Advertisment

ಮೋದಿ ಸರ್ಕಾರದ ಬಗ್ಗೆ ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ಮಾತು? ಮತ್ತೆ ಟ್ರೆಂಡ್ ಆದ ನ್ಯಾಷನಲ್ ಕ್ರಶ್

author-image
Ganesh
Updated On
‘ನ್ಯಾಷನಲ್ ಕ್ರಶ್ ಈಗ ನ್ಯಾಷನಲಿಸ್ಟಾ’- ರಶ್ಮಿಕಾ ಮಂದಣ್ಣಗೆ ಹೊಸ ಪಟ್ಟ ಕಟ್ಟಿದ ನೆಟ್ಟಿಗರು; ಯಾಕೆ ಗೊತ್ತಾ?
Advertisment
  • ಮೋದಿ ಸರ್ಕಾರದ ಸಾಧನೆಗೆ ಫಿದಾ ಆದ ನಟಿ ರಶ್ಮಿಕಾ ಮಂದಣ್ಣ
  • ‘ಭಾರತದ ಅಭಿವೃದ್ಧಿಯನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ’
  • ಭಾರತ ಈಗ ವೇಗವಾಗಿ ಬೆಳವಣಿಗೆಯಾಗುತ್ತಿದೆ -ರಶ್ಮಿಕಾ ಮಂದಣ್ಣ

ಭಾರತ ಈಗ ವೇಗವಾಗಿ ಬೆಳವಣಿಗೆ ಆಗುತ್ತಿದೆ. ಭಾರತದ ಅಭಿವೃದ್ಧಿಯನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ ಅಂತ ನಟಿ ರಶ್ಮಿಕಾ ಮಂದಣ್ಣ ಅಭಿಪ್ರಾಯಪಟ್ಟಿದೆ.

Advertisment

ಅವರು ಇತ್ತೀಚೆಗೆ ಮುಂಬೈನ ಅಟಲ್ ಸೇತು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ ಅವರು.. ಭಾರತದ ಅಭಿವೃದ್ಧಿ ಬಗ್ಗೆ ಮೆಚ್ಚಿ ಮಾತನಾಡಿರುವ ರಶ್ಮಿಕಾ, ಭಾರತದಲ್ಲಿ ಈಗ ಅಸಾಧ್ಯವೆಂಬುದೇ ಇಲ್ಲ. ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಭಾರೀ ಅಭಿವೃದ್ಧಿ ಆಗಿದೆ. ವೇಗವಾಗಿ ಹೆದ್ದಾರಿ ನಿರ್ಮಾಣ ಆಗ್ತಿದೆ. ಹರ್ಬರ್ ಲಿಂಕ್, ಬೆಂಗಳೂರು- ಮುಂಬೈ ಹೆದ್ದಾರಿ, ಮುಂಬೈ- ಗೋವಾ ಹೆದ್ದಾರಿಗಳು ಅಭಿವೃದ್ಧಿ ಆಗಿವೆ ಎಂದಿದ್ದಾರೆ.

ಇದನ್ನೂ ಓದಿ:ಮುಂಬೈ, ಪಂಜಾಬ್, ಮನಾಲಿಯಲ್ಲಿ ಕೋಟಿ ಕೋಟಿ ಆಸ್ತಿ.. ಬಿಜೆಪಿ ಅಭ್ಯರ್ಥಿ ಕಂಗನಾ ಎಷ್ಟು ಕೋಟಿ ಒಡತಿ..?

publive-image

‘10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ’
ನವಿ ಮುಂಬೈನಿಂದ ಮುಂಬೈಗೆ, ಗೋವಾದಿಂದ ಮುಂಬೈಗೆ ಮತ್ತು ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಈಗ ತುಂಬಾ ಸುಲಭ. ಈ ಅದ್ಭುತ ಮೂಲಸೌಕರ್ಯ ನೋಡಲು ನನಗೆ ಹೆಮ್ಮೆ ಅನಿಸುತ್ತದೆ. ಅಭಿವೃದ್ಧಿಯ ವಿಷಯದಲ್ಲಿ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತದಲ್ಲಿ ಹೀಗಾಗಲು ಸಾಧ್ಯವಿಲ್ಲ ಎಂದು ಈಗ ಯಾರೂ ಹೇಳಲಾರರು. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದಿದ್ದಾರೆ.

Advertisment

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!

ಅಟಲ್ ಸೇತುವೆ ಬಗ್ಗೆ ಹೇಳಿದ್ದೇನು?
ಅಟಲ್ ಸೇತುವನ್ನು ಕೇವಲ ಏಳು ವರ್ಷಗಳಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದು ಆಶ್ಚರ್ಯವಾಯಿತು. ಯುವ ಭಾರತ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ. ಜನರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಚಿಂತನಶೀಲವಾಗಿ ಮತದಾನ ಮಾಡುವಂತೆ ನಟಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಹೀಗಾದರೆ.. ಆರ್​ಸಿಬಿ, ಸಿಎಸ್​ಕೆ ಎರಡೂ ತಂಡಗಳು ಪ್ಲೇ ಆಫ್​ಗೆ ಹೋಗುತ್ತವೆ..! ಅಚ್ಚರಿ ಪಡಬೇಕಾಗಿಲ್ಲ..!​

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment