/newsfirstlive-kannada/media/post_attachments/wp-content/uploads/2024/08/RAJANI_UPENDRA.jpg)
ಸೂಪರ್​​ ಸ್ಟಾರ್​​ ರಜನಿಕಾಂತ್​ ಅಭಿನಯದ ‘ಜೈಲರ್​’ ಮೂವಿ ಬಾಕ್ಸ್​​ ಆಫೀಸ್​ನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡಿತ್ತು. ಸಿನಿಮಾ ನೋಡಿದ ಆಭಿಮಾನಿಗಳಂತೂ ಸಖತ್ ಎಂಜಾಯ್ ಮಾಡಿದ್ರು. ಇದರ ಬೆನ್ನಲ್ಲೇ ಡೈರೆಕ್ಟರ್​ ಲೋಕೇಶ್ ಕನಕರಾಜ್ ಜೊತೆ ಸೇರಿ ಕೂಲಿ ಎನ್ನುವ ಸಿನಿಮಾ ನಿರ್ಮಾಣಕ್ಕೆ ರಜನಿಕಾಂತ್ ಕೈ ಹಾಕಿದ್ದರು. ಇದೀಗ ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿ ಜೊತೆ ಸ್ಯಾಂಡಲ್​ವುಡ್​ ಸ್ಟಾರ್ ಉಪೇಂದ್ರ ಅವರು ಅಭಿನಯ ಮಾಡಲಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು ರಜನಿಕಾಂತ್ ಸೇರಿದಂತೆ ಹಲವು ಕಲಾವಿದರು ಮೂವಿಯಲ್ಲಿದ್ದಾರೆ. ಇದರ ಜೊತೆಗೆ ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್ ಉಪೇಂದ್ರ ಕೂಡ ಕೂಲಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಕೂಲಿ ಚಿತ್ರತಂಡವನ್ನ ಉಪೇಂದ್ರ ಅವರು ಸೇರಿಕೊಳ್ಳಲಿದ್ದಾರೆ. ಆದರೆ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನು ತಿಳಿದು ಬಂದಿಲ್ಲ.
ಇದನ್ನೂ ಓದಿ: ಚನ್ನಪಟ್ಟಣ ಬೈಎಲೆಕ್ಷನ್​ಗೆ ರೆಡಿಯಾದ್ರಾ ನಿಖಿಲ್ ಕುಮಾಸ್ವಾಮಿ..? ‘ಸೈನಿಕ’ ಬಿಗಿ ಪಟ್ಟು, ದಳಪತಿ ದಂಡಯಾತ್ರೆ
/newsfirstlive-kannada/media/post_attachments/wp-content/uploads/2024/04/rajanikatha.jpg)
ಸದ್ಯ ಉಪೇಂದ್ರ ಅವರು ಯುಐ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ನಲ್ಲಿ ಬ್ಯುಸಿ ಇದ್ದಾರೆ. ಒಂದು ಕಡೆ ಕೂಲಿ ಚಿತ್ರದಲ್ಲಿ ಒಟ್ಟಿಗೆ ರಜಿನಿಕಾಂತ್, ಉಪೇಂದ್ರ ಅಭಿನಯ ಮಾಡಲಿದ್ದಾರೆ. ಮತ್ತೊಂದು ಕಡೆ ಒಂದೇ ತಿಂಗಳಲ್ಲಿ ಇಬ್ಬರ ಬಹು ನಿರೀಕ್ಷಿತ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅ.10ಕ್ಕೆ ವಿಶ್ವದಾದ್ಯಂತ ರಜನಿಕಾಂತ್ ಅವರ ವೇಟ್ಟೆಯನ್ ರಿಲೀಸ್ ಆಗಲಿದೆ. ಇದೇ ತಿಂಗಳಲ್ಲೇ ಉಪೇಂದ್ರ ಅವರ ಯು ಐ ಕೂಡ ರಿಲೀಸ್ ಆಗಲಿದೆ. ಹೀಗಾಗಿ ಅಕ್ಟೋಬರ್​ನಲ್ಲಿ ರಜನಿ ಹಾಗೂ ಉಪೇಂದ್ರ ಬಾಕ್ಸ್​ ಆಫೀಸ್​ನಲ್ಲಿ ಬಿಗ್ ಫೈಟ್ ಮಾಡಲಿದ್ದಾರೆ.
ಕೂಲಿ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿದ್ದು, ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ. ಜೈಲರ್ ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಸಂಸ್ಥೆ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಈಗಾಗಲೇ ಕಾಲಿವುಡ್‌ನಲ್ಲಿ ಲಿಯೋ, ಮಾಸ್ಟರ್, ಖೈದಿ, ವಿಕ್ರಮ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಯಶಸ್ವಿ ಕಂಡಿರುವ ಲೋಕೇಶ್ ಕನಕರಾಜ್, ಈ ಬಾರಿ ರಜನಿಕಾಂತ್ ಜೊತೆಗೆ ಕೈಜೋಡಿಸಿದ್ದು ಮತ್ತೊಮ್ಮೆ ಸಕ್ಸಸ್​ ಪಕ್ಕಾ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us