newsfirstkannada.com

ಬಾಲರಾಮನ ಕೆನ್ನೆಗೆ ರಂಗು.. ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ಹೋಳಿ ಸಂಭ್ರಮದ ಫೋಟೋ ಬಿಡುಗಡೆ

Share :

Published March 24, 2024 at 2:42pm

Update March 24, 2024 at 3:26pm

    ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಮೊದಲ ಹೋಳಿ ಹಬ್ಬದ ಸಂಭ್ರಮ

    ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಸುಂದರ ಫೋಟೋ ಬಿಡುಗಡೆ

    ಭಕ್ತರಿಗೆ ರಾಮಲಲ್ಲಾನ ಕೆನ್ನೆ ಹಾಗೂ ಗಲ್ಲಾಕ್ಕೆ ಬಣ್ಣ ಹಚ್ಚಿದ ವಿಹಂಗಮ ನೋಟ

ಶ್ರೀರಾಮಜನ್ಮಭೂಮಿ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಮೊದಲ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಮಲಲ್ಲಾ ಮೂರ್ತಿಯ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರು ಹೋಳಿ ಸಡಗರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಲರ್‌ಫುಲ್ ಹೋಳಿಯ ಮಧ್ಯೆ ರಾಮಲಲ್ಲಾ ಮೂರ್ತಿಯ ಕೆನ್ನೆಗೂ ಬಣ್ಣ ಹಚ್ಚಿದ್ದು, ಈ ಸುಂದರ ಫೋಟೋಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಕಳೆದ ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅದ್ಧೂರಿಯಾಗಿ ನಡೆದಿತ್ತು. ಈ ಸಮಾರಂಭದ ಬಳಿಕ ಮೊದಲ ಹೋಳಿ ಹಬ್ಬ ಆಗಮಿಸಿದ್ದು, ಶ್ರೀರಾಮನ ಭಕ್ತರು ರಾಮಮಂದಿರಕ್ಕೆ ಭೇಟಿ ನೀಡಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ ಇಂದು ಭಕ್ತರು ಹೋಳಿ ಬಣ್ಣದ ಗುರುತಿನಲ್ಲೇ ಆಗಮಿಸಿದ್ದು ವಿಶೇಷವಾಗಿದೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಾಮಲಲ್ಲಾ ಮೂರ್ತಿಯನ್ನ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ರಾಮಲಲ್ಲಾನ ಕೆನ್ನೆಗಳು ಹಾಗೂ ಗಲ್ಲಾಕ್ಕೆ ಬಣ್ಣ ಹಚ್ಚಿರೋದು ನೋಡುಗಳ ಮನಸೂರೆ ಗೋಳಿಸಿದೆ.

ದೇಶಾದ್ಯಂತ ಇಂದು ಮತ್ತು ನಾಳೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೋಳಿ ಹಬ್ಬದ ವಿಶೇಷ ದಿನದಂದು ರಾಮನ ಭಕ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ವಾವ್ಹ್​! ಬಾಲಕನಿಗೆ ರಾಮಲಲ್ಲಾ ಮೂರ್ತಿಯಂತೆ ಮೇಕಪ್​! ಬಾಲ ರಾಮನಂತೆ ಕಂಡ 9 ವರ್ಷದ ಪೋರ!

ರಾಮಲಲ್ಲಾ ಮೂರ್ತಿ ಈ ವಿಶೇಷ ಅಲಂಕಾರದ ಬಗ್ಗೆ ರಾಮಮಂದಿರ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವರ್ಷದ ಹೋಳಿ ಹಬ್ಬ ಬಹಳಷ್ಟು ವಿಶೇಷವಾಗಿದೆ. ವಿಶೇಷ ಹಾಗೂ ಧನ್ಯತಾ ಭಾವದಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ರಾಮಲಲ್ಲಾ ಮೂರ್ತಿಗೂ ಬಣ್ಣ ಹಚ್ಚಲಾಗಿದೆ. ರಾಮನ ಭಕ್ತರಿಗೆ ಈ ವರ್ಷದ ಹೋಳಿ ನಿಜಕ್ಕೂ ವಿಶೇಷವಾದ ಹಬ್ಬ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲರಾಮನ ಕೆನ್ನೆಗೆ ರಂಗು.. ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ಹೋಳಿ ಸಂಭ್ರಮದ ಫೋಟೋ ಬಿಡುಗಡೆ

https://newsfirstlive.com/wp-content/uploads/2024/03/Ayodhya-holi-Habba.jpg

Load More