newsfirstkannada.com

ಮೆಕ್ಕಾ ಮಸೀದಿ, ವ್ಯಾಟಿಕನ್ ಸಿಟಿ ಚರ್ಚ್​ ಅನ್ನೇ ಮೀರಿಸುತ್ತಾ ಅಯೋಧ್ಯೆ? ಏನಿದು ‘ವಿಶ್ವ’ ದಾಖಲೆ!

Share :

Published January 23, 2024 at 6:35pm

Update January 23, 2024 at 6:58pm

  ರಾಮನೂರಿಗೆ ಹರಿದು ಬರ್ತಿದೆ ದೇಶ, ವಿದೇಶದಿಂದ ಭಕ್ತರ ದಂಡು

  ಪವಿತ್ರ ಯಾತ್ರಾಸ್ಥಳ ಮೆಕ್ಕಾಗೆ ಪ್ರತಿ ವರ್ಷ 2 ಕೋಟಿ ಜನರು ಭೇಟಿ

  ಕ್ರಿಶ್ಚಿಯನ್ನರ ವ್ಯಾಟಿಕನ್‌ಗೆ ವಾರ್ಷಿಕ 90 ಲಕ್ಷ ಜನರಿಂದ ಪ್ರವಾಸ

ಬರೋಬ್ಬರಿ 500 ವರ್ಷಗಳ ಬಳಿಕ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ಅಯೋಧ್ಯೆ ಶ್ರೀರಾಮಮಂದಿರ ಬರೀ ಭಾರತದಲ್ಲಷ್ಟೇ ಅಲ್ಲ ಜಗತ್ತಿನೆಲ್ಲೆಡೆ ಸದ್ದು ಮಾಡಿದೆ. ರಾಮನೂರಿಗೆ ದೇಶ, ವಿದೇಶದಿಂದ ಭಕ್ತರ ದಂಡು ಹರಿದು ಬರ್ತಾ ಇದ್ದು, ರಾಮಲಲ್ಲಾ ಮೂರ್ತಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮೊದಲ ದಿನದ ಸಾರ್ವಜನಿಕ ದರ್ಶನದಲ್ಲಿ ನೂಕು ನುಗ್ಗಲು ಉಂಟಾಗಿದೆ.

ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬರ್ತಿರೋ ಭಕ್ತರ ಪ್ರವಾಹವನ್ನು ನೋಡಿದ್ರೆ ಮುಸ್ಲಿಂರ ಪವಿತ್ರ ಯಾತ್ರಾಸ್ಥಳ ಮೆಕ್ಕಾ ಮದೀನಾ, ಕ್ರಿಶ್ಚಿಯನ್ ಸಮುದಾಯದ ಪವಿತ್ರ ಸ್ಥಳ ವ್ಯಾಟಿಕನ್ ಸಿಟಿಯನ್ನು ಅಯೋಧ್ಯೆ ಹಿಂದಿಕ್ಕುವ ಸಾಧ್ಯತೆ ಇದೆ. ಮೆಕ್ಕಾ, ವ್ಯಾಟಿಕನ್‌ಗಿಂತ ಹೆಚ್ಚು ಜನರು ಇನ್ಮುಂದೆ ದೈವಿಕ ನಗರಿ ಅಯೋಧ್ಯೆಗೆ ಭೇಟಿ ನೀಡುವ ಲೆಕ್ಕಾಚಾರ ಹಾಕಲಾಗಿದೆ.

ರಾಮಮಂದಿರದಲ್ಲಿ ರಾಮಲಲ್ಲಾಗೆ ಬೆಳಗ್ಗೆ ಶೃಂಗಾರ ಆರತಿ, ಸಂಜೆ ಸಂಧ್ಯಾ ಆರತಿಯನ್ನು ಅರ್ಚಕರು ನಡೆಸಲಿದ್ದಾರೆ. ನಾಳೆಯು ಮಂಡಲ್ ಪೂಜೆಯನ್ನು ಪೇಜಾವರ ಮಠಾಧೀಶರ ನೇತೃತ್ವದ ತಂಡದವರು ಮುಂದುವರೆಸಲಿದ್ದಾರೆ. ಹೀಗೆ 48 ದಿನಗಳ ಕಾಲ ಮಂಡಲ್ ಪೂಜೆ ನಡೆಯಲಿದೆ. ಈಗಾಗಲೇ ಮೊದಲ ದಿನವೇ 3 ಲಕ್ಷ ಭಕ್ತರು ರಾಮಲಲ್ಲಾ ದರ್ಶನ ಪಡೆದಿದ್ದಾರೆ. ನಾಳೆ ದರ್ಶನ ಪಡೆಯುವ ಭಕ್ತಾದಿಗಳು ನಿತ್ಯ ಬೆಳಿಗ್ಗೆ 8 ರಿಂದ ಬೆಳಿಗ್ಗೆ 11.30 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ದರ್ಶನದ ಅವಕಾಶ ಇರುತ್ತದೆ ಎಂದು ಹೇಳಲಾಗಿದೆ.

3 ರಿಂದ 5 ಕೋಟಿ ಭಕ್ತರು ಭೇಟಿ!
ಇಸ್ಲಾಂ ಧರ್ಮದ ಪವಿತ್ರ ಯಾತ್ರಾಸ್ಥಳ ಮೆಕ್ಕಾಗೆ ಪ್ರತಿ ವರ್ಷ 2 ಕೋಟಿ ಜನರು ಭೇಟಿ ನೀಡುತ್ತಾರೆ. ಅಂತೆಯೇ ಕ್ರಿಶ್ಚಿಯನ್ನರ ವ್ಯಾಟಿಕನ್‌ಗೆ ವಾರ್ಷಿಕ 90 ಲಕ್ಷ ಜನರು ಆಗಮಿಸುತ್ತಾರೆ. ಹಿಂದೂಗಳ ಪವಿತ್ರ ಸ್ಥಳ ಅಯೋಧ್ಯೆಗೆ ಇದೀಗ ವರ್ಷಕ್ಕೆ 3 ರಿಂದ 5 ಕೋಟಿ ಜನರು ಭೇಟಿ ನೀಡವ ಸಾಧ್ಯತೆ ಇದೆ. ಮೆಕ್ಕಾ ಹಾಗೂ ವ್ಯಾಟಿಕನ್ ಎರಡಕ್ಕೂ 3 ಕೋಟಿಗೂ ಕಡಿಮೆ ಜನರು ಭೇಟಿ ಕೊಡುತ್ತಾರೆ. ಅಯೋಧ್ಯೆಯೊಂದಕ್ಕೆ ವಾರ್ಷಿಕ 3 ರಿಂದ 5 ಕೋಟಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಹೊಂದಲಾಗಿದೆ. ಈ ಮೂಲಕ ಅಯೋಧ್ಯೆ ಮೆಕ್ಕಾ, ವ್ಯಾಟಿಕನ್ ಸಿಟಿಯನ್ನು ಹಿಂದಿಕ್ಕಲಿದೆ ಎನ್ನಲಾಗಿದೆ.

ಇದನ್ನೂ ಓದಿ: WATCH: ಅಯೋಧ್ಯೆಯಲ್ಲಿ ನೂಕುನುಗ್ಗಲು; ಭಕ್ತರನ್ನ ಕಂಟ್ರೋಲ್ ಮಾಡಲು ಪೊಲೀಸರ ಹರಸಾಹಸ

2019ಕ್ಕೂ ಮೊದಲು ಅಯೋಧ್ಯೆ ಟೆಂಟ್‌ನಲ್ಲಿದ್ದ ರಾಮಲಲ್ಲಾ ದರ್ಶನಕ್ಕೆ ನಿತ್ಯ 3 ಸಾವಿರ ಜನರ ಆಗಮಿಸುತ್ತಿದ್ದರು. ಆದರೆ 2024 ಜನವರಿ 1 ರಂದೇ 50 ಸಾವಿರ ಭಕ್ತಾದಿಗಳ ಭೇಟಿ ನೀಡಿದ್ದಾರೆ. ರಾಮಮಂದಿರ ಲೋಕಾರ್ಪಣೆ ಬಳಿಕ ಪ್ರತಿನಿತ್ಯ 1 ಲಕ್ಷದಿಂದ 1.5 ಲಕ್ಷ ಭಕ್ತಾದಿಗಳು ಭೇಟಿ ನೀಡುವ ನಿರೀಕ್ಷೆ ಇದೆ. ಭಾರತದಲ್ಲಿ ಬರೋಬ್ಬರಿ 100 ಕೋಟಿ ಹಿಂದೂಗಳ ಜನಸಂಖ್ಯೆ ಇದೆ. ವಿಶ್ವದ ಬೇರೆ ಬೇರೆ ದೇಶಗಳಲ್ಲೂ ಹಿಂದೂಗಳು ನೆಲೆಸಿದ್ದಾರೆ. ವಿಶ್ವದೆಲ್ಲೆಡೆಯಿಂದ ಅಯೋಧ್ಯೆಯ ರಾಮಲಲ್ಲಾ ದರ್ಶನ ಪಡೆಯಲು ಹಿಂದೂಗಳು ಆಗಮಿಸುತ್ತಿದ್ದಾರೆ. ಜಾಗತಿಕ ಆಧ್ಯಾತ್ಮದ ಪ್ರವಾಸಿ ತಾಣವಾಗಿ ಅಯೋಧ್ಯೆ ಭಕ್ತಾದಿಗಳನ್ನು ಸೆಳೆಯುತ್ತಿದೆ.

ಆಂಧ್ರದ ತಿರುಪತಿಗೆ ವಾರ್ಷಿಕ 2.5 ಕೋಟಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಕಾಶ್ಮೀರದ ವೈಷ್ಣೋದೇವಿಗೆ ವಾರ್ಷಿಕ 80 ಲಕ್ಷ ಭಕ್ತರು, ಉತ್ತರ ಪ್ರದೇಶದ ತಾಜ್ ಮಹಲ್‌ಗೆ ವಾರ್ಷಿಕ 70 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ತಿರುಪತಿಗಿಂತ ಹೆಚ್ಚಿನ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆ ಇದೆ.

ದೇಶದ ಜಿಡಿಪಿಗೂ ಅಯೋಧ್ಯೆ ಕೊಡುಗೆ
ಆರ್ಥಿಕವಾಗಿಯೂ ಅಯೋಧ್ಯೆಯಲ್ಲಿ ಹೆಚ್ಚಿನ ವಹಿವಾಟು ನಡೆಯಲಿದೆ. ರಾಮಮಂದಿರ ನಿರ್ಮಾಣದ ಪ್ರಯುಕ್ತ ಅಯೋಧ್ಯೆಯಲ್ಲಿ ವಾರ್ಷಿಕ 55 ಸಾವಿರ ಕೋಟಿ ರೂ ವಹಿವಾಟು ನಡೆದಿದೆ. ಸಾರಿಗೆ, ಪ್ರವಾಸೋದ್ಯಮ, ಹೋಟೆಲ್, ವಸತಿ ಕ್ಷೇತ್ರಗಳಲ್ಲಿ ಆರ್ಥಿಕ ವಹಿವಾಟು ಹೆಚ್ಚಾಗಲಿದೆ. ರಾಮಮಂದಿರದಿಂದ ದೇಶದಲ್ಲಿ ವಾರ್ಷಿಕ 1 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯೋ ಸಾಧ್ಯತೆ ಇದೆ. 1,800 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗಿದ್ದು, ಇದು ದೇಶದ ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಾಯಕವಾಗಲಿದೆ. ಪ್ರವಾಸೋದ್ಯಮ ಅಭಿವೃದ್ದಿಯಿಂದ ದೇಶದ ಜಿಡಿಪಿ ವೃದ್ದಿಗೂ ದೊಡ್ಡ ಕೊಡುಗೆ ನೀಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಕ್ಕಾ ಮಸೀದಿ, ವ್ಯಾಟಿಕನ್ ಸಿಟಿ ಚರ್ಚ್​ ಅನ್ನೇ ಮೀರಿಸುತ್ತಾ ಅಯೋಧ್ಯೆ? ಏನಿದು ‘ವಿಶ್ವ’ ದಾಖಲೆ!

https://newsfirstlive.com/wp-content/uploads/2024/01/Ayodhya-Makka.jpg

Load More