newsfirstkannada.com

ಅಂತಿಂಥಾ ಕಳ್ಳನಲ್ಲ.. 110 ದಿನದಲ್ಲಿ 200 ವಿಮಾನದಲ್ಲಿ ಪ್ರಯಾಣ; ಲೇಡಿ ಪ್ರಯಾಣಿಕರೇ ಇವನ ಟಾರ್ಗೆಟ್‌!

Share :

Published May 14, 2024 at 4:48pm

Update May 14, 2024 at 4:38pm

  ವಿಮಾನದಲ್ಲಿ ಪ್ರಯಾಣಿಕರ ಬ್ಯಾಗ್​ನಿಂದ ಬೆಲೆಬಾಳುವ ವಸ್ತುಗಳು ಮಂಗಮಾಯ

  ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಜೂಜಿಗೆ ಖರ್ಚು ಮಾಡುತ್ತಿದ್ದ ಆರೋಪಿ

  ವಿಮಾನ ನಿಲ್ದಾಣಗಳ ಸಿಸಿಟಿವಿ ದೃಶ್ಯಗಳಿಂದ ಖತರ್ನಾಕ್​ ಕಳ್ಳ ಪೊಲೀಸ್ ಬಲೆಗೆ

ರಸ್ತೆಯಲ್ಲಿ ಹೋಗುತ್ತಿದ್ದಾಗ, ಬಸ್ಸು, ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳರು ಫೋನ್​, ಲೇಡೀಸ್ ಪರ್ಸ್, ಚಿನ್ನದ ಸರ​ ಹೀಗೆ ಹಲವಾರು ವಸ್ತುಗಳನ್ನು ಕಳ್ಳತನ ಮಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರ ಕೈ ಚೀಲಗಳಿಂದ ಚಿನ್ನಾಭರಣ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದವನು ಪೊಲೀಸ್​ ಬಲೆಗೆ ಸಿಕ್ಕಿಬಿದ್ದಿದ್ದಾನೆ.

40 ವರ್ಷದ ರಾಜೇಶ್ ಕಪೂರ್ ಎಂಬಾತ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರ ಬ್ಯಾಗ್​ನಿಂದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಜೇಶ್ ಕಪೂರ್ ಸುಮಾರು 200 ವಿಮಾನಗಳಲ್ಲಿ 110 ದಿನಗಳಿಗಿಂತ ಹೆಚ್ಚು ಕಾಲ ಪ್ರಯಾಣಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯ ವೀರಯೋಧ ಕೋಲ್ಕತ್ತಾದಲ್ಲಿ ನಿಗೂಢ ಸಾವು; ಹುಟ್ಟೂರಲ್ಲಿ ನೋವಿನ ವಿದಾಯ

ಕಳೆದ ಮೂರು ತಿಂಗಳಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಏಪ್ರಿಲ್ 11ರಂದು ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದರು. ಫೆಬ್ರವರಿ 2ರಂದು ಮತ್ತೊಂದು ಕಳ್ಳತನ ವರದಿಯಾಗಿದ್ದು, ಅಮೃತಸರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 20 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕಳೆದುಕೊಂಡಿದ್ದರು. ಹೀಗಾಗಿ ನಾವು ಐಜಿಐ ವಿಮಾನ ನಿಲ್ದಾಣದಿಂದ ಅಪರಾಧಿಗಳನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ದೆಹಲಿ ಮತ್ತು ಅಮೃತಸರ ವಿಮಾನ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾಗ ಈ ಕೇಸ್​ನ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಇನ್ನು, ಪರಿಶೀಲನೆ ವೇಳೆ ಆರೋಪಿಯೂ ಟಿಕೆಟ್​ ಬುಕ್ಕಿಂಗ್ ವೇಳೆ ನಕಲಿ ಫೋನ್​ ನಂಬರ್​ ಒದಗಿಸಿದ್ದ ಅಂತ ಅಧಿಕಾರಿಯೊಬ್ಬರು ಪತ್ತೆ ಹಚ್ಚಿದ್ದಾರೆ. ಬಳಿಕ ನಿರಂತವಾಗಿ ವಿಚಾರಣೆಯ ಬಳಿಕ ಆರೋಪಿಯನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆರೋಪಿಯೂ ಹೈದರಾಬಾದ್‌ನ ಒಂದು ಕೇಸ್​ ಸೇರಿದಂತೆ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಜೊತೆಗೆ ಆ ಹಣವನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಜೂಜಿಗೆ ಖರ್ಚು ಮಾಡಿದ್ದೇನೆ ಅಂತ ಎಂದು ಪೊಲೀಸರ ಮುಂದೆ ಅಸಲಿ ವಿಚಾರ ಬಾಯ್ಬಿಟ್ಟಿದ್ದಾನೆ. ಮತ್ತೆ ಈ ಕಳ್ಳತನದಲ್ಲಿ ಭಾಗಿಯಾದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳನು ಅಂತಾರಾಷ್ಟ್ರೀಯ ಪ್ರಯಾಣಿಸುವ ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಅಂತ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂತಿಂಥಾ ಕಳ್ಳನಲ್ಲ.. 110 ದಿನದಲ್ಲಿ 200 ವಿಮಾನದಲ್ಲಿ ಪ್ರಯಾಣ; ಲೇಡಿ ಪ್ರಯಾಣಿಕರೇ ಇವನ ಟಾರ್ಗೆಟ್‌!

https://newsfirstlive.com/wp-content/uploads/2024/05/arrested1.jpg

Load More