವೆಲ್ಲ ಅಪ್ಪಚ್ಚಿಯಾಗಿರುವುದು ವಿಡಿಯೋದಲ್ಲಿ ಕಂಡು ಬರು್ತದೆ.

ಇದನ್ನೂ ಓದಿ:TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?

Advertisment


">June 9, 2024

ಇನ್ನು ಘಟನೆಯಿಂದ ಒಂಟೆ ತೀವ್ರವಾಗಿ ಗಾಯಗೊಂಡಿದ್ದು ಕಾರಿನ ಬಾನೆಟ್ ಮೇಲೆ ಇರುವಾಗ ಒಂಟೆ ನೋವಿನಿಂದ ಕಿರುಚಿಕೊಳ್ಳಲು ಪ್ರಾರಂಭಿಸಿತ್ತು. ಮೇಲೆಕ್ಕೆ ಎದ್ದು ಬರಲಾಗದೇ ನೋವಿನಿಂದ ಕೂಗುತ್ತಿತ್ತು. ಬಳಿಕ ಸ್ಥಳೀಯರ ಸಹಾಯದಿಂದ ಕಾರಿನ ಮೇಲಿನಿಂದ ಒಂಟೆಯನ್ನು ಹೊರ ತೆಗೆಯಲಾಗಿದ್ದು ಅದಕ್ಕೆ ಕೆಲವು ಗಾಯಗಳು ಆಗಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment