newsfirstkannada.com

ಕೆಫೆ ಸ್ಫೋಟದ ಮಾಸ್ಟರ್ ಮೈಂಡ್​​ನ ತಂದೆ ದೇಶಕ್ಕಾಗಿ ಹೋರಾಡಿದ ಯೋಧ.. ದೇಶದ್ರೋಹಿಯಾದ ಮಗ..!

Share :

Published April 13, 2024 at 9:23am

Update April 13, 2024 at 9:24am

    ನಿವೃತ್ತ ಯೋಧನ ಮಗ ಬೆಂಗಳೂರು ಕೆಫೆ ಬ್ಲಾಸ್ಟ್​ನ ಮಾಸ್ಟರ್ ಮೈಂಡ್

    ಉಗ್ರನನ್ನು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಕರೆತಂದು ವಿಚಾರಣೆ

    ಒಬ್ಬನೇ ಮಗ, ಕಳೆದ 4 ವರ್ಷಗಳಿಂದ ನಾಪತ್ತೆಯಾಗಿದ್ದ ಅಬ್ದುಲ್ ಮತೀನ್ ತಾಹ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹನನ್ನು ಕೊನೆಗೂ NIA ಅರೆಸ್ಟ್​​ ಮಾಡಿದ್ದಾರೆ. ಪಶ್ಚಿಮ ಬಂಗಾಳದಿಂದ ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಸದ್ಯ ಆತನ ವಿಚಾರಣೆ ನಡೆಯುತ್ತಿದೆ.

ಬಾಂಬ್​ ಬ್ಲಾಸ್ಟರ್​​ ಅಬ್ದುಲ್ ಮತೀನ್ ತಾಹ ಸಾಮಾನ್ಯ ವ್ಯಕ್ತಿ ಅಲ್ವೇ ಅಲ್ಲ. ಆತ ಪದವೀಧರ. ಆತನ ತಂದೆ ದೇಶಕ್ಕಾಗಿ ಹೋರಾಡಿದ ನಿವೃತ್ತ ಯೋಧ. ಆದರೆ ಈತನಿಗೇಕೆ ಇಂಥ ಕೆಟ್ಟಬುದ್ಧಿ ಬಂತು?. ಒಬ್ಬ ಯೋಧನ ಮಗನಾಗಿ ಬಾಂಬ್​ ಇಡುವ ಕೆಲಸ ಮಾಡಿದನೇ? ಅಬ್ದುಲ್ ಮತೀನ್ ತಾಹ ಬಾಲ್ಯ, ಪೋಷಕರು ಆತನ ಹಿನ್ನಲೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಬ್ದುಲ್​ ಮತೀನ್​ ತಾಹ ಅತ್ಯಂತ ಚುರುಕಾದ ಎಂಜಿನಿಯರಿಂಗ್ ಪದವೀಧರ. ತೀರ್ಥಹಳ್ಳಿಯಲ್ಲಿ ಪ್ರೌಢಶಾಲೆ ಮುಗಿಸಿ ಬೆಂಗಳೂರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದನು. ಬೆಂಗಳೂರಿಗೆ ಬಂದ ವೇಳೆ ಉಗ್ರರ ಸಂಪರ್ಕಕ್ಕೆ ಬಂದಿದ್ದನು.

ಅಬ್ದುಲ್​ ಮತೀನ್​ ತಾಹ ಪೋಷಕರಿಗೆ ಒಬ್ಬನೇ ಮಗನಾಗಿದ್ದನು. ಐಇಡಿ ಬಾಂಬ್ ತಯಾರಿಕೆಯ ಎಕ್ಸ್’ಪರ್ಟ್ ಆಗಿದ್ದನು. ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ ಈತ. ವಿವಿಧ ರಾಜ್ಯಗಳಲ್ಲಿ ನಾನಾ ಹೆಸರುಗಳಿಂದ ತಲೆಮರೆಸಿಕೊಂಡಿದ್ದನು.

ಈ ಹಿಂದೆ ಎನ್.ಐ.ಎ ತಾಹನ ಪತ್ತೆಗೆ ಮೂರು ಲಕ್ಷ ರಿವಾರ್ಡ್ ಘೋಷಿಸಿತ್ತು. ರಾಮೇಶ್ವರಂ ಕೆಫೆ ಬ್ಲಾಸ್ಟ್ ನಂತರ ಹತ್ತು ಲಕ್ಷ ರಿವಾರ್ಡ್ ಘೋಷಿಸಲಾಗಿತ್ತು. ಮಂಗಳೂರು ಕುಕ್ಕರ್ ಬ್ಲಾಸ್ಟ್, ರಾಮೇಶ್ವರಂ ಕೆಫೆ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಾಸ್ಟರ್ ಮೈಂಡ್ ಆಗಿದ್ದಾನೆ.

ಇದನ್ನೂ ಓದಿ: ಹೆಸರು ಚೇಂಜ್ ಮಾಡಿ ಓಡಾಟ, ಕೆಫೆ ಸ್ಫೋಟದ ಮಾಸ್ಟರ್​ಮೈಂಡ್​ ಬಗ್ಗೆ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ..?

ಇನ್ನು ಅಬ್ದುಲ್​ ಮತೀನ್​ ತಾಹ ತಂದೆ ದೇಶಕ್ಕಾಗಿ ಹೋರಾಡಿದ ಯೋಧ. ವರ್ಷದ ಹಿಂದೆ ಅವರು ಮೃತಪಟ್ಟಿದ್ದರು. ಆದರೆ ಅವರಿಗಿದ್ದ ಒಬ್ಬನೇ ಮಗ ಇಂತಹ ದಾರಿ ಹಿಡಿದಿದ್ದಾನೆ ಎಂದರೆ ನಂಬಲು ಅಸಾಧ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಫೆ ಸ್ಫೋಟದ ಮಾಸ್ಟರ್ ಮೈಂಡ್​​ನ ತಂದೆ ದೇಶಕ್ಕಾಗಿ ಹೋರಾಡಿದ ಯೋಧ.. ದೇಶದ್ರೋಹಿಯಾದ ಮಗ..!

https://newsfirstlive.com/wp-content/uploads/2024/04/Abdul-mAtin-taha.jpg

Load More