newsfirstkannada.com

ಆಟ ಆಡಲು ಹೋಗಿ ಮಕ್ಕಳು ಸೇರಿ 35ಕ್ಕೂ ಹೆಚ್ಚು ಮಂದಿ ಸಾವು; ಅಸಲಿಗೆ ಆಗಿದ್ದೇನು?

Share :

Published May 27, 2024 at 6:10am

    ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನೂ ಬಲಿ ಪಡೆದ ರಣಜ್ವಾಲೆ

    ಗೇಮಿಂಗ್ ಝೋನ್ ಎದುರು ಮಗನ ಬೈಕ್ ಇದೆ, ಮಗನೇ ಇಲ್ಲ

    ಗೇಮಿಂಗ್ ಸೆಂಟರ್‌ ಅಗ್ನಿ ಅವಘಡದ ತನಿಖೆಗೆ ಎಸ್‌ಐಟಿ ರಚನೆ

ಅದು ಗುಜರಾತ್‌ನ ಅತ್ಯಂತ ಫೇಮಸ್ ವೀಕೆಂಡ್ ವೀಕೆಂಡ್ ಸ್ಪಾಟ್. ಮಕ್ಕಳಾದಿಯಿಂದ ವೃದ್ಧರವರೆಗೂ ಅಲ್ಲಿಗೆ ಹೋಗಿ ಆಟವಾಡಿ ಮಸ್ತಿ ಮಾಡೋ ಜಾಗವದು. ಆದ್ರೆ, ಮೋಜಿನ ಜಾಗವಾಗಿದ್ದ ಆ ಗೇಮ್ ಸೆಂಟರ್ ಶನಿವಾರ ಅಕ್ಷರಶಃ ಸ್ಮಶಾನವಾಗಿ ಮಾರ್ಪಾಡಾಗಿದೆ. ದಿಢೀರಂತ ಭುಗಿಲೆದ್ದ ಬೆಂಕಿ ಎಲ್ಲವನ್ನೂ ಸರ್ವನಾಶ ಮಾಡಿದೆ. ಅಗ್ನಿಯ ರೌದ್ರತೆಯಲ್ಲಿ 35ಕ್ಕೂ ಹೆಚ್ಚು ಮಂದಿ ಸುಟ್ಟ ದಾರುಣವಾಗಿ ಸಾವು ಕಂಡಿದ್ದಾರೆ. ಇಷ್ಟು ದಿನ ಕುಟುಂಬ ಸಮೇತ ಎಂಜಾಯ್ ಮಾಡ್ತಿದ್ದ ಜಾಗದಲ್ಲೀಗ ಹೆಣಗಳ ರಾಶಿ ಬಿದ್ದಿದೆ.

ಶನಿವಾರ ವೀಕೆಂಡ್ ಮೂಡ್‌ನಲ್ಲಿದ್ದ ಮಂದಿಗೆ ಯಮನ ದರ್ಶನವಾಗಿದೆ. ತಮ್ಮ ಮಕ್ಕಳ ಜೊತೆ ಮನೆ ಮಂದಿಯನ್ನ ಕರ್ಕೊಂಡು ಆಟವಾಡೋಕೆ ಬಂದಿದ್ದವರು ಸಾವಿನ ಮನೆಯ ಕದ ತಟ್ಟಿದ್ದಾರೆ. ವೆರೈಟಿ ವೆರೈಟಿ ಗೇಮ್‌ಗಳಿರೋ ಈ ಗೇಮಿಂಗ್ ಝೋನ್‌ನಲ್ಲಿ ಆಟವಾಡ್ಕೊಂಡು, ಒಳ್ಳೆ ಊಟ, ಫಾಸ್ಟ್‌ಫುಡ್ ತಿನ್ಕೊಂಡು ಹೋಗೋಕೆ ಬಂದಿದ್ದವರಿಗೆ ಜವರಾಯ ಬೆಂಕಿಯ ರೂಪದಲ್ಲಿ ಪ್ರತ್ಯಕ್ಷವಾಗಿದ್ದ. ನೋಡ ನೋಡ್ತಿದ್ದಂತೆ ಇಡೀ ಗೇಮಿಂಗ್ ಝೋನ್ ತುಂಬಾ ಜ್ವಾಲೆ. ಸಾವಿನ ಆಟವಾಡಲು ಭುಗಿಲೆದ್ದ ಜ್ವಾಲೆ. ಈ ರಣಜ್ವಾಲೆಗೆ ಸಿಲುಕಿದವರು ಅಕ್ಷರಶಃ ನರಳಿ ನರಳಿ ಉಸಿರುಚೆಲ್ಲಿದ್ದಾರೆ. ಈ ಬೆಂಕಿ ಅನಾಹುತದ ಸಾವಿನ ಸಂಖ್ಯೆ ಗಂಟೆ ಗಂಟೆಗೂ ಏರುತ್ತಿದೆ.

ಇದು ಗುಜರಾತ್‌ ರಾಜ್ಯದ ರಾಜ್‌ಕೋಟ್‌ನಲ್ಲಿರೋ ಟಿಐರ್‌ಪಿ ಹೆಸರಿನ ಗೇಮಿಂಗ್ ಝೋನ್‌. ಶನಿವಾರ ಇಲ್ಲಿಗೆ ಜನ ಕಿಕ್ಕಿರಿದು ಬಂದಿದ್ರು. ವೀಕೆಂಡ್‌ ಮೂಡ್‌ನಲ್ಲಿದ್ದವರಿಗೆ ಈ ಗೇಮಿಂಗ್ ಝೋನ್ ಬಂಪರ್ ಆಫರ್ ಕೂಡ ಕೊಟ್ಟಿತ್ತು. ಮಾಮೂಲಿಯಾಗಿ 500 ರೂಪಾಯಿ ಇರ್ತಿದ್ದ ಗೇಮಿಂಗ್ ಟಿಕೆಟನ್ನ ಶನಿವಾರ ಜಸ್ಟ್ 99 ರೂಪಾಯಿಗೆ ಇಳಿಸಲಾಗಿತ್ತು. 99 ರೂಪಾಯಿಗೆ ಭರ್ಜರಿ ಆಟ ಆಡ್ಬೋದು ಅಂತಾ ಆಸೆಯೊಂದಿಗೆ ಬಂದವರನ್ನು ಕೊಂದು ಮುಗಿಸಲು ಬೆಂಕಿ ರೂಪದಲ್ಲಿ ಯಮರಾಯ ಕಾದಿದ್ದ. ಇನ್ನು, ಬೆಂಕಿ ಆನಾಹುತಕ್ಕೆ 9ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ ಅನ್ನೋ ಬರಸಿಡಿಲನಂತಹ ಸುದ್ದು ಬಡಿದಿದೆ. ಜೀವನದಲ್ಲಿ ಅಪಾರ ಕನಸುಗಳನ್ನು ಹೊತ್ತಿದ್ದ ಯುವಕ, ಯುವತಿಯರನ್ನೂ ಬೆಂಕಿ ಆಹುತಿ ಪಡ್ಕೊಂಡಿದೆ. ಮನೆಗೆ ಆಸರೆಯಾಗಿದ್ದ ಅದೆಷ್ಟೋ ಯುವಕ, ಯುವತಿಯರು ದೇಹದ ಗುರುತು ಕೂಡ ಸಿಗದಂತೆ ಬೆಂದು ಹೋಗಿದ್ದಾರೆ.

ಇದನ್ನೂ ಓದಿ: ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

ಸಂಜೆ 5 ಗಂಟೆ 30 ನಿಮಿಷದ ಆಸುಪಾಸಲ್ಲಿ ಈ ಗೇಮಿಂಗ್ ಝೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಇಡೀ ಗೇಮಿಂಗ್ ಝೋನ್ ತುಂಬೆಲ್ಲಾ ಜ್ವಾಲೆ ಹಬ್ಬಿದೆ. ಎಲ್ಲವನ್ನೂ ಮರೆತು ಆಟವಾಡ್ತಿದ್ದ ಮಂದಿಗೆ ಬೆಂಕಿ, ಬೆಂಕಿ, ಬೆಂಕಿ ಎಂಬ ಕಿರುಚಾಟ ಕಿವಿಗೆ ಬೀಳ್ತಿದ್ದಂತೆ ಓಡಲು ಆರಂಭಿಸಿದ್ದಾರೆ. ಜೀವಭಯಕ್ಕೆ ಬಿದ್ದು ಕಂಡ ಕಂಡ ದಿಕ್ಕಿಗೆ ಜನ ಓಡಲು ಮುಂದಾದಾಗ ಕಾಲ್ತುಳಿತ ಸಂಭವಿಸಿದೆ. ಎಷ್ಟೋ ಮಂದಿ ಕೆಳಗೆ ಬಿದ್ದು ಓಡಲಾಗದೇ ಪರದಾಡಿದ್ದಾರೆ. ಪ್ರಾಣ ಭಯ ಬಿಟ್ಟ ಅದೆಷ್ಟೋ ತಂದೆ ತಾಯಿಯರು ತಮ್ಮ ಪುಟ್ಟ ಮಕ್ಕಳಿಗಾಗಿ ಹುಡುಕಾಡಲು ಹೋಗಿ ಬೆಂಕಿಗೆ ಸಿಲುಕಿದ್ದಾರೆ. ಇನ್ನು, ಗೇಮಿಂಗ್ ಝೋನ್‌ನಲ್ಲಿ ಕೆಲಸ ಮಾಡ್ತಿದ್ದವರೂ ಕೂಡ ಹೊರಗೆ ಹೋಗಲು ಜಾಗವಿಲ್ಲದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅಸುನೀಗಿದ್ದಾರೆ. ನೋಡ ನೋಡುತ್ತಲೇ ಇಡೀ ಗೇಮಿಂಗ್ ಝೋನ್ ಸ್ಮಶಾನವಾಗಿ ಮಾರ್ಪಾಡಾಗಿದೆ. ಬೆಂಕಿ ಅನಾಹುತದ ಭೀಕರತೆ ಎಷ್ಟಿತ್ತು ಎಂಬುದಕ್ಕೆ ಈ ದೃಶ್ಯಗಳೇ ಸಾಕ್ಷಿ. ಗೇಮಿಂಗ್ ಝೋನ್‌ನ ಅಗ್ನಿ ಅವಘಡದಲ್ಲಿ ಸಿಲುಕಿ ಗುರುತು ಸಿಗದಂತೆ ಬೆಂಕಿ ಹೋಗಿರೋರ ಮೃತ ದೇಹಗಳನ್ನು ಯಾವ ರೀತಿ ಮೂಟೆಯಂತೆ ಕಟ್ಟಿಕೂರಿಸಲಾಗಿದೆ ಅಂತ.

ಗುಜರಾತ್‌ನ ರಾಜ್‌ಕೋಟ್‌ನಲ್ಲಿರೋ ಈ ಗೇಮಿಂಗ್ ಝೋನ್‌ನಲ್ಲಿ ಆಟವಾಡೋಕೆ ಬಂದವರಷ್ಟೇ ಅಲ್ಲದೆ, ಅಲ್ಲಿ ಕೆಲಸ ಮಾಡ್ತಿದ್ದ ಹತ್ತಾರು ಮಂದಿ ಕೂಡ ಬೆಂಕಿಗೆ ಆಹುತಿಯಾಗಿದ್ದಾರೆ. ಅವರ ಪೈಕಿ ಈ ಯುವತಿ ಕೂಡ ಒಬ್ಳು. ಮೊಬೈಲ್‌ನಲ್ಲಿ ಯುವತಿಯ ಫೋಟೋ ತೋರಿಸುತ್ತಾ ನನ್ನ ಮಗಳು ಬೇಕು ಅಂತ ಗೋಳಾಡುತ್ತಿರೋ ಆ ಹೆತ್ತಮ್ಮನ ಗೋಳಾಟ ನಿಜಕ್ಕೂ ಮನಮಿಡಿಯುವಂತಿದೆ. ಇನ್ನು, ಜಸ್ಟ್ 3 ತಿಂಗಳ ಹಿಂದಷ್ಟೇ ಜೈಪಾಲ್‌ ಜಡೇಜಾ ಮದುವೆ ಆಗಿದ್ನಂತೆ. ಶನಿವಾರ ಸಂಜೆ ತನ್ನ ಮೂವರು ಸ್ನೇಹಿತರನ್ನು ಕರೆದುಕೊಂಡು ಈ ಗೇಮಿಂಗ್ ಝೋನ್‌ಗೆ ಆಟವಾಡೋಕೆ ಬಂದಿದ್ನಂತೆ. ಬೆಂಕಿ ಅನಾಹುತದಲ್ಲಿ ಈತನ ಜೊತೆ, ಈತನ ಇಬ್ಬರು ಸ್ನೇಹಿತರೂ ಕೂಡ ಬಲಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಓಡೋಡಿ ಬಂದ ಪೋಷಕರು ಮೂಟೆ ಕಟ್ಟಿರೋ ಸುಟ್ಟ ಬೆಡ್‌ಬಾಡಿಗಳ ಎದುರು ನಿಂತು ರೋದಿಸ್ತಿದ್ದಾರೆ. ಮತ್ತೊಂದು ದುರಂತ ಅಂದ್ರೆ, ಡಿಎನ್‌ಎ ರಿಪೋರ್ಟ್ ಬರೋವರೆಗೂ ತಮ್ಮ ಮನೆ ಮಕ್ಕಳ ಡೆಡ್‌ಬಾಡಿ ಯಾವುದು ಅನ್ನೋದೂ ಕೂಡ ಕುಟುಂಬಸ್ಥರಿಗೆ ಗೊತ್ತಾಗೋದಿಲ್ಲ. ಛೇ ಇಂಥಾ ದುಸ್ಥಿತಿ ಯಾವ ಪಾಪಿಗೂ ಬೇಡ.

ಈತ ಮೋನು ಗೌರ್​.. 17 ವರ್ಷ ವರ್ಷ ವಯಸ್ಸಿನ ಮೋನು ಗೌರ್ ಕೇವಲ 17 ದಿನಗಳ ಹಿಂದಷ್ಟೇ ಉತ್ತರಪ್ರದೇಶದ ಗೋರಖ್‌ಪುರದಿಂದ ಬಂದು ಈ ಟಿಆರ್‌ಪಿ ಗೇಮಿಂಗ್ ಪಾರ್ಕ್‌ನಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದನಂತೆ. ಇಡೀ ಕುಟುಂಬಕ್ಕೆ ಇವನು ದೊಡ್ಡ ಶಕ್ತಿಯಂತೆ ಇದ್ನಂತೆ. ಕಷ್ಟಪಟ್ಟು ದುಡಿದು ಮನೆ ನೋಡಿಕೊಳ್ಳೋ ಕನಸು ಕಂಡು ಕೆಲಸಕ್ಕೆ ಸೇರಿಕೊಂಡಿದ್ದವ ಈ ರಣಜ್ವಾಲೆಯೊಳಗೆ ಸಿಲುಕಿ ದಾರುಣ ಸಾವು ಕಂಡಿದ್ದಾನೆ. ಕನಸು ಕಂಡು ಕೆಲಸಕ್ಕೆ ಸೇರಿದ್ದವ ದೇಹದ ಗುರುತು ಕೂಡ ಸಿಗದಂತೆ ಮಾಂಸದ ಮೂಟೆಯಾಗಿದ್ದಾನೆ. ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ!

ಇದನ್ನೂ ಓದಿ: ಬಸ್ ನಿಲ್ದಾಣ ಕಾಣೆಯಾಗಿದೆ, ಪ್ಲೀಸ್​ ಹುಡುಕಿಕೊಡಿ! ನ್ಯೂಸ್​ಫಸ್ಟ್​ಗೆ ಸಾರ್ವಜನಿಕರಿಂದ ಸ್ಪೆಷಲ್ ರಿಕ್ವೆಸ್ಟ್

ಮತ್ತೊಂದು ಕಡೆ, ವಿಜಯರ್‌ರಾಜ್ ಜಡೇಜಾ ಹೆಸರಿನ 23 ವರ್ಷ ಯುವಕನೊಬ್ಬ ಟಿಆರ್‌ಪಿ ಗೇಮಿಂಗ್ ಝೋನ್‌ಗೆ ಬಂದಿದ್ದನಂತೆ. ಇಲ್ಲಿಗೆ ಬೆಂಕಿ ಅನಾಹುತ ಸಂಭವಿಸಿರೋ ಸುದ್ದಿ ತಿಳಿಯುತ್ತಲೇ ಆತನ ಚಿಕ್ಕಪ್ಪ ಓಡೋಡಿ ಬಂದಿದ್ದಾರೆ. ಆತನ ಬೈಕ್‌ ಪಾರ್ಕಿಂಗ್‌ನಲ್ಲಿರೋದು ಪತ್ತೆಯಾಗ್ತಿದ್ದಂತೆ ಒಳಗೆ ಓಡೋಡಿ ಬಂದು ಹುಡುಕಾಡಿದ್ದಾರೆ. ಆದ್ರೆ, ಮಗನ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಆಸ್ಪತ್ರೆಯಲ್ಲೂ ಆತನ ಬಾಡಿಯಿಲ್ಲ. ಎಲ್ಲೋದ, ಏನಾದ ಬೆಂಕಿಗೆ ಭಸ್ಮವಾಗಿರೋ ಗೇಮಿಂಗ್ ಝೋನ್ ಒಳಗೆ ಆತನ ದೇಹ ಮಾಂಸದ ಮುದ್ದೆಯಾಗಿ ಬಿದ್ದಿದೆಯಾ? ಯಾವ ಸುಳಿವೂ ಸಿಗ್ತಿಲ್ಲ. ಇದೇ ರೀತಿ ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ. ಅವರು ಬದುಕಿರೋ ಸಾಧ್ಯತೆಗಳು ಕೂಡ ಕಡಿಮೆ ಎನ್ನಲಾಗ್ತಿದೆ.

ಮೃತದೇಹಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆ!

ಟಿಆರ್‌ಪಿ ಗೇಮಿಂಗ್ ಝೋನ್‌ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿರೋರ ಮೃತದೇಹಗಳನ್ನು ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ತರಲಾಗಿದೆ. ಇವರೆಲ್ಲರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಡಿಎನ್‌ಎ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಗುರುತು ಸಿಗದಂತೆ ಸುಟ್ಟು ಕರಕಲಾಗಿರೋ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆ ಹಚ್ಚಲಾಗ್ತಿದೆ. ಮೃತರ ಸಂಬಂಧಿಕರ ಮಾದರಿಗಳನ್ನು ಡಿಎನ್‌ಎ ಹೊಂದಾಣಿಕೆಗೆ ತೆಗೆದುಕೊಳ್ಳಲಾಗ್ತಿದೆ.

ಟಿಆರ್‌ಪಿ ಗೇಮ್ ಸೆಂಟರ್‌ನಲ್ಲಿ ನಡೆದಿರೋ ಬೆಂಕಿ ಅವಘಡಕ್ಕೆ ಸಂಬಂಧಪಟ್ಟ ಕೇಸ್‌ನ ತನಿಖೆ ಚುರುಕುಗೊಳಿಸಲಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತದೇಹಗಳು ಮತ್ತು ಅವರ ಸಂಬಂಧಿಕರ ಡಿಎನ್‌ಎ ಸ್ಯಾಂಪಲ್ ಪಡೆದುಕೊಂಡು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಡಿಎನ್‌ಎ ವರದಿ ಪಡೆದು ಮೃತದೇಹಗಳನ್ನು ಗುರುತಿಸೋ ಚಾಲ್ತಿಯಲ್ಲಿದೆ.

– ರಾಜು ಭಾರ್ಗವ, ಪೊಲೀಸ್ ಕಮೀಷನರ್

ದೇಶವನ್ನೇ ಬೆಚ್ಚಿಬೀಳಿಸಿರೋ ಈ ರಾಜ್‌ಕೋಟ್ ಗೇಮಿಂಗ್ ಸೆಂಟರ್ ಅಗ್ನಿದುರಂತದ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಅಗ್ನಿ ದುರಂತದಲ್ಲಿ ಸಾವನ್ನಪ್ಪಿದರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ರಾಜ್‌ಕೋಟ್‌ನಲ್ಲಿ ಸಂಭವಿಸಿರುವ ಅಗ್ನಿ ಅವಘಡದಿಂದ ಅತೀವ ದುಃಖವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು. ಗಾಯಾಳುಗಳು ಬೇಗ ಗುಣಮುಖವಾಗಲು ನನ್ನ ಪ್ರಾರ್ಥನೆಗಳು. ಸ್ಥಳೀಯ ಆಡಳಿತವು ಸಂತ್ರಸ್ತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವ ಕಾರ್ಯ ಮಾಡುತ್ತಿದೆ.

– ನರೇಂದ್ರ ಮೋದಿ, ಪ್ರಧಾನಿ

ಇನ್ನು, ದುರಂತ ಸಂಭವಿಸಿದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರೋ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಸಿಎಂ ಭೂಪೇಂದ್ರ ಪಟೇಲ್, ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗುಜರಾತ್‌ ಸೇರಿದಂತೆ ರಾಜ್‌ಕೋಟ್‌ನಲ್ಲಿ ಹತ್ತಾರು ಗೇಮ್ ಪಾರ್ಕ್‌ಗಳಿವೆ. ಇಲ್ಲೀವರೆಗೂ ಯಾವುದೇ ಗೇಮ್‌ ಝೋನ್‌ನಲ್ಲೂ ಇಂಥಾದ್ದೊಂದು ಅಗ್ನಿ ಅವಘಡ ಸಂಭವಿಸರಲೇ ಇಲ್ಲ. ಖುದ್ದು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳೇ ಈ ಅಗ್ನಿರೌದ್ರತೆ ಕಂಡು ಬೆಚ್ಚಿದ್ದಾರೆ. ಮಾಂಸದ ಉಂಡೆಗಳಂತಾಗಿರೋ ನತದೃಷ್ಟ ಮಂದಿಯ ದೇಹಗಳ ಎದುರು ಕುಟುಂಬಸ್ಥರು ಕಣ್ಣೀರು ಸುರಿಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟ ಆಡಲು ಹೋಗಿ ಮಕ್ಕಳು ಸೇರಿ 35ಕ್ಕೂ ಹೆಚ್ಚು ಮಂದಿ ಸಾವು; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/gujarat1.jpg

Load More