ರತನ್ ಟಾಟಾ ಆಸ್ಪತ್ರೆಗೆ ದಾಖಲು.. ವದಂತಿಗಳ ಬಗ್ಗೆ 86 ವರ್ಷದ ಉದ್ಯಮಿ ಹೇಳಿದ್ದೇನು?

author-image
admin
Updated On
ಟಾಟಾ ಮೋಟಾರ್ಸ್​ಗೆ ಬೆದರಿಕೆ ಹಾಕಿದ್ದ ಗ್ಯಾಂಗ್​ಸ್ಟರ್​.. ಹಳೆಯ ವಿಡಿಯೋದಲ್ಲಿ ರತನ್​ ಟಾಟಾ ಹೇಳಿದ್ದೇನು?
Advertisment
  • ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾದ ರತನ್ ಟಾಟಾ
  • ICUನಲ್ಲಿ ರತನ್ ಟಾಟಾ ಅವರಿಗೆ ಚಿಕಿತ್ಸೆ ನೀಡಿರುವ ಬಗ್ಗೆ ವರದಿ
  • ತಮ್ಮ ಆರೋಗ್ಯದ ಬಗ್ಗೆ ಖುದ್ದು ರತನ್ ಟಾಟಾ ಅವರೇ ಹೇಳಿದ್ದೇನು?

ಮುಂಬೈ: ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಅನ್ನೋ ಸುದ್ದಿ ವರದಿಯಾಗಿದೆ. ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ಉದ್ಯಮಿ ರತನ್ ಟಾಟಾ ಅವರೇ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಟಾಟಾ ಮೋಟಾರ್ಸ್​ಗೆ ಬೆದರಿಕೆ ಹಾಕಿದ್ದ ಗ್ಯಾಂಗ್​ಸ್ಟರ್​.. ಹಳೆಯ ವಿಡಿಯೋದಲ್ಲಿ ರತನ್​ ಟಾಟಾ ಹೇಳಿದ್ದೇನು? 

ಉದ್ಯಮಿ ರತನ್ ಟಾಟಾ ಅವರಿಗೆ ಸದ್ಯ 86 ವರ್ಷ ವಯಸ್ಸು. ಮೂಲಗಳ ಪ್ರಕಾರ ಟಾಟಾ ಅವರು ನಿನ್ನೆ ತಡರಾತ್ರಿ 12.30ಕ್ಕೆ ಮುಂಬೈ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ರತನ್ ಟಾಟಾ ಅವರ ರಕ್ತದೊತ್ತಡ ತುಂಬಾನೇ ಕಡಿಮೆಯಾಗಿದೆ ಎನ್ನಲಾಗಿತ್ತು.

publive-image

ICUನಲ್ಲಿ ರತನ್ ಟಾಟಾ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಡಾ. ಶಾರುಖ್ ಅಸ್ಪಿ ಗೋಲ್ವಾಲ್ಲಾ ಅವರು ರತನ್ ಟಾಟಾ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಯಾವುದೇ ತೊಂದರೆ ಇಲ್ಲ ಎನ್ನಲಾಗಿತ್ತು.

ರತನ್ ಟಾಟಾ ಅವರು ಆಸ್ಪತ್ರೆಗೆ ಹೋದ ವಿಚಾರ ಗೊತ್ತಾಗುತ್ತಿದ್ದಂತೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿ ಹಬ್ಬಿತ್ತು. ಸದ್ಯ ರತನ್ ಟಾಟಾ ಅವರಿಗೆ ಏನು ಆಗಿಲ್ಲ ಎಂದು ಅವರೇ ಖುದ್ದು ಮಾಹಿತಿ ನೀಡಿದ್ದಾರೆ. ತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿಯೇ ಸುಳ್ಳು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment