/newsfirstlive-kannada/media/post_attachments/wp-content/uploads/2024/09/rajanikanth.jpg)
ಸೂಪರ್​ ಸ್ಟಾರ್​ ರಜನಿಕಾಂತ್​ ಕೂಲಿ ಸಿನಿಮಾದಲ್ಲಿ ನಟಿಸುತ್ತಿರುವ ಸಂಗತಿ ಬಹುತೇಕರಿಗೆ ತಿಳಿದಿದೆ. ಲೊಕೇಶ್​ ಕನಗರಾಜ್​ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಸದ್ಯ ಸುದ್ದಿಯಲ್ಲಿರುವ ಈ ಸಿನಿಮಾದ ಶೂಟಿಂಗ್​ ಸೀನ್​ ಆನ್​ಲೈನ್​​ನಲ್ಲಿ ಸೋರಿಕೆಯಾಗಿದೆ.
ವಿಶಾಖಪಟ್ಟಣನದಲ್ಲಿ ಕೂಲಿ ಸಿನಿಮಾದ ಶೂಟಿಂಗ್​ ನಡೆಯುತ್ತಿತ್ತು. ರಜನಿಕಾಂತ್​ ಮತ್ತು ನಟ ನಾಗಾರ್ಜುನ ಅವರು ಶೂಟಿಂಗ್​​ ನಡೆಯುತ್ತಿದ್ದ ಸಮಯದಲ್ಲಿ ಅಭಿಮಾನಿಯೊಬ್ಬ ತನ್ನ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ. ಸದ್ಯ ಆನ್​ಲೈನ್​ನಲ್ಲಿ ಸೀನ್​ ಸೋರಿಕೆಯಾಗಿದೆ.
ವೈರಲ್​ ಆಗಿರುವ ಕ್ಲಿಪ್​ನಲ್ಲಿ ನಾಗಾರ್ಜುನ ಬಿಳಿ ಸೂಟ್​ ಧರಿಸಿದ್ದು ವ್ಯಕ್ತಿಗೆ ಸುತ್ತಿಗೆಯಿಂದ ಹೊಡೆಯುತ್ತಿರಯವ ದೃಶ್ಯ ಕಂಡುಬಂದಿದೆ. ಎಕ್ಸ್​ನಲ್ಲಿ ಈ ದೃಶ್ಯ ಸೋರಿಕೆಯಾಗಿದ್ದು, ಅದರಲ್ಲಿ ನಾಗಾರ್ಜುನ ಸೀನ್​​​​ ಲೀಕ್​ ಆಗಿದೆ ಎಂದು ಬರೆಯಲಾಗಿದೆ.
#COOLIE : #Nagarjuna Scenes Leaked?
This is Gonna Be Bigger This Time?#Rajinikanth | #LokeshKanagarajpic.twitter.com/tMDZr8AQbC
— Arjun _ NTR (@door_cinema) September 18, 2024
ಸದ್ಯ ಸೋರಿಕೆಯಾಗಿರುವ ಕೂಲಿ ಸಿನಿಮಾದ ದೃಶ್ಯ ಕಂಡು ಅನೇಕರು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ಅದರಲ್ಲಿ ಒಬ್ಬರು ನಾಗಾರ್ಜುನ ನೆಗೆಟಿವ್​ ಪಾತ್ರ ಮಾಡುತ್ತಿದ್ದಾರಾ? ಎಂದರೆ. ಮತ್ತೊಬ್ಬರು, ಲೊಕೇಶ್​​ ಖಂಡಿತವಾಗಿ ಏನಾದರೂ ಮಾಡುತ್ತಿರುತ್ತಾರೆ. 2025ರವರೆಗೆ ಕಾಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಮಗದೊಬ್ಬ ‘ ಕೂಲಿಯು 750 ಕೋಟಿ ದಾಟುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಬರೆದಿದ್ದಾರೆ.
ಆಗಸ್ಟ್​ ತಿಂಗಳಿನಲ್ಲಿ ನಾಗಾರ್ಜುನ ಅವರು ಕೂಲಿ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ‘ಧನ್ಯವಾದ ಲೋಕಿ, ನಾನು ಕೈದಿಯಿಂದ ನಿಮ್ಮೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ನಮ್ಮ ಮುಂದಿನ ಪ್ರಯಾಣಕ್ಕಾಗಿ ಉತ್ಸುಕರಾಗಿದ್ದೇನೆ. ತಲೈವರ್​ ಜೊತೆಗೆ ಸ್ಕ್ರೀನ್​​ ಸ್ಪೇಸ್​​ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us