newsfirstkannada.com

×

VIDEO: ರಜನಿ ‘ಕೂಲಿ’ ಸಿನಿಮಾದ ದೃಶ್ಯ ಲೀಕ್​​.. ನಾಗಾರ್ಜುನರ ಹೊಸ ಅವತಾರ ಕಂಡು ಫ್ಯಾನ್ಸ್​​ ಶಾಕ್​​

Share :

Published September 19, 2024 at 8:19am

    ರಜನಿಕಾಂತ್ ನಟನೆಯ ಬಹುನಿರೀಕ್ಷಿತ​ ಕೂಲಿ ಸಿನಿಮಾ

    ಕೂಲಿ ಸಿನಿಮಾದಲ್ಲಿ ನಟಿಸುತ್ತಿರುವ ಅಕ್ಕಿನೇನಿ ನಾಗಾರ್ಜುನ

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಲೀಕ್​ ಸೀನ್​

ಸೂಪರ್​ ಸ್ಟಾರ್​ ರಜನಿಕಾಂತ್​ ಕೂಲಿ ಸಿನಿಮಾದಲ್ಲಿ ನಟಿಸುತ್ತಿರುವ ಸಂಗತಿ ಬಹುತೇಕರಿಗೆ ತಿಳಿದಿದೆ. ಲೊಕೇಶ್​ ಕನಗರಾಜ್​ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಸದ್ಯ ಸುದ್ದಿಯಲ್ಲಿರುವ ಈ ಸಿನಿಮಾದ ಶೂಟಿಂಗ್​ ಸೀನ್​ ಆನ್​ಲೈನ್​​ನಲ್ಲಿ ಸೋರಿಕೆಯಾಗಿದೆ.

ವಿಶಾಖಪಟ್ಟಣನದಲ್ಲಿ ಕೂಲಿ ಸಿನಿಮಾದ ಶೂಟಿಂಗ್​ ನಡೆಯುತ್ತಿತ್ತು. ರಜನಿಕಾಂತ್​ ಮತ್ತು ನಟ ನಾಗಾರ್ಜುನ ಅವರು ಶೂಟಿಂಗ್​​ ನಡೆಯುತ್ತಿದ್ದ ಸಮಯದಲ್ಲಿ ಅಭಿಮಾನಿಯೊಬ್ಬ ತನ್ನ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ. ಸದ್ಯ ಆನ್​ಲೈನ್​ನಲ್ಲಿ ಸೀನ್​ ಸೋರಿಕೆಯಾಗಿದೆ.

ವೈರಲ್​ ಆಗಿರುವ ಕ್ಲಿಪ್​ನಲ್ಲಿ ನಾಗಾರ್ಜುನ ಬಿಳಿ ಸೂಟ್​ ಧರಿಸಿದ್ದು ವ್ಯಕ್ತಿಗೆ ಸುತ್ತಿಗೆಯಿಂದ ಹೊಡೆಯುತ್ತಿರಯವ ದೃಶ್ಯ ಕಂಡುಬಂದಿದೆ. ಎಕ್ಸ್​ನಲ್ಲಿ ಈ ದೃಶ್ಯ ಸೋರಿಕೆಯಾಗಿದ್ದು, ಅದರಲ್ಲಿ ನಾಗಾರ್ಜುನ ಸೀನ್​​​​ ಲೀಕ್​ ಆಗಿದೆ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಮುರಿದು ಬಿತ್ತು ಬಿಗ್​ ಬಾಸ್​ ಮಾಜಿ ಸ್ಪರ್ಧಿಯ ನಿಶ್ಚಿತಾರ್ಥ.. ಅಷ್ಟಕ್ಕೂ ಆಗಿದ್ದೇನು? ಘಟನೆ ಬಗ್ಗೆ ಏನಂದ್ರು?

ಸದ್ಯ ಸೋರಿಕೆಯಾಗಿರುವ ಕೂಲಿ ಸಿನಿಮಾದ ದೃಶ್ಯ ಕಂಡು ಅನೇಕರು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ಅದರಲ್ಲಿ ಒಬ್ಬರು ನಾಗಾರ್ಜುನ ನೆಗೆಟಿವ್​ ಪಾತ್ರ ಮಾಡುತ್ತಿದ್ದಾರಾ? ಎಂದರೆ. ಮತ್ತೊಬ್ಬರು, ಲೊಕೇಶ್​​ ಖಂಡಿತವಾಗಿ ಏನಾದರೂ ಮಾಡುತ್ತಿರುತ್ತಾರೆ. 2025ರವರೆಗೆ ಕಾಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಮಗದೊಬ್ಬ ‘ ಕೂಲಿಯು 750 ಕೋಟಿ ದಾಟುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ 25 ವರ್ಷ ಪೂರೈಸಿದ ಕರೀನಾ! ಇದೇ ಖುಷಿಯಲ್ಲಿ ಫೋಟೋಶೂಟ್..​​ ಬೆಬೋ ನೋಡಿ ದಂಗಾದ ಹುಡುಗರು

ಆಗಸ್ಟ್​ ತಿಂಗಳಿನಲ್ಲಿ ನಾಗಾರ್ಜುನ ಅವರು ಕೂಲಿ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ‘ಧನ್ಯವಾದ ಲೋಕಿ, ನಾನು ಕೈದಿಯಿಂದ ನಿಮ್ಮೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ನಮ್ಮ ಮುಂದಿನ ಪ್ರಯಾಣಕ್ಕಾಗಿ ಉತ್ಸುಕರಾಗಿದ್ದೇನೆ. ತಲೈವರ್​ ಜೊತೆಗೆ ಸ್ಕ್ರೀನ್​​ ಸ್ಪೇಸ್​​ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಜನಿ ‘ಕೂಲಿ’ ಸಿನಿಮಾದ ದೃಶ್ಯ ಲೀಕ್​​.. ನಾಗಾರ್ಜುನರ ಹೊಸ ಅವತಾರ ಕಂಡು ಫ್ಯಾನ್ಸ್​​ ಶಾಕ್​​

https://newsfirstlive.com/wp-content/uploads/2024/09/rajanikanth.jpg

Load More