newsfirstkannada.com

VIDEO: ರಶ್ಮಿಕಾ ಮಂದಣ್ಣಗೆ ಮತ್ತೆ ಡೀಪ್​ ಫೇಕ್​ ಕಾಟ.. ಬಿಕಿನಿ ತೊಟ್ಟ ಅಸಲಿ ವಿಡಿಯೋ ಯಾರದ್ದು ಗೊತ್ತಾ?

Share :

Published May 28, 2024 at 7:18am

  ನ್ಯಾಶನಲ್​ ಕ್ರಶ್​ಗೆ ಮತ್ತೆ ಡೀಪ್​ ಫೇಕ್​ ಕಾಟ

  ಜಲಪಾತದ ಪಕ್ಕದಲ್ಲಿ ಬಿಕಿನಿ ತೊಟ್ಟ ನಟಿ ರಶ್ಮಿಕಾ ಮಂದಣ್ಣ

  ಅಸಲಿಗೆ ಆ ವಿಡಿಯೋ ಯಾರದ್ದು ಗೊತ್ತಾ? ಆ ಮಾಡೆಲ್ ಹೆಸರೇನು?

ನಟಿ ರಶ್ಮಿಕಾ ಮಂದಣ್ಣ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ರಶ್ಮಿಕಾ ಈ ಥರ ಡ್ರೆಸ್ ಹಾಕಿದ್ದಾರಾ? ಬಿಕಿನಿಯಲ್ಲಿ ಫಾಲ್ಸ್​ನಲ್ಲಿ ನಿಂತು ವಿಡಿಯೋ ಮಾಡಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ. ಬಟ್ ಇದು ಮತ್ತೊಂದು ಡೀಪ್ ಫೇಕ್ ಕಹಾನಿ.

ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಫ್ಯಾನ್ಸ್​ಗಳನ್ನ ಹೊಂದಿರೋ ನಟಿ, ರಶ್ಮಿಕಾ ಮಂದಣ್ಣ. ಅಭಿಮಾನಿಗಳ ಪಾಲಿನ ನ್ಯಾಶನಲ್​ ಕ್ರಶ್​ಗೆ ಮತ್ತೆ ಡೀಪ್​ ಫೇಕ್ ಕಾಟ ಶುರುವಾಗಿದೆ.

ನಟಿಗೆ ಮತ್ತೆ ಡೀಪ್ ಫೇಕ್ ಕಾಟ

ಕೆಂಬಣ್ಣದ ಬಿಕಿನಿಯಲ್ಲಿ, ಜಲಪಾತದ ಪಕ್ಕದಲ್ಲಿ ಥೇಟ್ ರಶ್ಮಿಕಾ ಮಂದಣ್ಣ ಮುಖಚಹರೆ ಇರೋ ಈ ವಿಡಿಯೋ. ರಶ್ಮಿಕಾ ಲೈಫ್​ನಲ್ಲಿ ಕಾಣಸಿಕ್ಕ ಡೀಪ್ ಫೇಕ್​ನ​ ಮತ್ತೊಂದು ಅಧ್ಯಾಯ. ನಟಿಯ ಮುಖವನ್ನ ಮಾರ್ಫಿಂಗ್ ಮಾಡಿದ ನಕಲಿ ವಿಡಿಯೋ ಇದಾಗಿದ್ದು, ಮತ್ತೆ ಆತಂಕ ಸೃಷ್ಟಿಸಿದೆ.

ಈ ವಿಡಿಯೋದ ಮೂಲ ಯಾವ್ದು ಅಂತಾ ಹುಡುಕಿದಾಗ ಸಿಕ್ಕಿದ್ದು ಕೊಲಂಬಿಯಾದ ಲಿಂಕ್. ಸ್ಯಾಂಟ್ಯಾಂಡರ್ ಮೂಲದ ಮಾಡೆಲ್ ಡೇನಿಯಲಾ ವಿಲ್ಲಾರ್ರಿಯಲ್ ವಿಡಿಯೋಗೆ ರಶ್ಮಿಕಾ ಮುಖ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.

ಅಸಲಿ ವಿಡಿಯೋ

ಇದನ್ನೂ ಓದಿ: VIDEO: ಇದೇ ಕೈಯಾರೆ ಕಳೆದುಕೊಂಡೆ! ಚಿನ್ನುವನ್ನು ನೆನೆದು ಭಾವುಕರಾದ ಆ್ಯಂಕರ್ ಅನುಶ್ರೀ

ರಶ್ಮಿಕಾಗೆ ಡೀಪ್ ಫೇಕ್ ಕಾಟ ಇದೇ ಮೊದಲಲ್ಲ. ಕಳೆದ ಬಾರಿಯೂ ರಶ್ಮಿಕಾ ಮಂದಣ್ಣ ‘ಡೀಪ್​’ ದುನಿಯಾದ ಕಳ್ಳಾಟಕ್ಕೆ ತುತ್ತಾಗಿದ್ರು.ಆಗ 23 ವರ್ಷದ ನವೀನ್ ಎಂಬಾತನನ್ನ ಪೊಲೀಸ್ರು ಬಂಧಿಸಿದ್ದರು. ಇದೀಗ ಮತ್ತೆ ಅಂಥಹದ್ದೇ ಒಂದು ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಎಚ್ಚರದಿಂದಿರಿ! ಗಂಟೆಗೆ 135 ಕಿಮೀ ವೇಗ.. ರೆಮಲ್ ಸೈಕ್ಲೋನ್​ಗೆ 16 ಜನರು ಬಲಿ

ಇದು ಯಾರು ಎಡಿಟ್ ಮಾಡಿದ್ದು, ಎಲ್ಲಿ ಮಾಡಿದ್ದು ಗೊತ್ತಿಲ್ಲ. ಆದ್ರೆ, ಮತ್ತೆ ಮತ್ತೆ ಇಂಥಾ ಪ್ರಕರಣ ನಡೀತಿರೋದು ನಿಜಕ್ಕೂ ಕಳವಳಕಾರಿ. ಹೀಗಾಗಿ ಈ ಡಿಜಿಟಲ್ ದಾಳಿಯ ವಿರುದ್ಧ ಕಠಿಣ ಕಾನೂನಿನ ಅಗತ್ಯ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಶ್ಮಿಕಾ ಮಂದಣ್ಣಗೆ ಮತ್ತೆ ಡೀಪ್​ ಫೇಕ್​ ಕಾಟ.. ಬಿಕಿನಿ ತೊಟ್ಟ ಅಸಲಿ ವಿಡಿಯೋ ಯಾರದ್ದು ಗೊತ್ತಾ?

https://newsfirstlive.com/wp-content/uploads/2024/05/Rashmika-mandanna-4.jpg

Load More