ಹೇಮಾ ಮಾಲಿನಿ ಬಗ್ಗೆ ‘ಸೆಕ್ಸಿ’ ಕಾಮೆಂಟ್.. ಸುರ್ಜೇವಾಲಾ ಮೇಲೆ ಮುಗಿಬಿದ್ದ ಬಿಜೆಪಿ; ಅಸಲಿಗೆ ಆಗಿದ್ದೇನು?

author-image
Veena Gangani
Updated On
ಹೇಮಾ ಮಾಲಿನಿ ಬಗ್ಗೆ ‘ಸೆಕ್ಸಿ’ ಕಾಮೆಂಟ್.. ಸುರ್ಜೇವಾಲಾ ಮೇಲೆ ಮುಗಿಬಿದ್ದ ಬಿಜೆಪಿ; ಅಸಲಿಗೆ ಆಗಿದ್ದೇನು?
Advertisment
  • ಹೇಮಾ ಮಾಲಿನಿ ಅವರನ್ನು ಅವಮಾನಿಸುವುದು, ನೋಯಿಸುವುದು ನನ್ನ ಉದ್ದೇಶವಲ್ಲ!
  • ಮಹಿಳೆಯರ ಕೆಂಗಣ್ಣಿಗೆ ಗುರಿಯಾದ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಸುರ್ಜೇವಾಲ ಸೆಕ್ಸಿ ಹೇಳಿಕೆ

ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ಬಿಜೆಪಿ ಸಂಸದೆ ಹೇಮಾ ಮಾಲಿನಿ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾದ ಹೇಳಿಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಶಾಸಕರು, ಸಂಸದರನ್ನು ನಾವು ಆಯ್ಕೆ ಮಾಡುವುದು ಯಾಕೆ? ನಮ್ಮ ಪರ ಧ್ವನಿ ಎತ್ತಿ, ನಮ್ಮ ಪರವಾಗಿ ಕೆಲಸ ಮಾಡಲು. ಆದರೆ ಹೇಮಾಮಾಲಿನಿಯವರನ್ನು ನೆಕ್ಕಲು ಬಿಜೆಪಿ ನಾಯಕರು ಅವರನ್ನ ಸಂಸದೆಯನ್ನಾಗಿ ಮಾಡಿದ್ದಾರೆ ಎಂದಿದ್ದಾರೆ ಅನ್ನೋ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ:‘ಅಮೃತಧಾರೆ’​ ಸೀರಿಯಲ್​ ನೋಡೋದಿಲ್ಲ.. ನಿರ್ದೇಶಕರ ಮೇಲೆ ಮುನಿಸಿಕೊಂಡ ಪ್ರೇಕ್ಷಕರು; ಕಾರಣವೇನು..?

ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್​ ಆದ ವಿಡಿಯೋದಲ್ಲಿ ರಣದೀಪ್‌ ಸುರ್ಜೆವಾಲಾ ಅವರು, ಸಂಸದೆ ಹೇಮಾ ಮಾಲಿನಿ ಅವರು ಬ್ಯೂಟಿಗಾಗಿಯೇ ಸಂಸದೆಯನ್ನಾಗಿ ಆಯ್ಕೆ ಮಾಡಿದ್ದಾರೆ. ಸಂಸದರು ಆಕೆಯನ್ನೇ ಕಣ್ಣು ಮಿಟುಕಿಸಿದಂತೆ ನೋಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಈ ವಿಡಿಯೋಗೆ ಸ್ಪಷ್ಟನೆ ನೀಡಿರುವ ಸುರ್ಜೇವಾಲಾ ಅವರು ಹೇಮಾ ಮಾಲಿನಿ ಅವರನ್ನು ಅವಮಾನಿಸುವುದು ಅಥವಾ ಯಾರನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ. ಹೇಮಾ ಮಾಲಿನಿ ಅವರ ಮೇಲೆ ಅಪಾರ ಗೌರವ ಇದೆ. ಏಕೆಂದರೆ ಅವರು ಧರ್ಮೇಂದ್ರ ಅವರನ್ನು ಮದುವೆಯಾಗಿದ್ದಾರೆ. ಹಾಗಾಗಿ ಅವರು ನಮ್ಮೂರ ಸೊಸೆ ಎಂದು ಹೇಳಿದ್ದಾರೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ರಣದೀಪ್‌ ಸುರ್ಜೆವಾಲಾ ಅವರು ಸ್ತ್ರೀ ದ್ವೇಷಿ ಹೇಳಿಕೆಯ ವಿರುದ್ಧ ಬಿಜೆಪಿ ಕಿಡಿಕಾರಿದೆ. ಬಿಜೆಪಿಯ ಅಮಿತ್ ಮಾಳವಿಯಾ ಅವರು ಕೂಡ ವಿಡಿಯೋವನ್ನು ಶೇರ್ ಮಾಡಿಕೊಂಡು ಸುರ್ಜೇವಾಲಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯರ ಬಗ್ಗೆ ಯಾರು ಯೋಚನೆ ಮಾಡ್ತಾರೆ. ಮಹಿಳೆಯರ ಬಗ್ಗೆ ಈ ರೀತಿ ಮಾತಾಡಿರುವುದು ಅತ್ಯಂತ ಅಸಹ್ಯಕರವಾಗಿದೆ. ಈ ಹಿಂದೆ ಸುರ್ಜೇವಾಲಾ ಪಕ್ಷದ ಸದಸ್ಯರೊಬ್ಬರು ಬಿಜೆಪಿಯ ಮಹಿಳಾ ನಾಯಕಿಯ ರೇಟ್‌ ಎಷ್ಟು ಎಂದು ಕೇಳಿದ್ದರು. ಈಗ ಈ ಹೇಳಿಕೆ ಸ್ತ್ರೀದ್ವೇಷದ ಹೇಳಿಕೆ ಮಾತ್ರವಲ್ಲ, ಮಹಿಳೆಯರನ್ನು ಅಸಹ್ಯಕರವಾಗಿ ತೋರಿಸುವ ಯೋಚನೆಯಾಗಿದೆ ಎಂದು ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment