/newsfirstlive-kannada/media/post_attachments/wp-content/uploads/2024/08/PRAMODA_DEVI.jpg)
ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಹಾಗೂ ಮೈಸೂರು ರಾಜವಂಶಸ್ಥರ ಮಧ್ಯೆ ಜಟಾಪಟಿ ಶುರುವಾಗಿದೆ. ಹಲವು ವರ್ಷದಿಂದ ರಾಜಮನೆತನದವರು ದೇವಿಗೆ ಸಂಕಲ್ಪ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಚಾಮುಂಡಿ ದೇವಾಲಯ ರಾಜಮನೆತನದ ಅವಿಭಾಜ್ಯ ಅಂಗವಾಗಿದೆ. ಆದರೆ ರಾಜ್ಯ ಸರ್ಕಾರ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹೊಸ ಅಧಿನಿಯಮ ಜಾರಿಗೆ ತರಲು ಮುಂದಾಗಿದೆ. ಸರ್ಕಾರದ ಈ ನಡೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ
ಈ ಸಂಬಂಧ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಹೊಸ ಅಧಿನಿಯಮ ರದ್ದು ಮಾಡಬೇಕು ಎಂದು ಪ್ರಮೋದಾ ದೇವಿಯವರು ಮನವಿ ಮಾಡಿದ್ದಾರೆ. ಅವರು ರದ್ದು ಮಾಡುವಂತೆ ಕೋರಿರುವ ಅರ್ಜಿಯಲ್ಲಿ ಏನೇನು ಮನವಿಗಳು ಇವೆ ಎಂಬ ಮಾಹಿತಿ ಇಲ್ಲಿ ವಿವರವಾಗಿ ಇವೆ.
ಇದನ್ನೂ ಓದಿ: RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ.. ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?
ಪ್ರಮೋದಾ ದೇವಿ- ಪ್ರಶ್ನೆ 01
- ಸೆ.2(ಎ) ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024
- ಬೆಟ್ಟದ ಸಂಪೂರ್ಣ ಸೌಕರ್ಯಗಳ ಬಗ್ಗೆ ಸರ್ಕಾರದಿಂದ ತಿರ್ಮಾನ
- ರಸ್ತೆ, ಲೈಟ್ಸ್, ಕ್ಲೀನ್, ಅಂಗಡಿ, ಮಾರ್ಕೆಟ್, ಚರಂಡಿ, ಪೊಲೀಸ್
- ಹಾಲಿನ ಅಂಗಡಿ, ಮನರಂಜನೆ ಕಾರ್ಯಕ್ರಮಗಳು ಸೇರಿ ಎಲ್ಲಾ
- ರಾಜ್ಯ ಸರ್ಕಾರದ ಅಧಿಸೂಚನೆ ಮೇಲೆ ನಡೆಸಲು ಅಧಿಕಾರ ಕಾಯ್ದೆ
ಪ್ರಮೋದಾ ದೇವಿ- ಪ್ರಶ್ನೆ 02
- ಸೆ.3 ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾ. ಅಧಿನಿಯಮ
- ರಾಜಮನೆತನಕ್ಕೆ ಅಲ್ಲಿ ಯಾವ ಮಧ್ಯಸ್ತಿಕೆ ತೆರವು ಆಗಿದೆ
- ಪ್ರಾಧಿಕಾರದ ರಚನೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಸೇರಿದ್ದು
- ಅದರ ಅಧ್ಯಕ್ಷ ಸ್ಥಾನ ಸಿಎಂ ಅಂತಾ ಸರ್ಕಾರದಿಂದ ಕಾಯ್ದೆ
- ಪ್ರಾಧಿಕಾರದ ಪದಾಧಿಕಾರಿಗಳಲ್ಲಿ ರಾಜಮನೆತನವೇ ಇಲ್ಲ
- ಸ್ಥಳೀಯ ಸಚಿವ, ಶಾಸಕ, ಎಂಪಿ ಮತ್ತು ಅಧಿಕಾರಿಗಳು ಇದ್ದಾರೆ
ಪ್ರಮೋದಾ ದೇವಿ- ಪ್ರಶ್ನೆ 03
- ಸೆ.12 (1) ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ರಾಜಮನೆತನದ ಪೂರ್ತಿ ಅಧಿಕಾರ ಮೊಟುಕುಗೊಳಿಸಲಾಗಿದೆ
- ಅಭಿವೃದ್ಧಿ ಪ್ರಾಧಿಕಾರದ ನೌಕರರ ನೇಮಕ ಮಾಡುವ ವಿಚಾರ
- ಅರ್ಚಕರು, ನೌಕರರ ನೇಮಿಸುವ ಅಧಿಕಾರ ಸರ್ಕಾರದ ಕೈಯಲ್ಲಿ
ಪ್ರಮೋದಾ ದೇವಿ- ಪ್ರಶ್ನೆ 04
- ಸೆ.14(3) ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ಪ್ರಾಧಿಕಾರದ ಸಭೆಯ ತಿರ್ಮಾನಗಳ ಬಗ್ಗೆ ಸರ್ಕಾರಕ್ಕೆ ಅಧಿಕಾರ
- ಯಾವುದೇ ತಿರ್ಮಾನ ಇದ್ದರೂ ಅದು ಸರ್ಕಾರ ಮಾತ್ರ ನಿರ್ಣಯ
ಪ್ರಮೋದಾ ದೇವಿ- ಪ್ರಶ್ನೆ 05
- ಸೆ.14 (4) ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ಪ್ರಾಧಿಕಾರದ ತೀರ್ಮಾನಗಳು ಜಾರಿ ಮಾಡೋದು ಕಾರ್ಯದರ್ಶಿ
- ರಾಜ್ಯ ಸರ್ಕಾರದ ಆದೇಶಗಳನ್ನೂ ಜಾರಿ ಮಾಡುವ ಅಧಿಕಾರವಿದೆ
ಪ್ರಮೋದಾ ದೇವಿ- ಪ್ರಶ್ನೆ 06
- ಸೆ.16(1) ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024
- ಪ್ರಾಧಿಕಾರದ ತಿರ್ಮಾನದ ಸುತ್ತೋಲೆಯೂ ಸಿಎಂ ಮೂಲಕ ಬಿಡುಗಡೆ
ಪ್ರಮೋದಾ ದೇವಿ- ಪ್ರಶ್ನೆ 07
- ಸೆ.17(1) ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ರಾಜಮನೆತನಕ್ಕೆ ಪ್ರಾಧಿಕಾರದ ಮಾಹಿತಿಯ ಅವಕಾಶವೂ ವಂಚನೆ
- ತುರ್ತಾಗಿ ಯಾವುದೇ ನಿರ್ಧಾರ ತೆಗದುಕೊಳ್ಳುವ ಅಧಿಕಾರ ಸಿಎಂಗಿದೆ
- ಅಧ್ಯಕ್ಷರಾದ ಸಿಎಂಗೆ ತಾವು ಭಾವಿಸಿದ ತಿರ್ಮಾನ ಮಾಡುವ ಅಧಿಕಾರ
ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?
ಪ್ರಮೋದಾ ದೇವಿ- ಪ್ರಶ್ನೆ 08
- ಸೆ. 20(1)(ಒ) ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ರಾಜಮನೆತನಕ್ಕೂ ದೇವಾಲಯದ ಪ್ರಾಧಿಕಾರದ ಅಧಿಕಾರವೇ ಕಟ್
- ಚಾಮುಂಡಿ ಪ್ರಾಧಿಕಾರದ ಸ್ವತ್ತಿನ ಮಾರಾಟದ ಅಧಿಕಾರ ನಿಗಮದ್ದು
- ಬೆಟ್ಟದ ಯಾವುದೇ ಆಸ್ತಿ ಮಾರಾಟ, ಬಾಡಿಗೆಗೆ ನೀಡುವ ಅಧಿಕಾರ
- ಬೇಕಿದ್ದರೆ ಎಕ್ಸ್ಚೇಂಜ್ ಮಾಡಿಕೊಳ್ಳುವ ಅಧಿಕಾರವೂ ನಿಗಮಕ್ಕೆ ಇದೆ
- ಅದರಲ್ಲೂ ನಿಗಮದ ಅಧ್ಯಕ್ಷರಾಗಿರುವ ಸಿಎಂಗೆ ಅಧಿಕಾರ ಇರುತ್ತದೆ
ಪ್ರಮೋದಾ ದೇವಿ- ಪ್ರಶ್ನೆ 09
- ಸೆ. 20(2) ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ರಾಜಮನೆತನದ ಚಾಮುಂಡಿ ಬೆಟ್ಟವನ್ನ ಕಸಿದುಕೊಂಡಿರುವ ಆರೋಪ
- ಬೆಟ್ಟದ ಆಸ್ತಿ ಮಾರಾಟ ಮಾಡುವ ಸಂಪೂರ್ಣ ಅಧಿಕಾರ ಸರ್ಕಾರದ್ದು
- ಪ್ರಾಧಿಕಾರದ ನಿರ್ಧಾರದ ಮೇಲೆ ಅನುಮೋದನೆ & ತಿದ್ದುಪಡಿ ಅಧಿಕಾರ
ಪ್ರಮೋದಾ ದೇವಿ- ಪ್ರಶ್ನೆ 10
- ಸೆ.25 ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ಚಾಮುಂಡಿ ಬೆಟ್ಟದ ನಿಧಿಯ ಅಧಿಕಾರ ಸಂಪೂರ್ಣ ಸರ್ಕಾರದ್ದು
- ಬರುವ ದೇಣಿಗೆ, ಕಾಣಿಕೆ, ಸೇವಾಶುಲ್ಕ, ಹುಂಡಿ ಎಲ್ಲಾ ಸರ್ಕಾರಕ್ಕೆ
- ನಿಧಿಯ ಬಳಕೆ ಅಧಿಕಾರವೂ ಸಹ ಪ್ರಾಧಿಕಾರ & ಸರ್ಕಾರಕ್ಕೆ
ಪ್ರಮೋದಾ ದೇವಿ- ಪ್ರಶ್ನೆ 11
- ಸೆ.19 ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ತಾವೇ ನಿರ್ಮಿಸಿದ ದೇವಾಲಯದಲ್ಲಿ ರಾಜಮನೆತನಕ್ಕೆ ಏನು ಇಲ್ಲ
- ಚಾಮುಂಡಿ ಬೆಟ್ಟದ ಸಂಪೂರ್ಣ ಆಸ್ತಿ ಅಧಿಕಾರ ಸರ್ಕಾರಕ್ಕೆ ಸೇರಿದ್ದು
- ಸ್ಥಿರ & ಚರ ಎಲ್ಲಾ ಆಸ್ತಿಗಳ ಮೇಲೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ
- ಎಲ್ಲವನ್ನ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲು ಸರ್ಕಾರದ ನಿರ್ಧಾರ
ಪ್ರಮೋದಾ ದೇವಿ- ಪ್ರಶ್ನೆ 12
- ಸೆ.35(2) ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ರಾಜಮನೆತನದ ಎಲ್ಲಾ ಪುರಾತನ ಆಸ್ತಿ ಸರ್ಕಾರಕ್ಕೆ ಸೇರ್ಪಡೆ
- ಪ್ರಾಧಿಕಾರ ವಿಸರ್ಜನೆಯ ಅಧಿಕಾರ ವಿಧಾನಸಭೆಗೆ ಸೇರುತ್ತದೆ
- ವಿಧಾನಸಭೆಯಲ್ಲಿ ಮಂಡಿಸಿ ವಿಘಟನೆ ಮಾಡಲು ನಿರ್ಧಾರ
ಪ್ರಮೋದಾ ದೇವಿ- ಪ್ರಶ್ನೆ 13
- ಸೆ.40 ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ
- ರಾಜಮನೆತದ ಹೆಸರಲ್ಲಿ ಸಂಕಲ್ಪದಲ್ಲಿ ಮಾಡ್ತಿದ್ದ ಪೂಜೆಗೂ ಬ್ರೇಕ್
- ಪ್ರಾಧಿಕಾರಕ್ಕೂ ರಾಜಮನೆತನಕ್ಕೂ ಸಂಬಂಧ ಇಲ್ಲದಂತೆ ನಿರ್ಧಾರ
- ದೇವಾಲಯದ ಆಚರಣೆಗಳು ಎಲ್ಲವೂ ಬದಲಾವಣೆ ಮಾಡಲಾಗ್ತಿದೆ
ದಾಖಲೆಗಳು ಏನು ಹೇಳುತ್ತೆ?
- 1831ರಲ್ಲಿ ಬ್ರಿಟೀಷ್ ಸರ್ಕಾರ ಮೈಸೂರು ಆಡಳಿತ ವಹಿಸಿಕೊಂಡಿತ್ತು
- ಆಗ ಮುಜರಾಯಿ ಕಮಿಷನ್ಗೆ ಆಡಳಿತವನ್ನ ವರ್ಗಾವಣೆ ಮಾಡಿತ್ತು
- ಆನಂತರ ಅರಮನೆ ಮುಜರಾಯಿ ಸಂಸ್ಥೆಗಳು ಅಂತಾ ಬದಲಾವಣೆ
- ಅದು ಮಹಾರಾಜರ ಬಳಿಯೇ ಅಂದಿನಿಂದಲೂ ಉಳಿದುಕೊಂಡಿದೆ
- ಹೆಚ್.ಪಿ ಶಶಿಧರಮೂರ್ತಿಯವರ ಬುಕ್ನಲ್ಲಿ ಈ ಬಗ್ಗೆ ಉಲ್ಲೇಖ ಇದೆ
- ಕರ್ನಾಟಕ ಸ್ಟೇಟ್ ಆರ್ಚಿವ್ ಡಿಪಾರ್ಟ್ಮೆಂಟ್ ಮುಜರಾಯಿ ಬುಕ್
- 1970-71 ರಿಂದ ರಾಜಮನೆತನದ ಒಡೆತನದಲ್ಲಿ ಕಾರ್ಯ ಮಾಡುತ್ತಿದೆ
- 1986 ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಸಾವು ಸಂಭವಿಸುತ್ತೆ
- ಆಗ ಮುಜರಾಯಿ ಇಲಾಖೆಯ ಸರ್ಕಾರದ ಸುಪರ್ದಿಗೆ ನೀಡಲಾಗಿತ್ತು
- ಅ.20, 1908ರಲ್ಲಿ ಮಹಾರಾಜ ಇಲಾಖೆಯಿಂದ ಆದೇಶ ಮಾಡಿದ್ರು
- ಚಾಮುಂಡಿ ದೇವಾಲಯದ ಸೇರಿ 12 ದೇವಾಲಯಗಳ ಬಗ್ಗೆ ಆದೇಶ
- 12 ದೇವಾಲಯಗಳನ್ನ ಅರಮನೆ ಇಲಾಖೆಗೆ ವರ್ಗಾಯಿಸಿ ಆದೇಶ
- ಅಷ್ಟು ದೇವಾಲಯಗಳು ಒರ್ವ ಅಧಿಕಾರಿ ನೋಡಿಕೊಳ್ಳಲು ನೇಮಕ
- 20-01-1909 ರಲ್ಲಿ ಡಿಸಿ ಮೈಸೂರಿಗೆ ಮ್ಯಾನೇಜ್ ಮಾಡಲು ಆದೇಶ
- ಏ.14, 1920ರಲ್ಲಿ ಅರಮನೆ ಇಲಾಖೆ ಆಡಳಿತ ಮಂಡಳಿ ಆದೇಶವಿದೆ
- ಅದರಲ್ಲಿ ಒಟ್ಟು 29 ದೇವಾಲಯಗಳು ಮಹಾರಾಜರ ಆಡಳಿದಲ್ಲಿದ್ದವು
- ಜ.23, 1950 ರಲ್ಲಿ ಭಾರತ ಸರ್ಕಾರ & ಮಹಾರಾಜರ ನಡುವೆ ಒಪ್ಪಂದ
- ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರುವಾಗ ಮಾಡಿದ್ದ ಒಪ್ಪಂದ
- 29 ದೇವಾಲಯಗಳ ಮೇಲೆ ರಾಜಮನೆತಕ್ಕೆ ಫುಲ್ ಮಾಲೀಕತ್ವವಿದೆ
- 15-8-47ರ ತನಕ ಇದ್ದ ಆಸ್ತಿಗಳ ಮೇಲೆ ಹಕ್ಕು ಹೊಂದಿರುವ ಒಪ್ಪಂದ
- ಇದಕ್ಕೆ ಮಹಾರಾಜ ಮತ್ತು ಸಿಎಸ್ ಆಫ್ ಭಾರತ ಸರ್ಕಾರದ ಸಹಿ ಇದೆ
- ಫೆಬ್ರವರಿ 6, 1951ರ ಮೈಸೂರು ಸರ್ಕಾರದ ಆದೇಶದಲ್ಲಿ ಉಲ್ಲೇಖ
- ಅರಮನೆ ಮುಜರಾಯಿ ಆಸ್ತಿ ಮಹಾರಾಜರಿಗೆ ಸೇರಿವೆ ಎಂದು ಆದೇಶ
ಇದನ್ನೂ ಓದಿ: ಕೊಹ್ಲಿ, ಜಡ್ಡು, ರೈನಾ ಸೇರಿ 6 ಆಟಗಾರರ ರೆಸ್ಟೋರೆಂಟ್ ಬ್ಯುಸಿನೆಸ್ ಸಕ್ಸಸ್.. ಬೆಂಗಳೂರಲ್ಲಿ ಯಾವ ಪ್ಲೇಯರ್ದಿದೆ?
ಅರಮನೆಯ ಒಪ್ಪಂದಗಳೇನು?
ಡಿಸೆಂಬರ್ 3 1957ರಲ್ಲಿ ಅರಮನೆ ಮುಜರಾಯಿ ಇಲಾಖೆಯಿಂದ ಷರತ್ತುಗಳ ಮೇಲೆ ರಾಜರ ಆಸ್ತಿಗಳಿಗೆ ಸಾರ್ವಜನಿಕ ಪ್ರವೇಶ ನೀಡುವ ನಿರ್ಧಾರ ಮಾಡಲಾಗುತ್ತದೆ. ಇದರ ಜೊತೆ ಒಂದು ಷರತ್ತಿನ ದಾಖಲೆ ಸಹ ಸೆಕ್ರೆಟರಿ ನೀಡುತ್ತಾರೆ. ಭಾರತ ಸರ್ಕಾರದ ಸೆಕ್ಯೂರಿಟಿ ನೋಟ್ನಲ್ಲಿ ಇದನ್ನ ಸ್ಪಷ್ಟವಾಗಿ ಹೇಳಲಾಗಿದೆ. ಇಷ್ಟು ಪ್ರಾಪರ್ಟಿಗಳು ರಾಜಮನೆತನಕ್ಕೆ ಸೇರಿದ್ದು ಎಂದು ನೀಡುತ್ತಾರೆ. ಈ ಬಗ್ಗೆ 26ನೇ ಸಂವಿಧಾನ ತಿದ್ದುಪಡಿಯಲ್ಲಿ ಮತ್ತೊಂದು ಪ್ರಮುಖ ಸಾಕ್ಷಿಯಿದೆ. ಅದು ಏನ್ ಅಂದರೆ ಭಾರತ ಸರ್ಕಾರದ ಜಂಟಿ ಸೆಕ್ರೆಟರಿ ಮೆಮೊದಲ್ಲಿ ಸಹ ಇದು ಉಲ್ಲೇಖವಿದೆ. 20-10-1972 ಜಂಟಿ ಕಾರ್ಯದರ್ಶಿಯ ಮೆಮೊದಲ್ಲೂ ಸ್ಪಷ್ಟವಾಗಿದೆ. ರಾಜರುಗಳ ಬಳಿಯಿದ್ದ ಆಸ್ತಿಗಳು ಅವರ ಬಳಿಯೇ ಉಳಿಯುತ್ತವೆ ಎಂದು ಇದೆ.
ಆನಂತರ 28-9-74 ರಲ್ಲಿ ರಾಜ್ಯ ಸರ್ಕಾರದಿಂದ ಚಾಮುಂಡಿ ದೇಗುಲ ಮತ್ತು ಪ್ಯಾಲೇಸ್ಗೆ ಮೇಂಟೆನೆನ್ಸ್ ಕಮಿಟಿ ನಿರ್ಧಾರ ಮಾಡುತ್ತದೆ. ಆದರೆ ಆಗ 2 ವರ್ಷವಾದ್ರೂ ಇದು ಜಾರಿಗೆ ತರಲು ಸಾಧ್ಯವಾಗಲ್ಲ. ರಾಜ ಜಯಚಾಮರಾಜೇಂದ್ರ ಒಡೆಯರ್ ನಿಧನದ ಬಳಿಕ ಜಾರಿಗೆ ನಿರ್ಧಾರ ಮಾಡಲಾಗುತ್ತದೆ. ಅದರಂತೆ ರಾಜ್ಯ ಸರ್ಕಾರ ಅರಮನೆ ಮುಜರಾಯಿಯನ್ನು, ಅರಮನೆ ದೇವಾಲಯದ ದಾಖಲೆಗಳು, ಚಿನ್ನಾಭರಣ ವಶಕ್ಕೆ ಪಡೆಯತ್ತದೆ.
ಇದಕ್ಕೆ ಶ್ರೀಕಂಠದತ್ತ ಒಡೆಯರ್ ಲೀಗಲ್ ನೋಟಿಸ್ ಜಾರಿ ಮಾಡಿ ಸರ್ಕಾರ ರಚನೆ ಮಾಡಿರುವ ಕಮಿಟಿಯ ತೆರವುಗೊಳಿಸಬೇಕು ಎಂದು ರಿಟ್ ಅರ್ಜಿ ಸಲ್ಲಿಕೆ ಮಾಡ್ತಾರೆ. 14-03-1986 ರಲ್ಲಿ ಸರ್ಕಾರದ 1974 ಆದೇಶ ರದ್ದು ಕೋರಿಕೆ ಮಾಡ್ತಾರೆ. ಇದರ ನಡುವೆ 2001ರಲ್ಲಿ ಚಾಮುಂಡಿ ಬೆಟ್ಟದ ಬಗ್ಗೆ ರಿಟ್ ಬಾಕಿ ಇದೆ. ಸುಮಾರು ವರ್ಷಗಳ ಕಾನೂನು ಹೋರಾಟ ಸದ್ಯ ನಡೆಯುತ್ತಲೇ ಇದೆ. ಸುಪ್ರಿಂಕೋರ್ಟ್ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ ಪೆಂಡಿಂಗ್ನಲ್ಲೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ