/newsfirstlive-kannada/media/post_attachments/wp-content/uploads/2024/06/ramoji-rao-2.jpg)
ರಾಮೋಜಿ ಫಿಲ್ಮ್​ ಸಿಟಿಯ ಮುಖ್ಯಸ್ಥ ರಾಮೋಜಿ ರಾವ್​ ನಿಧನರಾಗಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗಿನ ಜಾವ 4.30ಕ್ಕೆ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/06/ramoji-rao-3.jpg)
ಕೃಷಿ ಕುಟುಂಬದಿಂದ ಬಂದ ಅನ್ನದಾತ
ರಾಮೋಜಿ ರಾವ್​ ಅವರ ಪೂರ್ತಿ ಹೆಸರು ಚೆರಕುರಿ ರಾಮೋಜಿ ರಾವ್​. 16 ನವೆಂಬರ್​ 1936ರಲ್ಲಿ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಪೆದಪುರಿಯಲ್ಲಿ ಜನಿಸಿದರು. ಕೃಷಿ ಕುಟುಂಬದಿಂದ ಬಂದ ಇವರು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮೆರೆದರು. ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ.
ರಾಮೋಜಿ ಗ್ರೂಪ್​ನ ನಿರ್ಮಾಣ
ಉದ್ಯಮ ಕ್ಷೇತ್ರದಲ್ಲಿ, ಮಾಧ್ಯಮ ಮತ್ತು ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ಇವರು ಕೆಲಸ ಮಾಡಿದ್ದಾರೆ. ರಾಮೋಜಿ ಗ್ರೂಪ್​ನ ಅಧ್ಯಕ್ಷರಾಗುವ ಮೂಲಕ ಅನೇಕ ಜನರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಬೆಳಕು ಚೆಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2024/06/ramoji-rao-4.jpg)
ಅನೇಕ ಸಂಸ್ಥೆಗಳನ್ನು ಕಟ್ಟಿದ ಪುಣ್ಯಾತ್ಮ
ವಿಶ್ವ ವಿಖ್ಯಾತ ರಾಮೋಜಿ ರಾವ್​ ಫಿಲ್ಮ್​ ಸಿಟಿ, ಈನಾಡು ಪತ್ರಿಕೆ, ಈಟಿವಿ ನೆಟ್​​​​ವರ್ಕ್​, ಅನ್ನದಾತ-ನಿಯತಕಾಲಿಕೆ, ಉಷಾ ಕಿರಣ್​ ಮೂವೀಸ್​​, ಚಿಟ್​ಫಂಡ್​, ಡಾಲ್ಫಿನ್​ ಗ್ರೂಪ್​ ಆಫ್​ ಹೋಟೆಲ್​ಗಳು, ಕಲಾಂಜಲಿ ಶಾಪಿಂಗ್​ ಮಾಲ್​, ಪ್ರಿಯಾ ಉಪ್ಪಿನಕಾಯಿ, ಮಯೂರಿ ಡಿಸ್ಟ್ರಿಬ್ಯೂಟರ್ಸ್​ಗಳನ್ನು ನಿರ್ಮಿಸಿ ಮುನ್ನೆಸುತ್ತಿದ್ದರು.
ಇದನ್ನೂ ಓದಿ: 5 ಗಂಟೆಗಳ ಕಾಲ ಭವಾನಿ ರೇವಣ್ಣ ವಿಚಾರಣೆ.. ತನಿಖೆ ವೇಳೆ ಏನು ಹೇಳಿದ್ರು ಗೊತ್ತಾ?
/newsfirstlive-kannada/media/post_attachments/wp-content/uploads/2024/06/ramoji-rao-5.jpg)
ಪ್ರಶಸ್ತಿಗಳ ಸುರಿಮಳೆ
ಚೆರಕುರಿ ರಾಮೋಜಿ ರಾವ್ ಅವರ ಸಾಧನೆಗೆ ಪದ್ಮ ವಿಭೂಷಣವನ್ನು ನೀಡಿ ಗೌರವಿಸಲಾಗಿದೆ. ಇದಲ್ಲದೆ ಸಿನಿಮಾ ಕ್ಷೇತ್ರದಲ್ಲೂ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಾಲ್ಕು ಫಿಲ್ಮ್​ಫೇರ್​ ಪ್ರಶಸ್ತಿ, 5 ನಂದಿ ಪ್ರಶಸ್ತಿ, ತೆಲುಗು ಚಿತ್ರರಂಗದಿಂದ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ದೂರವಾದ ಚಂದನ್​-ನಿವೇದಿತಾ ಜೋಡಿಹಕ್ಕಿ.. ಇವ್ರ ಮೇಲೆ ಯಾರ ಕಣ್ಣು ಬಿತ್ತೋ ಎಂದ ಫ್ಯಾನ್ಸ್!
ಕನ್ನಡದಲ್ಲೂ ಸಿನಿಮಾ ಮಾಡಿದ ಖ್ಯಾತಿ
ಇನ್ನು ಕನ್ನಡ ಸಿನಿಮಾ ರಂಗಕ್ಕೂ ರಾಮೋಜಿ ರಾವ್​ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿ ನಿನಗಾಗಿ, ಚಿತ್ರಾ, ಆನಂದ, ಸವಾರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
/newsfirstlive-kannada/media/post_attachments/wp-content/uploads/2024/06/ramoji-rao-7.jpg)
ಮಗನನ್ನು ಕಳೆದುಕೊಂಡಿದ್ದರು
ರಾಮೋಜಿ ರಾವ್​ ಅವರ ಬಾಳ ಸಂಗಾತಿ ರಮಾ ದೇವಿ. ಇವರ ಕಿರಿಯ ಮಗ ಚೆರಕುರಿ ಸುಮನ್​ 7 ಸೆಪ್ಟೆಂಬರ್​ 2012ರಲ್ಲಿ ಲ್ಯುಕೇಮಿಯಾದಿಂದ ಕೊನೆಯುಸಿರೆಳೆದರು.
ಉಸಿರು ಚೆಲ್ಲಿದ ರಾಮೋಜಿ ರಾವ್
ಇಂದು ರಾಮೋಜಿ ರಾವ್​ ನಿಧನರಾಗಿದ್ದು, ಓರ್ವ ಮಗ ಕಿರಣ್​ ಪ್ರಭಾಕರನ್ನು ಅಗಲಿದ್ದಾರೆ. ಇವರ ಸಾವಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us