/newsfirstlive-kannada/media/post_attachments/wp-content/uploads/2024/10/RATAN-TATA-1-1.jpg)
ಉದ್ಯಮಿ ರತನ್ ಟಾಟಾ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಸಾಮಾಜಿಕ ಕೆಲಸಗಳಿಂದಾಗಿ ದೇಶ ಸ್ಮರಿಸಿಕೊಳ್ತಿದೆ. ರತನ್ ಟಾಟಾ ಉದ್ಯಮ ಕ್ಷೇತ್ರದಲ್ಲಿ ಎಷ್ಟು ಗತ್ತು ಹೊಂದಿದ್ದರೋ, ಅಷ್ಟೇ ಸರಳವಾಗಿದ್ದರು. ಯಾವುದೇ ಕೆಲಸವನ್ನು ಮಾಡಲು ನಿರ್ಧರಿಸಿದರೆ ಅದು ಪೂರ್ಣಗೊಳಿಸಿದ ನಂತರವೇ ಅವರು ಮುಂದಿನ ಹೆಜ್ಜೆಯನ್ನಿಡುತ್ತಿದ್ದರು.
ವಾಸ್ತವವಾಗಿ ರತನ್ ಟಾಟಾಗೆ ಸಂಬಂಧಿಸಿದ ಸೇಡಿನ ಕಥೆಯೊಂದು ಇದೆ. ಅಂದು ಫೋರ್ಡ್ ಮೋಟಾರ್ಸ್ (Ford Motor Company) ಚೇರ್ಮನ್ ಮಾಡಿದ ಅವಮಾನವನ್ನು ತುಂಬಾ ಆಸಕ್ತಿದಾಯಕ ರೀತಿಯಲ್ಲಿ ಆ ಸೇಡು ತೀರಿಸಿಕೊಂಡರು.
ಇದನ್ನೂ ಓದಿ:Ratan Tata: 1962ರಲ್ಲಿ ಯುದ್ಧ ನಡೆಯದಿದ್ದರೆ ರತನ್ ಟಾಟಾ ಮದುವೆಯಾಗಿರುತ್ತಿದ್ದರು..
ರತನ್ ಟಾಟಾ ಸೇಡಿನ ಕಥೆ ಆರಂಭವಾಗಿದ್ದೆಲ್ಲಿ..?
ಈ ಘಟನೆ ನಡೆದಿದ್ದು 90 ದಶಕದಲ್ಲಿ. ಟಾಟಾ ಮೋಟಾರ್ಸ್ ತನ್ನ ಟಾಟಾ ಇಂಡಿಕಾ ಕಾರನ್ನು ಟಾಟಾ ಸನ್ಸ್ನ ಅಧ್ಯಕ್ಷರಾಗಿದ್ದ ರತನ್ ಟಾಟಾ ನೇತೃತ್ವದಲ್ಲಿ ಬಿಡುಗಡೆ ಮಾಡಿತ್ತು. ಆದರೆ ಅಂದು ಟಾಟಾ ಕಾರಿನ ಮಾರಾಟವು ರತನ್ ಟಾಟಾರ ಆಲೋಚನೆಯಂತೆ ನಡೆಯಲಿಲ್ಲ. ಟಾಟಾ ಇಂಡಿಕಾ ವಿರುದ್ಧ ಗ್ರಾಹಕರ ಕಳಪೆ ಕಮೆಂಟ್ ನೀಡಿದರು. ಜೊತೆಗೆ ಮಾರಾಟದಲ್ಲೂ ತುಂಬಾ ನಿರಸ ಪ್ರದರ್ಶನ ನೀಡಿತು. ಇದನ್ನರಿತ ರತನ್ ಟಾಟಾ ಅಮೆರಿಕದ ಕಾರು ತಯಾರಕ ಫೋರ್ಡ್ ಮೋಟಾರ್ಸ್ ಜೊತೆ ಮಾತುಕತೆ ನಡೆಸಿದ್ದರು.
ಫೋರ್ಡ್ ಚೇರ್ಮನ್
ಈ ವೇಳೆ ಫೋರ್ಡ್ ಚೇರ್ಮನ್ ಬಿಲ್ ಫೋರ್ಡ್, ರತನ್ ಟಾಟಾ ಅವರನ್ನು ಗೇಲಿ ಮಾಡಿದ್ದರಂತೆ. ನಿಮಗೇನೂ ಗೊತ್ತಿಲ್ಲ. ಅಷ್ಟಕ್ಕೂ ನೀವು ಪ್ಯಾಸೇಂಜರ್ ಕಾರು ವಿಭಾಗವನ್ನ ಯಾಕೆ ಆರಂಭಿಸಿದ್ದೀರಿ? ಎಂದು ಫೋರ್ಡ್ ಅವಮಾನಿಸಿದ್ದರಂತೆ.
ಫೋರ್ಡ್ ಮಾಲೀಕರಿಗೆ ಪಾಠ ಕಲಿಸಿದ
ಫೋರ್ಡ್ ಅಧ್ಯಕ್ಷರ ಮಾತುಗಳನ್ನು ವಿನಯದಿಂದಲೇ ಕೇಳಿಸಿಕೊಂಡಿದ್ದರು ರತನ್ ಟಾಟಾ. ಅಲ್ಲೇ ದೊಡ್ಡ ನಿರ್ಧಾರವನ್ನು ರತನ್ ಟಾಟಾ ತೆಗೆದುಕೊಂಡರು. ಅಮೆರಿಕದಲ್ಲಿ ಅವಮಾನಕ್ಕೆ ಒಳಗಾದ ಟಾಟಾ, ಕಾರು ವಿಭಾಗವನ್ನು ಮಾರಾಟ ಮಾಡುವ ನಿರ್ಧಾರವನ್ನು ಮುಂದೂಡಿದರು. ಮತ್ತು ಬಿಲ್ ಫೋರ್ಡ್ಗೆ ತಾವು ಊಹಿಸಿರದ ಪಾಠವನ್ನು ಮಾಡಿದರು.
ಇದನ್ನೂ ಓದಿ:ಚಿಕ್ಕವಯಸ್ಸಲ್ಲೇ ಹೆತ್ತವರು ದೂರ, ಅಜ್ಜಿ ಜೊತೆ ಬಾಲ್ಯ! ರತನ್ ಟಾಟಾ ಬೆಳೆದು ಬಂದ ಹಾದಿಯೇ ರೋಚಕ
9 ವರ್ಷಗಳ ನಂತರ ಸೇಡು ತೀರಿಸಿಕೊಂಡರು
ಅವಮಾನದ ನಂತರ ಟಾಟಾ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಅದೇ ರಾತ್ರಿ ಮುಂಬೈಗೆ ವಾಪಸ್ ಬಂದಿದ್ದರು. ಈ ಅವಮಾನವನ್ನು ಯಾರಿಗೂ ಹೇಳಲಿಲ್ಲ. ಬದಲಿಗೆ ಕಂಪನಿ ಕಾರು ವಿಭಾಗವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಗಮನವನ್ನು ಕೇಂದ್ರಿಕರಿಸಿದ್ದರು. ಕೊನೆಗೂ ಅವರ ಶ್ರಮವು ಫಲ ನೀಡಿತು. 2008ರಲ್ಲಿ ಅವರ ಟಾಟಾ ಮೋಟಾರ್ಸ್ ವಿಶ್ವ ಮಾರುಕಟ್ಟೆಯಲ್ಲಿ ಪ್ರಬಲವಾಯಿತು. ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಪಡೆದವು.
ರತನ್ ಟಾಟಾ ನೇತೃತ್ವದ ಟಾಟಾ ಮೋಟರ್ಸ್ ಭಾರೀ ಎತ್ತರಕ್ಕೆ ಹೋಗ್ತಿದ್ದಂತೆಯೇ ಮುಂಬೈಗೆ ಬಿಲ್ ಫೋರ್ಡ್ ಬರಬೇಕಾದ ಪ್ರಸಂಗ ಎದುರಾಯಿತು. ಈ ಅವಧಿಯಲ್ಲಿ ಬಿಲ್ ಫೋರ್ಡ್ ನೇತೃತ್ವದ ಫೋರ್ಡ್ ಮೋಟಾರ್ಸ್ ಸ್ಥಿತಿ ದುರ್ಬಲವಾಗಿತ್ತು. ನಂತರ ಮುಳುಗುತ್ತಿದ್ದ ಫೋರ್ಡ್ ಕಂಪನಿಯನ್ನು ರಕ್ಷಿಸಲು ರತನ್ ಟಾಟಾ ಮುಂದೆ ಬಂದರು. ರತನ್ ಟಾಟಾ ಅವರ ಈ ಕ್ರಮ, ಅಂದಿನ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಪ್ರಬಲ ಮಾರ್ಗ ಎಂದು ಬಣ್ಣಿಸಲಾಗಿದೆ.
ವಾಸ್ತವವಾಗಿ ಫೋರ್ಡ್ ಭಾರೀ ನಷ್ಟ ಎದುರಿಸುತ್ತಿರುವಾಗ 2008ರಲ್ಲಿ ಟಾಟಾ ಅಧ್ಯಕ್ಷ ರತನ್ ಟಾಟಾ ಅವರು ಜನಪ್ರಿಯ ಜಾಗ್ವಾರ್, ಲ್ಯಾಂಡ್ ರೋವರ್ ಬ್ರ್ಯಾಂಡ್ಗಳನ್ನು ಖರೀದಿಸಲು ಅಧ್ಯಕ್ಷರಿಗೆ ಪ್ರಸ್ತಾಪ ಮಾಡಿದರು. ಈ ಒಪ್ಪಂದಕ್ಕೆ ರತನ್ ಟಾಟಾ ಅಮೆರಿಕಗೆ ಹೋಗಲಿಲ್ಲ. ಬದಲಿಗೆ ಅವರನ್ನು ಅವಮಾನಿಸಿದ್ದ ಬಿಲ್ ಫೋರ್ಡ್ ತನ್ನ ಇಡೀ ತಂಡದೊಂದಿಗೆ ಮುಂಬೈಗೆ ಬಂದಿದ್ದರು.
ಇದನ್ನೂ ಓದಿ:Ratan Tata: ಯವ್ವನದಲ್ಲಿ ಪ್ರೀತಿಗೆ ಬಿದ್ದಿದ್ದ ರತನ್ ಟಾಟಾ ಮದ್ವೆ ಯಾಕಾಗಿಲ್ಲ! ಇಲ್ಲಿದೆ ಅವರ ಲವ್ ಸ್ಟೋರಿ
ಫೂರ್ಡ್ ಅಧ್ಯಕ್ಷರ ಧ್ವನಿ ಬದಲಾಗಿತ್ತು
ಮುಂಬೈನಲ್ಲಿ ರತನ್ ಟಾಟಾ ಪ್ರಸ್ತಾಪವನ್ನು ಸ್ವೀಕರಿಸುವಾಗ ಬಿಲ್ ಫೋರ್ಡ್ ಅವರ ಧ್ವನಿ ಬದಲಾಗಿತ್ತು. ಟಾಟಾ ಮೋಟಾರ್ಸ್ನ ಕಾರು ಒಪ್ಪಂದದ ಸಮಯದಲ್ಲಿ ರತನ್ ಟಾಟಾಗೆ ಹೇಳಿದ್ದನ್ನೇ ಅವರು ಪುನಾರವರ್ತಿಸಿದ್ದರು. ಫೋರ್ಡ್ ಅಧ್ಯಕ್ಷರು ಸಭೆಯಲ್ಲಿ ರತನ್ ಟಾಟಾಗೆ ಧನ್ಯವಾದ ಅರ್ಪಿಸಿದರು. ನೀವು ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸರಣಿಗಳನ್ನು ಖರೀದಿಸುವ ಮೂಲಕ ನಮಗೆ ದೊಡ್ಡ ಉಪಕಾರ ಮಾಡುತ್ತಿದ್ದೀರಿ ಎಂದು ಬಣ್ಣಿಸಿದ್ದರು. ಜಾಗ್ವರ್ ಮತ್ತು ಲ್ಯಾಂಡ್ ರೋವರ್ ಕಾರುಗಳು ಟಾಟಾ ಮೋಟರ್ಸ್ನ ಅತ್ಯಂತ ಯಶಸ್ವಿ ಮಾರಾಟವಾದ ಮಾದರಿಗಳಲ್ಲಿ ಒಂದಾಗಿದೆ.
ಇದನ್ನೂ ಓದಿ:ಟಾಟಾ ಮೋಟಾರ್ಸ್ಗೆ ಬೆದರಿಕೆ ಹಾಕಿದ್ದ ಗ್ಯಾಂಗ್ಸ್ಟರ್.. ಹಳೆಯ ವಿಡಿಯೋದಲ್ಲಿ ರತನ್ ಟಾಟಾ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ