newsfirstkannada.com

×

ರಾಮೇಶ್ವರಂ ಕೆಫೆಗೆ ಬಂದು ‘ಟೈಮರ್’ ಇಟ್ಟ ಟೋಪಿವಾಲಾ.. ಸಿಸಿಟಿವಿಯ ಮತ್ತಷ್ಟು ಸ್ಫೋಟಕ ದೃಶ್ಯ ಬಯಲು

Share :

Published March 4, 2024 at 4:32pm

Update March 4, 2024 at 4:34pm

    ಬೆಂಗಳೂರು ಪೊಲೀಸರ ಜೊತೆಗೇ ಶಂಕಿತನ ಕಣ್ಣಾಮುಚ್ಚಾಲೆ ಆಟ

    ಜಸ್ಟ್ ಕೆಲವೇ ಸೆಂಕೆಂಡ್​ಗಳಲ್ಲಿ ಸ್ಫೋಟಕ್ಕೆ ಫಿಕ್ಸ್ ಮಾಡಿದ ಟೈಮರ್

    ಸಿಸಿಬಿಗೆ ತಲೆನೋವಾದ ಸ್ಫೋಟ ಮಾಡಿದವನ ಪತ್ತೆ ಹಚ್ಚೋ ಕೆಲಸ

ಬೆಂಗಳೂರು: ಕುಂದಲಹಳ್ಳಿಯ ‘ದಿ ರಾಮೇಶ್ವರ ಕೆಫೆ’ಯಲ್ಲಿ ಬಾಂಬ್‌ ಬ್ಲಾಸ್ಟ್‌ಗೆ ಕಾರಣವಾದ ಆರೋಪಿ ಬಂದಿದ್ದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ: ರಾಮೇಶ್ವರಂ ಕೆಫೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಪೊಲೀಸ್ರಿಗೆ ಆರೋಪಿ ಕಣ್ಣಾಮುಚ್ಚಾಲೆ ಆಟ!

ದಿ ರಾಮೇಶ್ವರಂ ಕೆಫೆಗೆ ಆರೋಪಿ ಬಂದಿದ್ದ ದೃಶ್ಯದಲ್ಲಿ ಏನಿದೆ?

ಕುಂದಲಹಳ್ಳಿ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿಯು ಬೆಳಗ್ಗೆ 10.43ಕ್ಕೆ ಬಿಎಂಟಿಸಿ ಬಸ್​ನಿಂದ ಇಳಿದಿದ್ದಾನೆ. ಬಸ್​​ನಿಂದ ಇಳಿಯುತ್ತಿದ್ದಂತೆ ತಾನು ತಂದಿದ್ದ ಬ್ಯಾಗ್​ನಲ್ಲಿದ್ದ ಬಾಂಬ್​ಗೆ ಟೈಮರ್ ಫಿಕ್ಸ್ ಮಾಡಿದ್ದಾನೆ. ಬಳಿಕ 11.34ಕ್ಕೆ ರಾಮೇಶ್ವರಂ ಕೆಫೆಯೊಳಗೆ ಶಂಕಿತ ಎಂಟ್ರಿ ಕೊಟ್ಟಿದ್ದಾನೆ. ಇನ್ನೂ ಶಂಕಿತನು ಕೆಫೆಯೊಳಗೆ ಹೋಗುತ್ತಿದ್ದಾಗ ಕೈಯಲ್ಲಿ ಗ್ಲೌಸ್ ಧರಿಸಿಕೊಂಡ ಬಂದಿದ್ದಾನೆ. ಬಳಿಕ 11.43ಕ್ಕೆ ಕೆಫೆಯಿಂದ ಹೊರಗಡೆ ಬಂದಿದ್ದಾನೆ. ಜಸ್ಟ್​ 10 ನಿಮಿಷದಲ್ಲಿ ಆರೋಪಿಯೂ ರವೆ ಇಡ್ಲಿ ತಿಂದು ಕೆಫೆಯಿಂದ ಎಸ್ಕೇಪ್​ ಆಗಿದ್ದಾನೆ.

ಶಂಕಿತನು ಕೆಫೆಯಿಂದ ಎಸ್ಕೇಪ್​ ಆದ ಬಳಿಕ 12 ಗಂಟೆ 55 ನಿಮಿಷಯಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಗೊಂಡಿದೆ. ಈ ಬಾಂಬ್​ ಸ್ಫೋಟದಿಂದ 9 ಜನ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸ್ವರ್ಣಾಂಭ ಅವರು ಚೇತರಿಸಿಕೊಳ್ತಿದ್ದಾರೆ. ಕಾಲು, ಕೈ, ಎದೆ ಭಾಗದಲ್ಲಿರೋ ಗಾಯಗಳ ಡ್ರೆಸ್ಸಿಂಗ್ ಆಗುತ್ತಿದೆ. ಸ್ವರ್ಣಾಂಭರನ್ನ ಸಂಜೆ ಜನರಲ್ ವಾರ್ಡ್​ಗೆ ಶಿಫ್ಟ್ ಮಾಡ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಬ್ಬ ಗಾಯಾಳು ಫಾರೂಕ್​ಗೆ ಸಹ ಗಾಯಗಳು ಒಣಗುತ್ತಿವೆ. ಎಂದು ಬ್ರೂಕ್ ಫೀಲ್ಡ್ ಆಸ್ಪತ್ರೆ ಡಾ.ಪ್ರದೀಪ್ ಮಾಹಿತಿ ನೀಡಿದ್ದಾರೆ. ಸದ್ಯ 20ಕ್ಕೂ ಹೆಚ್ಚು ತಂಡದಿಂದ ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಿಸಿಬಿ ಟೀಂನಿಂದ 1,650ಕ್ಕೂ ಅಧಿಕ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ. ಆರೋಪಿ ಪತ್ತೆಗೆ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಮೇಶ್ವರಂ ಕೆಫೆಗೆ ಬಂದು ‘ಟೈಮರ್’ ಇಟ್ಟ ಟೋಪಿವಾಲಾ.. ಸಿಸಿಟಿವಿಯ ಮತ್ತಷ್ಟು ಸ್ಫೋಟಕ ದೃಶ್ಯ ಬಯಲು

https://newsfirstlive.com/wp-content/uploads/2024/03/rameshwaram-cafe-blast-2.jpg

Load More