newsfirstkannada.com

‘ನೀವು ಕ್ಷಮೆ ಕೇಳ್ತಿಲ್ಲ.. ಎಚ್ಚರಿಕೆ ಕೊಡ್ತಿದ್ದೀರಿ’ ರಾಮೇಶ್ವರಂ ಕೆಫೆ ಮಾಲೀಕರ ವಿರುದ್ಧ ಭಾರೀ ಆಕ್ರೋಶ; ಕಾರಣವೇನು?

Share :

Published May 31, 2024 at 9:24am

    ದಿ ರಾಮೇಶ್ವರಂ ಕೆಫೆ ಸಂಸ್ಥಾಪಕರ ವಿಡಿಯೋಗೆ ನೆಟ್ಟಿಗರಿಂದ ಬೇಸರ

    ರಾಮೇಶ್ವರಂ ಕೆಫೆಯಲ್ಲಿ ಅವಧಿ ಮುಗಿದ ಬೇಳೆ, ಹಾಲು, ಮೊಸರು ಪತ್ತೆ!

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ರಾಘವೇಂದ್ರ ರಾವ್ ವಿಡಿಯೋ

ಬೆಂಗಳೂರು: ಮೊನ್ನೆಯಷ್ಟೇ ಹೈದರಾಬಾದ್ ಸಮೀಪದ ಮಾದಾಪುರದಲ್ಲಿ ದಿ ರಾಮೇಶ್ವರಂ ಕೆಫೆ ಹೋಟೆಲ್ ಮೇಲೆ ಫುಡ್ ಸೇಫ್ಟಿ ಕಮೀಷನರ್ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ಅವಧಿ ಮುಗಿದಿರುವ ಬೇಳೆ ಬಳಸಿ ಅಡುಗೆ ಮಾಡಿರುವುದು ತಿಳಿದುಬಂದಿದೆ. ಅವಧಿ ಮುಗಿದ 10 ಕೆಜಿ ನಂದಿನಿ ಮೊಸರು, 8 ಲೀಟರ್ ನಂದಿನಿ ಹಾಲು ಕೂಡ ಸಿಕ್ಕಿದೆ.

ಇದೇ ವಿಚಾರಕ್ಕೆ ಸಂಬಂಧಿದಂತೆ ದಿ ರಾಮೇಶ್ವರಂ ಕೆಫೆ ಸಂಸ್ಥಾಪಕರು ರಾಘವೇಂದ್ರ ರಾವ್ ವಿಡಿಯೋ ಮಾಡುವ ಮೂಲಕ ಗ್ರಾಹಕರಿಗೆ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ ರಾಘವೇಂದ್ರ ರಾವ್ ಅವರ ಕ್ಷಮೆಯಾಚನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: VIDEO: ಮಹಿಳೆ ಜತೆ ಅಕ್ರಮ ಸಂಬಂಧ; ಬೆಡ್​ ರೂಮ್​ನಲ್ಲಿ ಹೆಂಡತಿಗೆ ರೆಡ್​​ ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ!

ಹೌದು, ವಿಡಿಯೋ ಮಾಡುವ ಮೂಲಕ ಗ್ರಾಹಕರಲ್ಲಿ ಕ್ಷಮೆಯಾಚಿಸಿದ ರಾಮೇಶ್ವರಂ ಕೆಫೆ ಸಂಸ್ಥಾಪಕರು ರಾಘವೇಂದ್ರ ರಾವ್, ನಾವು ಜನತೆಗೆ ಭರವಸೆ ನೀಡಿದಂತೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡಲು ಬದ್ಧರಾಗಿದ್ದೇವೆ. ಕೆಲಸದ ವೇಳೆ ಸಣ್ಣ ತಪ್ಪುಗಳನ್ನು ಮಾಡಿದ್ದೇವೆ. ಇದಕ್ಕೆ ನಾನು ನಿಮ್ಮ ಬಳಿ ಕ್ಷೆಮೆ ಯಾಚಿಸುತ್ತೇನೆ. ನಾವು ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ ಕಲಾಂ ಅವರ ಹೆಜ್ಜೆಗಳನ್ನು ಪಾಲಿಸುತ್ತಿದ್ದೇವೆ. ಜಾಗತಿಕವಾಗಿ ನಮ್ಮ ಉದ್ಯಮವನ್ನು ವಿಸ್ತರಿಸೋದು ನಮ್ಮ ಉದ್ದೇಶ ಮತ್ತು ಗುರಿಯಾಗಿದೆ. ನಾವು ನಮ್ಮ ಕೆಫೆಯಲ್ಲಿ ಪ್ರೀಮಿಯಂ ಗುಣಮಟ್ಟದ ಆಹಾರ ಪದಾರ್ಥ ಮತ್ತು ತರಕಾರಿಯನ್ನು ಬಳಕೆ ಮಾಡುತ್ತೇವೆ. ಉತ್ತಮ ಗುಣಮಟ್ಟದಲ್ಲಿಯೇ ಆಹಾರವನ್ನು ತಯಾರಿಸಲಾಗುತ್ತದೆ. ಆಹಾರ ಇಲಾಖೆಯ ಅಧಿಕಾರಿಗಳು ಯಾವಾಗ ಬೇಕಾದ್ರೂ ನಮ್ಮ ಕೆಫೆಗೆ ಬಂದು ಪರಿಶೀಲನೆ ನಡೆಸಬಹುದು. ರೆಸ್ಟೊರೆಂಟ್‌ನಲ್ಲಿ ಬಳಸುವ ಬೇಳೆಕಾಳುಗಳು, ಮಸಾಲೆಗಳು ಮತ್ತು ತರಕಾರಿಗಳು ಸರಿಯಾದ ಗುಣಮಟ್ಟವನ್ನು ಹೊಂದಿವೆ ಎಂದಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಹೋಟೆಲ್ ಮೇಲೆ ರೇಡ್‌.. ಅವಧಿ ಮುಗಿದ ಬೇಳೆ, ಹಾಲು, ಮೊಸರು; ಜಿರಳೆ ಕೂಡ ಪತ್ತೆ!

ರಾಘವೇಂದ್ರ ರಾವ್ ಅವರು ಕ್ಷಮೆಯಾಚನೆ ವಿಡಿಯೋವನ್ನು ನೋಡಿದ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಘವೇಂದ್ರ ರಾವ್ ತಮ್ಮ ತಪ್ಪಿಗೆ ಕ್ಷಮೆ ಕೇಳುವ ಬದಲಾಗಿ ಜನತೆಗೆ ಬೆದರಿಕೆ ಹಾಕಿದಂತೆ ಕಾಣಿಸುತ್ತಿದೆ. ನಿಮ್ಮ ಮಾತಿನ ಶೈಲಿಯಲ್ಲಿ ನಮಗೆ ಯಾವುದೇ ಕ್ಷಮೆ ಭಾವನೆ ಕಾಣಿಸುತ್ತಿಲ್ಲ, ಬದಲಾಗಿ ವಾರ್ನಿಂಗ್​ ಕೊಡುವಂತೆ  ಕಾಣುತ್ತಿದೆ ಅಂತ ಹಲವರು ಕಮೆಂಟ್ ಮಾಡುವ ಮೂಲಕ ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನೀವು ಕ್ಷಮೆ ಕೇಳ್ತಿಲ್ಲ.. ಎಚ್ಚರಿಕೆ ಕೊಡ್ತಿದ್ದೀರಿ’ ರಾಮೇಶ್ವರಂ ಕೆಫೆ ಮಾಲೀಕರ ವಿರುದ್ಧ ಭಾರೀ ಆಕ್ರೋಶ; ಕಾರಣವೇನು?

https://newsfirstlive.com/wp-content/uploads/2024/05/rameshwaram-cafe-owner.jpg

Load More