newsfirstkannada.com

ಇದು ನಿಶ್ಚಿತಾರ್ಥದ ರಿಂಗು, ಮತ್ತೊಂದು.. ಡಿವೋರ್ಸ್​ ವದಂತಿಗೆ ಹೊಸ ಟ್ವಿಸ್ಟ್‌ ಕೊಟ್ಟ ದೀಪಿಕಾ ಪತಿ!

Share :

Published May 9, 2024 at 3:29pm

    ಸ್ಪೆಷಲ್ ಫೋಟೋಸ್ ಡಿಲೀಟ್ ಮಾಡಿ ಫ್ಯಾನ್ಸ್​ಗಳ ಕೆಂಗಣ್ಣಿಗೆ ಗುರಿಯಾದ ನಟ ​

    ದೀಪಿಕಾ ಪಡುಕೋಣೆ ಮದುವೆ ಫೋಟೋಸ್ ಡಿಲೀಟ್​ ಮಾಡಿದ ರಣವೀರ್ ಸಿಂಗ್

    ನೀವಿಬ್ಬರು ವಿಚ್ಛೇದನ ಪಡೆದುಕೊಳ್ಳುತ್ತಿದ್ದೀರಾ ಅಂತ ಕಾಮೆಂಟ್​ ಮಾಡಿ ಫ್ಯಾನ್ಸ್​​ ಬೇಸರ

ಒಂದಲ್ಲಾ ಒಂದು ವಿಚಾರಕ್ಕೆ ಬಾಲಿವುಡ್​ ಬ್ಯೂಟಿ ದೀಪಿಕಾ ಪಡುಕೋಣೆ ದಂಪತಿ ಸುದ್ದಿಯಲ್ಲಿ ಇರುತ್ತಾರೆ. ಆದರೆ ಈ ಬಾರಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಹಲ್​​ಚಲ್​ ಎಬ್ಬಿಸಿದೆ.

ಹೌದು, ಸೋಷಿಯಲ್​ ಮೀಡಿಯಾದಲ್ಲಿ ಹಿಂಗೊಂದು ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಒಂದು ಮುಖ್ಯ ಕಾರಣ ಕೂಡ ಇದೆ. ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಅವರು ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಪೋಸ್ಟ್​ ಆಗಿದ್ದ ಮದುವೆ ಫೋಟೋಸ್​​ಗಳನ್ನು ಡಿಲೀಟ್​ ಮಾಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಶಾಕ್​ ಆಗಿ, ಈ ಇಬ್ಬರ ದಾಂಪತ್ಯ ಜೀವನದಲ್ಲಿ ಏನೋ ಸಮಸ್ಯೆ ಇದೆ ಎಂದು ಕಾಮೆಂಟ್ ಮಾಡುವ ಮೂಲಕ ಅನುಮಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಗ್ಯಾಂಗ್​ ವಾರ್​​ನಲ್ಲಿ ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ.. ಬೆಚ್ಚಿಬಿದ್ದ ಶಿವಮೊಗ್ಗ..!

14 ನವೆಂಬರ್ 2018ರಂದು ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಆರು ವರ್ಷಗಳ ಬಳಿಕ ಮೊನ್ನೆ ಮೊನ್ನೆಯಷ್ಟೇ ಈ ಸ್ಟಾರ್​ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ಹೇಳಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ನೀಡಿದ್ದರು. ಆದರೆ ಇತ್ತ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅನ್ನೋ ಫೋಟೋ ಪೋಸ್ಟ್ ಬೆನ್ನಲ್ಲೇ ಅತ್ತ ಮದುವೆ ಫೋಟೋಗಳು ಮಾಯಾವಾಗಿವೆ. ಹೀಗಾಗಿ ಅಭಿಮಾನಿಗಳು ಮದುವೆ ಫೋಟೋಗಳನ್ನು ಏಕೆ ಡಿಲೀಟ್​ ಮಾಡಿದ್ದೀರಿ, ನಿವಿಬ್ಬರು ವಿಚ್ಛೇದನ ಪಡೆದುಕೊಳ್ಳುತ್ತಿದ್ದೀರಾ ಎಂದು ಕಾಮೆಂಟ್ ಮಾಡುವ ಮೂಲಕ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಈ ಬೆನ್ನಲ್ಲೇ ನಟ ರಣವೀರ್ ಸಿಂಗ್ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ಜೊತೆಗಿನ ವಿಚ್ಛೇದನದ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ. ಬಾಲಿವುಡ್​ ನಟ, ದೀಪಿಕಾ ಪಡುಕೋಣೆ ಪತಿ ರಣವೀರ್ ಮುಂಬೈನಲ್ಲಿ ಟಿಫಾನಿ ಮತ್ತು ಕೋ ಸ್ಟೋರ್ ಲಾಂಚ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ನಿಶ್ಚಿತಾರ್ಥದ ಹಾಗೂ ಮತ್ತೊಂದು ಮದುವೆಯ ಉಂಗುರವನ್ನು ಹಾಕಿಕೊಂಡು ಬಂದಿದ್ದರು. ಈ ಮೂಲಕ ವಿಚ್ಛೇದನದ ವದಂತಿಗೆ ತೆರೆ ಎಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ನಿಶ್ಚಿತಾರ್ಥದ ರಿಂಗು, ಮತ್ತೊಂದು.. ಡಿವೋರ್ಸ್​ ವದಂತಿಗೆ ಹೊಸ ಟ್ವಿಸ್ಟ್‌ ಕೊಟ್ಟ ದೀಪಿಕಾ ಪತಿ!

https://newsfirstlive.com/wp-content/uploads/2024/05/deepika-padukone2.jpg

Load More