/newsfirstlive-kannada/media/post_attachments/wp-content/uploads/2024/06/ram-charan.jpg)
ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಉಪಾಸನಾ ಅವರ ಮುದ್ದು ಮಗಳು ಕ್ಲಿಂಕಾರ ಜನಿಸಿ ಒಂದು ವರ್ಷ ಭರ್ತಿಯಾಗಿದೆ. ಮುದ್ದು ಮಗಳ ಹುಟ್ಟುಹಬ್ಬದ ವಿಶೇಷವಾಗಿ ರಾಮ್ ಚರಣ್ ಪತ್ನಿ ಉಪಾಸನಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!
ಇನ್ನು, ಉಪಾಸನಾ ಅವರು ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಆಸ್ಪತ್ರೆಯಲ್ಲಿ ಕ್ಲಿಂಕಾರ ಹುಟ್ಟಿದಾಗ ಮೆಗಾ ಕುಟುಂಬದ ಸದಸ್ಯರ ಸಖತ್ ಖುಷಿ ಪಟ್ಟಿದ್ದರು. ಇದೇ ವಿಡಿಯೋವನ್ನು ಶೇರ್ ಮಾಡಿದ ಅವರು, ನನ್ನ ಪ್ರೀತಿಯ ಕ್ಲೀಂಕಾರ ಅವರಿಗೆ ಮೊದಲ ಜನ್ಮದಿನದ ಶುಭಾಶಯಗಳು. ನಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದಕ್ಕಾಗಿ ಧನ್ಯವಾದಗಳು. ನಾನು ಈ ವೀಡಿಯೊವನ್ನು ಮಿಲಿಯನ್ ಬಾರಿ ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಕ್ಲಿಂಕಾರಗೆ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಜೊತೆಗೆ ಟಾಲಿವುಡ್ ನಟ ನಟಿಯರು ರಾಮ್ ಚರಣ್ ಮತ್ತು ಉಪಾಸನಾ ಪುತ್ರಿಯ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ