ರಾಮಾಚಾರಿ ಸೀರಿಯಲ್ ಮೂಲಕ ಖ್ಯಾತಿ ಪಡೆದ ಮೌನಾ ಗುಡ್ಡೆಮನೆ
ಕಿರುತೆರೆ ನಟಿ ಪ್ರಿಯಾಂಕಾ ಸುರೇಶ್ ಮದುವೆಯಲ್ಲಿ ಭಾಗಿಯಾದ ಚಾರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ನಟಿ ಚಾರು ಫೋಟೋಸ್
ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಟಿಆರ್ಪಿಯಲ್ಲೂ ರಾಮಾಚಾರಿ ಉತ್ತಮ ಸ್ಥಾನ ಕಾಯ್ದುಕೊಂಡು ಮುನ್ನುಗ್ಗುತ್ತಿದೆ. ಈ ನಡುವೆ ರಾಮಾಚಾರಿ ಸಹೋದರ ಕಿಟ್ಟಿಯ ಹೊಸ ಅಧ್ಯಾಯ ಶುರುವಾಗಿದೆ. ಇದು ಸದ್ಯದ ಸೀರಿಯಲ್ ಸ್ಟೋರಿ. ಮೊನ್ನೆ ಮೊನ್ನೆಯಷ್ಟೇ ರಾಮಾಚಾರಿ ಸೀರಿಯಲ್ನಲ್ಲಿ ಚಾರು ತಂಗಿ ಪಾತ್ರದಲ್ಲಿ ನಟಿಸುತ್ತಿದ್ದ ಪ್ರಿಯಾಂಕಾ ಸುರೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಾಮಾಚಾರಿ ಬೆಡಗಿ.. ಚಾರು ಹಾಟ್ ಫೋಟೋಸ್ಗೆ ಫ್ಯಾನ್ಸ್ ಫಿದಾ!
ವೃತ್ತಿಯಲ್ಲಿ ನಟಿ, ಮಾಡಲ್ ಆಗಿರೋ ನಟಿ ಪ್ರಿಯಾಂಕಾ ಅವರು ವಿಜಯ್ ಎಂಬುವವರ ಜೊತೆ ಮದುವೆಯಾಗಿದ್ದಾರೆ. ಅದ್ಧೂರಿಯಾಗಿ ಜರುಗಿದ್ದ ವಿವಾಹದಲ್ಲಿ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು. ಅದರಲ್ಲೂ ಪ್ರಿಯಾಂಕಾ ಸುರೇಶ್ ಅವರ ಆಪ್ತ ಗೆಳತಿಯಾಗಿರೋ ಚಾರು ಅಂದ್ರೇ ಮೌನ ಗುಡ್ಡೆಮನೆ ಅವರು ಕೂಡ ಭಾಗಿಯಾಗಿ ವಿಶ್ ಮಾಡಿದ್ದಾರೆ.
ಸ್ನೇಹಿತೆ ಹಾಗೂ ಸಹನಟಿಯ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕನ್ನಡದ ಕಿರುತೆರೆಯ ಬ್ಯೂಟಿಫುಲ್ ನಟಿಯರಲ್ಲಿ ಚಾರು ಕೂಡ ಒಬ್ಬರು. ರಾಮಾಚಾರಿನ ಅರಸಿ ಚಾರು ಕೆಲವೊಮ್ಮೆ ತುಂಬಾ ಮುದ್ದು, ಕೆಲವೊಮ್ಮೆ ತುಂಬಾ ಕೋಪಿಷ್ಟೇ. ತನ್ನ ರಾಮಾಚಾರಿಗೋಸ್ಕರ ಚಾರು ಸೀರಿಯಲ್ನಲ್ಲಿ ಏನು ಬೇಕಾದರೂ ಮಾಡ್ತಾಳೆ.
View this post on Instagram
ಇದೀಗ ನಟಿ ಮೌನ ಗುಡ್ಡೆಮನೆ ಅವರು ಸ್ನೇಹಿತೆ ಹಾಗೂ ಸಹನಟಿಯ ಮದುವೆಯಲ್ಲಿ ಮಿರ ಮಿಂಚಿದ್ದಾರೆ. ಇದೇ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು, ಅಪ್ಪಾ ಏನ್ ಮುದ್ದಾದ ನಗು, ಅಪ್ಪಟ ಅಪರಂಜಿ ನಮ್ಮ ಚಾರು, ಅಪ್ಸರೆಯ ನಗು ಮುಖದವಳು, ಪರ್ ಚಾರು ಲುಕಿಂಗ್ ಸೂಪರ್ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ