ಕನ್ನಡತಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದುಕೊಂಡ ರಂಜನಿ
ಹೊಸ ಲುಕ್ನಲ್ಲಿ ಐತಿಹಾಸಿಕ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ
ಕಿರುತೆರೆಯ ಎಲ್ಲರ ಫೇವರೈಟ್ ನಟಿ ಅಂದ್ರೆ ಅದು ರಂಜನಿ ರಾಘವನ್. ಕನ್ನಡತಿ ಧಾರಾವಾಹಿಯಲ್ಲಿ ಭುವಿ ಪಾತ್ರ ನಿಭಾಯಿಸಿದ್ದ ನಟಿ ರಂಜನಿ ರಾಘವನ್ ಅವರಿಗೆ ಸಾಕಷ್ಟು ಅಭಿಮಾನಿಗಳ ಬಳಗ ಇದೆ. ಸದ್ಯ ರಂಜನಿ ರಾಘವನ್ ಸುದ್ದಿಯಲ್ಲಿದ್ದು ಬಹಳ ದಿನಗಳೇ ಆಗಿವೆ. ಜನ ಮೆಚ್ಚಿದ ಕನ್ನಡತಿ ಧಾರಾವಾಹಿ ಮುಕ್ತಾಯದ ನಂತರ ಒಂದು ಲಾಂಗ್ ಬ್ರೇಕ್ ತೆಗೆದುಕೊಂಡಿದ್ದರು ನಟಿ ರಂಜನಿ.
ಇದನ್ನು ಓದಿ: ಸ್ಟಾರ್ ಕ್ರಿಕೆಟರ್ ಚಲಿಸುತ್ತಿದ್ದ ಕಾರ್ಗೆ ಭೀಕರ ಅಪಘಾತ; ಆಸ್ಪತ್ರೆಗೆ ದಾಖಲು!
ಬಹು ದಿನಗಳ ನಂತರ ನಟಿ ರಂಜನಿ ರಾಘವನ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಅದುವೇ ಅವರ ನ್ಯೂ ಲುಕ್ ಬಗ್ಗೆ. ಹೌದು, ತಮ್ಮ ಸಿನಿಮಾರಂಗದ ಕಡೆ ಸಿಕ್ಕಾಪಟ್ಟೆ ಬ್ಯೂಸಿ ಆಗಿದ್ದಾರೆ ಕನ್ನಡತಿ. ತಮಗೆ ತಾವೇ ಸಮಯ ಕೊಡದೆ ಇರೋದು ಬೇಸರದ ವಿಷಯ ಎಂದು ಹೇಳಿಕೊಂಡಿದ್ದರು. ಆದ್ರೂ ನೆನ್ನೆಯಷ್ಟೆ ಒಂದು ಹೊಸ ಫೋಟೋಶೂಟ್ ಬಗ್ಗೆ ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಅಭಿಮಾನಿಗಳಿಗೆ ಇತಿಹಾಸ ಅಂದ್ರೆ ನಿಮ್ಮ ಪ್ರಕಾರ ಏನು? ಎಂಬ ಪ್ರಶ್ನೆ ಕೇಳುವ ಸಲುವಾಗಿ ತಮ್ಮ ನ್ಯೂ ಲುಕ್ ಅನ್ನು ರೀವಿಲ್ ಮಾಡಿದ್ದಾರೆ.
View this post on Instagram
ಇನ್ನೂ, ಹೊಸ ಲುಕ್ನಲ್ಲಿ ಐತಿಹಾಸಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಲೊಕೇಶನ್ ಕೂಡ ಐತಿಹಾಸಿಕವಾಗೇ ಇದೆ. ಈ ರೀತಿಯ ವಿಭಿನ್ನ ವಿಡಿಯೋ ಅಭಿಮಾನಿಗಳಿಗೆ ಕೂತುಹಲ ಹುಟ್ಟಿಸಿದೆ. ಇದು ಬರೀ ಫೋಟೋಶೂಟ್ ಅಥವಾ ಯಾವಾದಾದ್ರೂ ಸಿನಿಮಾ ಪಾತ್ರವೋ ಎಂದು ಕೇಳ್ತಿದ್ದಾರೆ. ಒಟ್ಟಿನಲ್ಲಿ ಬಹುದಿನಗಳ ನಂತರ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದು ವೀಕ್ಷರಿಗೆ ಇಷ್ವಾವಾಗಿದೆ. ಅಭಿಮಾನಿಗಳಿಗೋಸ್ಕರ ಹೊಸ ಅಪ್ಡೇಟ್ಸ್ ಸದ್ಯದಲ್ಲೇ ನೀಡುತ್ತೇನೆ ಅನ್ನೋ ಭರವಸೆ ಕೂಡ ನೀಡಿದ್ದಾರೆ ನಟಿ ರಂಜನಿ ರಾಘವನ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ