ಅಬ್ಬಬ್ಬಾ.. ಇದಪ್ಪಾ ನ್ಯಾಷನಲ್​ ಕ್ರಶ್​ ಕ್ರೇಜ್​; ರಶ್ಮಿಕಾ ಮಂದಣ್ಣ ನೋಡಲು ಮುಗಿಬಿದ್ದ ಫ್ಯಾನ್ಸ್​!

author-image
Veena Gangani
Updated On
ಅಬ್ಬಬ್ಬಾ.. ಇದಪ್ಪಾ ನ್ಯಾಷನಲ್​ ಕ್ರಶ್​ ಕ್ರೇಜ್​; ರಶ್ಮಿಕಾ ಮಂದಣ್ಣ ನೋಡಲು ಮುಗಿಬಿದ್ದ ಫ್ಯಾನ್ಸ್​!
Advertisment
  • ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದ ಕೊಡಗಿನ ಬೆಡಗಿ
  • ಹಸಿರು ಸೀರೆಯಲ್ಲಿ ಬೊಂಬೆಯಂತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ರಶ್ಮಿಕಾ ವಿಡಿಯೋ

ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿರೋ ನಟಿ. ಅತಿ ಹೆಚ್ಚು ಫ್ಯಾನ್ಸ್​ ಹೊಂದಿರೋ ಇವರು ಒಂದಲ್ಲ ಮತ್ತೊಂದು ವಿಚಾರಕ್ಕೆ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹೊಸ, ಹೊಸ ಫೋಟೋಗಳ ಮೂಲಕ ಸದ್ದು ಮಾಡ್ತಾ ಇರ್ತಾರೆ ರಶ್ಮಿಕಾ ಮಂದಣ್ಣ.

publive-image

ಇದನ್ನೂ ಓದಿ:ಅಲ್ಲು ಅರ್ಜುನ್​​ ಬರ್ತ್‌ ಡೇಗೆ ಸರ್‌ಪ್ರೈಸ್‌ ಕೊಟ್ಟ ರಶ್ಮಿಕಾ ಮಂದಣ್ಣ; ಪುಷ್ಪ ಫ್ಯಾನ್ಸ್‌ ಫುಲ್ ಖುಷ್‌!

ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಮೊನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣಾ ಅವರು ಕೇರಳ ರಾಜ್ಯಕ್ಕೆ ಭೇಟಿ ನೀಡಿದ್ದರು. ಕರುನಾಗಪಲ್ಲಿಯಲ್ಲಿ ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಇಡೀ ಇವೆಂಟ್‌ನಲ್ಲಿ ಹಸಿರು ಸೀರೆಯಲ್ಲಿ ಬೊಂಬೆಯಂತೆ ನಟಿ ರಶ್ಮಿಕಾ ಮಂದಣ್ಣ ಅವರು ಮಿರ, ಮಿರ ಮಿಂಚಿದ್ದಾರೆ. ಸಾವಿರಾರು ಅಭಿಮಾನಿಗಳು ನೆರೆದಿದ್ದ ಇವೆಂಟ್ ರಂಜಿತಮೆ ಹಾಡಿಗೆ ನಟಿ ರಶ್ಮಿಕಾ ಮಂದಣ್ಣ ಡ್ಯಾನ್ಸ್​ ಮಾಡಿದ್ದಾರೆ.

publive-image

ನೂತನವಾಗಿ ಉದ್ಘಾಟನೆಗೊಂಡ ಶಾಪಿಂಗ್ ಮಾಲ್ ಮುಂದೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ತುಂಬಿಕೊಂಡಿದ್ದರು. ನೇರವಾಗಿ ನ್ಯಾಷನಲ್​ ಕ್ರಶ್​ ಅನ್ನು ಸೀರೆಯಲ್ಲಿ ನೋಡಿದ ಫ್ಯಾನ್ಸ್​ ದಂಗಾಗಿದ್ದಾರೆ. ಜೊತೆಗೆ ನೆಚ್ಚಿನ ನಟಿಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಆಗಿಯೋ ನಟಿ ಕೇರಳಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಕೆಲ ಕಾಲ ಕಳೆದು ಖುಷಿ ಪಟ್ಟಿದ್ದಾರೆ.


">July 26, 2024


ನಟ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಇದರ ಜೊತೆಗೆ ರಶ್ಮಿಕಾ ನಟನೆಯ ‘ಛವಾ’ ಕೂಡ ಡಿಸೆಂಬರ್ 6ಕ್ಕೆ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ನೆಚ್ಚಿನ ನಟಿಯನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment