newsfirstkannada.com

ಅಯೋಧ್ಯೆ ಗರ್ಭಗುಡಿಯಲ್ಲಿ ವಿರಾಜಮಾನವಾದ ರಾಮಲಲ್ಲಾ ಮೂರ್ತಿ ಫೋಟೋ ಬಿಡುಗಡೆ

Share :

Published January 19, 2024 at 12:35pm

Update January 19, 2024 at 1:45pm

  ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರೋ ರಾಮ ಲಲ್ಲಾ ಮೂರ್ತಿ

  ಗರ್ಭಗುಡಿಯಲ್ಲಿ 51 ಇಂಚಿನ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ

  ಬಲಗೈನಲ್ಲಿ ಚಿನ್ನದ ಬಾಣ, ಎಡಗೈನಲ್ಲಿ ಚಿನ್ನದ ಬಿಲ್ಲು ಹಿಡಿದ ಮೂರ್ತಿ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಗೆ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿದೆ. ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರೋ ರಾಮ ಲಲ್ಲಾ ಮೂರ್ತಿಯ ಫೋಟೋ ಬಿಡುಗಡೆಯಾಗಿದೆ.

51 ಇಂಚಿನ ಅಂದ – ಚೆಂದದ ಮುದ್ದಾಗಿ ನಗುವ ಶ್ರೀ ರಾಮಲಲ್ಲಾ ಮೂರ್ತಿ ಇದಾಗಿದೆ. ಮೂರ್ತಿಯ ಪ್ರಭಾವಳಿಯ ಸುತ್ತ ವಿಷ್ಣುವಿನ ದಶಾವತಾರ ಕಾಣಸಿಗುತ್ತೆ. ಮೂರ್ತಿಯ ಪ್ರಭಾವಳಿಯ ಕೆಳಗೆ ನಿಂತ ಬಲಭಾಗ ಭಕ್ತಾಂಜನೇಯ, ಎಡಭಾಗ ಗರುಡ ಮೂರ್ತಿ ಕಾಣಸಿಗುತ್ತೆ. ರಾಮಲಲ್ಲಾ ಇನ್ನು ರಾಮನ ಬಲಗೈನಲ್ಲಿ ಚಿನ್ನದ ಬಾಣ ಹಾಗೂ ಎಡಗೈನಲ್ಲಿ ಚಿನ್ನದ ಬಿಲ್ಲು ಹಿಡಿದು, ಬ್ರಹ್ಮಕಮಲದ ಮೇಲೆ ರಾಮ ಲಲ್ಲಾ ದರ್ಶನ ನೀಡಲಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಮೂರ್ತಿ ಕೆತ್ತಲು ಶಿಲ್ಪಿ, ಶಿಲೆಯ ಆಯ್ಕೆ ಹೇಗಾಯ್ತು? ನ್ಯೂಸ್​ಫಸ್ಟ್​ಗೆ ಪೇಜಾವರಶ್ರೀ ಇಂಟ್ರಸ್ಟಿಂಗ್​ ಮಾಹಿತಿ

ಜ.22 ರಂದು ಕಣ್ಣು ತೆರೆಯೋ ಶಾಸ್ತ್ರ

500 ವರ್ಷದ ಬಳಿಕ ಅಂತಿಮವಾಗಿ ರಾಮಜನ್ಮಭೂಮಿಯಲ್ಲೇ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಗರ್ಭಗುಡಿಯ ಮಾರ್ಬಲ್ ಮೇಲೆ ರಾಮಲಲ್ಲಾ ಪ್ರತಿಷ್ಠಾಪನೆ ಪೂರ್ಣವಾಗಿದ್ದು, ರಾಮಲಲ್ಲಾ ಮೂರ್ತಿಯ ಕಣ್ಣಿಗೆ ಸದ್ಯ ಬಟ್ಟೆ ಕಟ್ಟಲಾಗಿದೆ. ಇದೇ ಜನವರಿ 22 ರಂದು ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆದು ಕಣ್ಣು ತೆರೆಯುವ ಶಾಸ್ತ್ರ ನಡೆಯಲಿದೆ. ಬಳಿಕ ಮೂರ್ತಿಗೆ ಕನ್ನಡಿ ತೋರಿಸಿ ಮೊದಲು ತನ್ನನ್ನು ತಾನೇ ನೋಡಿಕೊಳ್ಳುವ ಶಾಸ್ತ್ರ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ಗರ್ಭಗುಡಿಯಲ್ಲಿ ವಿರಾಜಮಾನವಾದ ರಾಮಲಲ್ಲಾ ಮೂರ್ತಿ ಫೋಟೋ ಬಿಡುಗಡೆ

https://newsfirstlive.com/wp-content/uploads/2024/01/Ayodhya-Ramlala.jpg

Load More