RamojiRao: ‘ಅನ್ನದಾತ’ ಅಮರ್ ರಹೇ.. ರಾಮೋಜಿ ರಾವ್‌ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

author-image
admin
Updated On
RamojiRao: ‘ಅನ್ನದಾತ’ ಅಮರ್ ರಹೇ.. ರಾಮೋಜಿ ರಾವ್‌ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
Advertisment
  • ಈನಾಡು ಸಮೂಹ ಸಂಸ್ಥೆಯ ಮುಖ್ಯಸ್ಥ ರಾಮೋಜಿ ರಾವ್ ಇನ್ನಿಲ್ಲ
  • ರಾಮೋಜಿ ರಾವ್ ನಿಧನಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟರಿಂದ ಕಂಬನಿ
  • ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನ

ಹೈದರಾಬಾದ್‌: ರಾಮೋಜಿ ಫಿಲ್ಮ್‌ ಸಿಟಿ ಸಂಸ್ಥಾಪಕ, ಈನಾಡು ಸಮೂಹ ಸಂಸ್ಥೆಯ ಮುಖ್ಯಸ್ಥ ರಾಮೋಜಿ ರಾವ್ ಅವರು ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ 4.50ಕ್ಕೆ ರಾಮೋಜಿ ರಾವ್ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಕೇವಲ 5 ದಿನದಲ್ಲಿ 850 ಕೋಟಿ ರೂ ಗಳಿಕೆ..! CM ಆಗುವ ಮೊದಲೇ ಚಂದ್ರಬಾಬು ನಾಯ್ಡು ಕುಟುಂಬ ಶ್ರೀಮಂತ..! 

88 ವರ್ಷದ ಧೀಮಂತ ಉದ್ಯಮಿ ರಾಮೋಜಿ ರಾವ್ ಅವರ ನಿಧನಕ್ಕೆ ಇಡೀ ತೆಲುಗು ಚಿತ್ರರಂಗವೇ ದಿಗ್ಭ್ರಮೆ ವ್ಯಕ್ತಪಡಿಸಿದೆ. ನಿಯೋಜಿತ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಸೇರಿದಂತೆ ದೇಶದ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:‘ಅನ್ನದಾತ’ ರಾಮೋಜಿ ರಾವ್​.. ಕೃಷಿ ಕುಟುಂಬದಿಂದ ಬಂದು ಬಡವರ ಹಸಿವು ನೀಗಿಸಿದ ಪುಣ್ಯಾತ್ಮ 

ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಅವರೇ ಕಟ್ಟಿ ಬೆಳೆಸಿದ ರಾಮೋಜಿ ಫಿಲ್ಮ್‌ ಸಿಟಿಗೆ ತರಲಾಗಿದೆ. ರಾಮೋಜಿ ಫಿಲ್ಮ್ ಸಿಟಿಯ ಪ್ರಧಾನ ಕಚೇರಿಯಲ್ಲಿ ರಾಮೋಜಿ ರಾವ್ ಅವರಿಗೆ ಅಂತಿಮ ನಮನ ಸಲ್ಲಿಸಲಾಗುತ್ತಿದೆ.

publive-image

ರಾಮೋಜಿ ರಾವ್ ಅವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆಯಿಂದ ರಾಮೋಜಿ ಫಿಲ್ಮ್‌ ಸಿಟಿಗೆ ತೆಲುಗು ಚಿತ್ರರಂಗದ ಅನೇಕ ಗಣ್ಯರು ಆಗಮಿಸುತ್ತಿದ್ದಾರೆ. ನಿರ್ದೇಶಕ ರಾಜಮೌಳಿ ಅವರು ರಾಮೋಜಿ ರಾವ್ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಗಣ್ಯರ ಜೊತೆಗೆ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ರಾಮೋಜಿ ರಾವ್ ಅವರ ಅಂತಿಮ ದರ್ಶನಕ್ಕೆ ಅಭಿಮಾನಿಗಳ ದಂಡೇ ಹರಿದು ಬರ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಮೋಜಿ ರಾವ್ ಅವರಿಗೆ ಅಂತಿಮ ನಮನ ಸಲ್ಲಿಸಲು ಜನಸಾಗರ ಕಾಯುತ್ತಾ ನಿಂತಿದೆ.


">June 8, 2024

ಬದುಕಿನುದ್ದಕ್ಕೂ ಸವಾಲುಗಳನ್ನು ಮೆಟ್ಟಿ ನಿಂತ ಧೀಮಂತ ವ್ಯಕ್ತಿಗೆ ಭಾವಪೂರ್ಣ ನಮನ ಸಲ್ಲಿಸಲಾಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇಂದು ಗಣ್ಯರು, ಅಭಿಮಾನಿಗಳಿಗೆ ಅಂತಿಮ ದರ್ಶನ ನೀಡಿದ ಬಳಿಕ ಸಕಲ ಸರ್ಕಾರ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ. ರಾಮೋಜಿ ರಾವ್ ಅವರ ಕುಟುಂಬಸ್ಥರ ತೀರ್ಮಾನದಂತೆ ನಾಳೆ ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ಅಂತ್ಯಕ್ರಿಯೆ ನೆರವೇರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment