/newsfirstlive-kannada/media/post_attachments/wp-content/uploads/2024/10/RATAN_TATA_CRICKET.jpg)
ಉದ್ಯಮಿ ರತನ್ ಟಾಟಾ.. ದೇಶ ಕಂಡ ನಿಸ್ವಾರ್ಥ ಸೇವಕ.. ಈ ಗೋಲ್ಡನ್ ಹಾರ್ಟ್ ಮ್ಯಾನ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ರತನ್ ಟಾಟಾಗೆ ಕ್ರಿಕೆಟ್ ಅಂದ್ರೂ, ಎಲ್ಲಿಲ್ಲದ ಪ್ರೀತಿ. ಇವರು ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆಯೂ ಅಪಾರವಾಗಿದೆ.
ಉದ್ಯಮಿ, ಲೋಕೋಪಕಾರಿ, ನಿಸ್ವಾರ್ಥಿ, ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಉದ್ಯಮಿಯಾಗಿ ಲಾಭವನ್ನಷ್ಟೇ ನೋಡದ ಈ ಪುಣ್ಯಾತ್ಮ, ದೇಶಕ್ಕೆ ನೀಡಿದ ಕೊಡುಗೆ ಅಪಾರ. ತಾವು ಗಳಿಸಿದ ಹಣದಲ್ಲಿ 60ರಷ್ಟನ್ನ ಸೇವಾ ಕಾರ್ಯಗಳಿಗೆ ವಿನಯೋಗಿಸುತ್ತಿದ್ದ ಮಹಾನ್ ವ್ಯಕ್ತಿ. ಇಂಥಹ ಮಹಾಯೋಗಿ ಭಾರತೀಯ ಕ್ರಿಕೆಟ್ಗೂ ಅಪಾರ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು ಅರಮನೆಯಿಂದ ಶುಭ ಸುದ್ದಿ.. ನವರಾತ್ರಿ ಸಂಭ್ರಮದಲ್ಲಿ ಯದುವೀರ್-ತ್ರಿಷಿಕಾ ದಂಪತಿಗೆ 2ನೇ ಮಗು ಜನನ
ಟಾಟಾಗೆ ಭಾರತೀಯ ಕ್ರಿಕೆಟ್ ಎಂದೆಂದಿಗೂ ಚಿರಋಣಿ..!
ಉದ್ಯಮದಲ್ಲೇ ಅಲ್ಲ. ಕ್ರೀಡಾ ವಿಚಾರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರತನ್ ಟಾಟಾ, ಭಾರತೀಯ ಕ್ರಿಕೆಟ್ ಏಳ್ಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾರತೀಯ ಕ್ರಿಕೆಟ್ಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತೀಯ ಕ್ರಿಕೆಟ್ಗೆ ಬೆಂಬಲವಾಗಿ ನಿಂತಿದ್ದ ರತನ್ ಟಾಟಾ, ಕ್ರಿಕೆಟಿಗರ ಯಶಸ್ಸಿನ ಹಿಂದಿನ ಮೆಟ್ಟಿಲಾಗಿದ್ದಾರೆ.
ಇಂಡಿಯನ್ ಗ್ರೇಟೆಸ್ಟ್ ಕ್ರಿಕೆಟರ್ಸ್ಗೆ ಟಾಟಾ ಗ್ರೂಪ್ ನೆರವು.!
ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದ ರತನ್ ಟಾಟಾ, ತಳಮಟ್ಟದಲ್ಲೇ ಆಟಗಾರರಿಗೆ ಪ್ರಾಯೋಜಕತ್ವ ನೀಡಿ ಬೆಳೆಸಿದ್ದಾರೆ. ಟೀಮ್ ಇಂಡಿಯಾ ಪ್ರತಿನಿಧಿಸಿರುವ ಹಲವು ಆಟಗಾರರಿಗೆ ಉದ್ಯೋಗ ನೀಡಿ ಬೆಂಬಲವಾಗಿ ಟಾಟಾ ಗ್ರೂಪ್ ನಿಂತಿತ್ತು. ಇಂಟ್ರೆಸ್ಟಿಂಗ್ ಅಂದ್ರೆ, 1983ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ರವಿಶಾಸ್ತ್ರಿ, ಮೊಹಿಂದರ್ ಅಮರನಾಥ್, ಸಂದೀಪ್ ಪಾಟೀಲ್ ಬೆಳವಣಿಗೆಯಲ್ಲಿ ಟಾಟಾ ಗ್ರೂಪ್ಸ್ ಪಾತ್ರ ಪ್ರಮುಖವಾದದ್ದು.
ಇವ್ರೇ ಅಲ್ಲ, ಫಾರೂಖ್ ಇಂಜಿನಿಯರ್, ಸಂಜಯ್ ಮಂಜ್ರೇಕರ್, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಆರ್‌ಪಿ ಸಿಂಗ್ ಹಾಗೂ ಅಜಿತ್ ಅಗರ್ಕರ್ ರಂತಹ ಮಾಜಿ ಕ್ರಿಕೆಟರ್ಸ್ ಬೆಳೆಯಲು ಟಾಟಾ ಗ್ರೂಪ್ ಸಹಾಯ ಅಪಾರ ಇದೆ. ಸದ್ಯ ತಂಡದ ಆಲ್ರೌಂಡರ್ ಆಗಿರೋ ಶಾರ್ದೂಲ್ ಠಾಕೂರ್ ಕೂಡ ಟಾಟಾ ಗ್ರೂಪ್ ನೆರವಿನಲ್ಲಿ ಬೆಳೆದ ಪ್ರತಿಭೆ.
ಸಂಕಷ್ಟದ ಸಮಯದಲ್ಲಿ ಪ್ರಾಯೋಜಕತ್ವದ ನೆರವು!
ಯುವ ಆಟಗಾರರಿಗೆ ವೇದಿಕೆಯಾಗಿದ್ದ ಟಾಟಾ ಗ್ರೂಪ್ಸ್, ಕ್ರಿಕೆಟ್ ಈವೆಂಟ್ಸ್ಗೂ ಪ್ರಾಯೋಜಕತ್ವ ನೀಡಿತ್ತು. 1996ರಲ್ಲಿ ಮೊದಲ ಬಾರಿ ಪ್ರಾಯೋಜಕತ್ವ ನೀಡಿದ್ದ ಟಾಟಾ ಗ್ರೂಪ್ಸ್, 2000ರ ಮ್ಯಾಚ್ ಫಿಕ್ಸಿಂಗ್ ಹಗರಣದ ಕಾರಣಕ್ಕೆ ಸಹಯೋಗದೊಂದಿಗೆ ದೂರ ಉಳಿದಿತ್ತು.
ಇದನ್ನೂ ಓದಿ: ಕೆಲವು ಸ್ನೇಹಿತರು ಪರಿಸ್ಥಿತಿ ಬಳಸಿಕೊಂಡ್ರು, ಅಭಿಮಾನಿಗಳೇ ಉತ್ತರ ಕೊಡ್ತಾರೆ -ಧ್ರುವ ಸರ್ಜಾ ಹೇಳಿದ್ದೇನು?
2020ರಲ್ಲಿ ಚೀನಾ ಗಡಿ ಖ್ಯಾತೆ ತೆಗೆದಿದ್ದರಿಂದ ಐಪಿಎಲ್ನಿಂದ ವಿವೋ ಪ್ರಾಯೋಜಕತ್ವಕ್ಕೆ ಬ್ರೇಕ್ ಹಾಕಲಾಗಿತ್ತು. ಈ ವೇಳೆ ಟಾಟಾ ಗ್ರೂಪ್ ಐಪಿಎಲ್ ಬೆಂಬಲಕ್ಕೆ ನಿಂತಿತ್ತು. ದಾಖಲೆಯ 2.500 ಕೋಟಿ ರೂಪಾಯಿಗಳೊಂದಿಗೆ 4 ವರ್ಷದ ಒಪ್ಪಂದ ಮಾಡಿಕೊಂಡಿತು. ಇಷ್ಟೇ ಅಲ್ಲ, ಮಹಿಳಾ ಐಪಿಎಲ್ಗೂ ಟಾಟಾ ಸ್ಪಾನ್ಸರ್ಶಿಪ್ ನೀಡಿತ್ತು. ಈ ಒಪ್ಪಂದ 2027 ತನಕ ಇದೆ.
ಭಾರತೀಯ ಕ್ರಿಕೆಟ್ಗೆ ರತನ್ ಟಾಟಾ, ಒಂದಲ್ಲ ಒಂದು ರೀತಿ ಬೆಂಬಲವಾಗಿ ನಿಂತಿದ್ದಾರೆ. ಕ್ರಿಕೆಟ್ ಹಾಗೂ ಕ್ರಿಕೆಟರ್ಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಹೀಗಾಗಿ ಎಂದಿಗೂ ಎಂದೆಂದಿಗೂ ರತನ್ ಟಾಟಾಗೆ ಭಾರತೀಯ ಕ್ರಿಕೆಟ್ ಅಭಾರಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ