ಕ್ರಿಕೆಟ್ ಲೋಕದಲ್ಲಿ ಈಗ ಇಂಡಿಯನ್ ಪ್ರೀಮಿಯರ್ ಲೀಗ್ನದ್ದೇ ಸದ್ದು
ವರ್ಷದ ಕೊನೆಗೆ ನಡೆಯಲಿರೋ 2025ರ ಐಪಿಎಲ್ ಮೆಗಾ ಹರಾಜು..!
ರಾಜಸ್ಥಾನ್ ರೀಟೈನ್ ಮಾಡಿಕೊಳ್ಳೋ ಮೂವರು ಆಟಗಾರರು ಯಾರು?
ಕ್ಯಾಪ್ಟನ್ ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಎರಡ್ಮೂರು ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗಳಿಂದಲೂ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈ ತಂಡದಲ್ಲಿ ಅತೀ ಹೆಚ್ಚು ಯುವಕರೇ ಇದ್ದಾರೆ. ವರ್ಷದ ಕೊನೆಗೆ ಐಪಿಎಲ್ ಮೆಗಾ ಹರಾಜು ನಡೆಯಲಿದ್ದು, ಎಲ್ಲಾ ತಂಡಗಳಂತೆ ರಾಜಸ್ಥಾನ್ ರಾಯಲ್ಸ್ ಕೂಡ ರೀಟೈನ್ ಮಾಡಿಕೊಳ್ಳಬೇಕಿದೆ.
ಮುಂದಿನ ಐಪಿಎಲ್ ಸೀಸನ್ಗಾಗಿ ಬಲಿಷ್ಠ ತಂಡ ಕಟ್ಟಬೇಕು. ಅದಕ್ಕಾಗಿ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಬೇಕು. ಅಷ್ಟೇ ಅಲ್ಲ ಸದ್ಯ ತಂಡದಲ್ಲಿರೋ ಒಳ್ಳೆಯ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು ಎಂದು ನಿರ್ಧಾರಕ್ಕೆ ಬಂದಿದೆ. ಹಾಗಾಗಿ ಮೂವರು ಯುವ ಆಟಗಾರರನ್ನು ರಾಜಸ್ಥಾನ್ ರಾಯಲ್ಸ್ ಉಳಿಸಿಕೊಳ್ಳಲು ತಯಾರಿ ನಡೆಸಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಆಯ್ಕೆ ಕ್ಯಾಪ್ಟನ್ ಸಂಜು ಸ್ಯಾಮ್ಸನ್. ಇವರು ಟಾಪ್ ಆರ್ಡರ್ ಬ್ಯಾಟರ್ ಜತೆಗೆ ವಿಕೆಟ್ ಕೀಪರ್ ಕೂಡ ಹೌದು. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಕಳೆದ 4 ಆವೃತ್ತಿಗಳಲ್ಲಿ ಎರಡರಲ್ಲಿ ಪ್ಲೇ-ಆಫ್ಗೆ ಪ್ರವೇಶಿಸಿದೆ. 2022ರ ಸೀಸನ್ನಲ್ಲಿ ರನ್ನರ್ ಅಪ್ ಕೂಡ ಆಗಿತ್ತು.
ಸಂಜು ಸ್ಯಾಮ್ಸನ್ ಜತೆಗೆ ಮತ್ತಿಬ್ಬರು ರೀಟೈನ್!
ಇನ್ನು, ಸಂಜು ಸ್ಯಾಮ್ಸನ್ ಬಳಿಕ ಆರ್ಆರ್ ಉಳಿಸಿಕೊಳ್ಳೋ ಮತ್ತೋರ್ವ ಆಟಗಾರ ರಿಯಾನ್ ಪರಾಗ್. ಅಸ್ಸಾಂ ಮೂಲದ ಯುವ ಆಲ್ರೌಂಡರ್ ಐಪಿಎಲ್ 2024ರ ಸೀಸನ್ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ರು. ಇವರ ಜೊತೆಗೆ ಓಪನರ್ ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ್ ಉಳಿಸಿಕೊಳ್ಳಲಿದೆ. ಆರ್. ಅಶ್ವಿನ್, ಚಹಾಲ್ ಸೇರಿದಂತೆ ಹಲವು ಆಟಗಾರರನ್ನು ರಿಲೀಸ್ ಮಾಡಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಇನ್ಸ್ಟಾದಲ್ಲಿ ಆರ್ಸಿಬಿಯನ್ನು ಮ್ಯಾಕ್ಸ್ವೆಲ್ ಅನ್ಫಾಲೋ ಮಾಡಿದ್ದೇಕೆ..? ಇಲ್ಲಿದೆ ಅಸಲಿ ಕಾರಣ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್