/newsfirstlive-kannada/media/post_attachments/wp-content/uploads/2024/10/Ratan-Tata-2.jpg)
ಕೈಗಾರಿಕೋದ್ಯಮದ ರತ್ನ ಅಂತಾನೇ ಕರೆಸಿಕೊಂಡಿದ್ದ ರತನ್ ಟಾಟಾ ಅಗಲಿಕೆ ಇಡೀ ದೇಶದ ಜನ್ರನ್ನ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದ್ದ ಈ ರತನ್ ಟಾಟಾ ಯಾರು? ಅವರ ವೈಯಕ್ತಿಕ ಜೀವನ ಎಂತಾಹದ್ದು? ಈ ಕುರಿತಾಗಿ ಮಾಹಿತಿ ಇಲ್ಲಿದೆ ಓದಿ.
ರತನ್ ಟಾಟಾ. ಬಹುಶಃ ಈ ಆ ಕೊಡುಗೈ ದಾನಿಯ ವ್ಯಕ್ತಿತ್ವವನ್ನ ವರ್ಣಿಸೋಕೆ ಪದಗಳೇ ಸಾಲಲ್ಲ ಅಂದ್ರೂ ತಪ್ಪೇನಿಲ್ಲ. ಬಡವರ ಸೇವೆಯಲ್ಲೇ ಜೀವನ ಕಳೆದ ಮಹಾನ್ ಮೇಧಾವಿ. ಪ್ರತಿ ಭಾರತೀಯನ ಹೃದಯದಲ್ಲಿ ಸ್ಥಾನ ಪಡೆದಿದ್ದ ಕೈಗಾರಿಕೋದ್ಯಮದ ಟ್ರೂ ಲೀಡರ್ ಈ ರತನ್ ಟಾಟಾ.
1937, ಡಿಸೆಂಬರ್ 28, ಮುಂಬೈನಲ್ಲಿ ರತನ್ ಟಾಟಾ ಜನನ
1937 ಡಿಸೆಂಬರ್ 28 ರಂದು ಮುಂಬೈನಲ್ಲಿ ನೇವಲ್ ಟಾಟಾ ಮತ್ತು ಶ್ರೀಮತಿ ಸೂನಿ ಟಾಟಾರವರ ಪುತ್ರನಾಗಿ ರತನ್ ನಾವೆಲ್ ಟಾಟಾ ಜನಿಸಿದ್ರು. ವಿಪರ್ಯಾಸ ಅಂದ್ರೆ, ಚಿಕ್ಕ ವಯಸ್ಸಲ್ಲೇ ರತನ್ ಟಾಟಾ ಪೋಷಕರು ದೂರವಾದ್ರು. ತನ್ನ ಅಜ್ಜಿ ರತಂಜಿ ಟಾಟಾ ಜೊತೆಯೇ ರತನ್ ಟಾಟಾ ಬಾಲ್ಯ ಕಳೆಯುಂವತಾಯ್ತು.
ಇದನ್ನೂ ಓದಿ: ಭಾರತದ ಉದ್ಯೋಗ ವಲಯದ ಪಿತಾಮಹ ಇನ್ನಿಲ್ಲ! ರತನ್ ಟಾಟಾ ಸಾ*ವಿನ ಸುದ್ದಿ ಕೇಳಿ ಓಡೋಡಿ ಬಂದ ಮುಖೇಶ್ ಅಂಬಾನಿ
1961ರಲ್ಲಿ ಟಾಟಾ ಗ್ರೂಪ್‌ನಲ್ಲಿ ವೃತ್ತಿ ಜೀವನ ಆರಂಭ
ಮುಂಬೈನಲ್ಲೇ ಕಾಲೇಜು ಶಿಕ್ಷಣ ಪಡೆದಿದ್ದ ರತನ್ ಟಾಟಾ ಅಮೆರಿಕಾದ ಕಾರ್ನೆಲ್ ಯೂನಿವರ್ಸಿಟಿಯ ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1961ರಲ್ಲಿ ತಮ್ಮ ಮುತ್ತಜ್ಜ ಸ್ಥಾಪಿಸಿದ್ದ ಟಾಟಾ ಗ್ರೂಪ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ್ರು. ಮೊದಮೊದಲು ಟಾಟಾ ಸಂಸ್ಥೆಗೆ ಸೇರಿದಾಗ ಟಾಟಾ ಸ್ಟೀಲ್ನ ಅಂಗಡಿಯಲ್ಲಿ ಕೆಲಸ ಮಾಡ್ತಿದ್ರು. 1962ರಲ್ಲಿ ಸಹಾಯಕರಾಗಿ ನೇಮಕವಾದ ರತನ್ ಟಾಟಾರಿಗೆ 1971ರಲ್ಲಿ ನಿರ್ದೇಶಕರ ಬಿರುದನ್ನ ನೀಡಲಾಗುತ್ತೆ.
ಮಧ್ಯಮ ವರ್ಗಕ್ಕೆ ಕಡಿಮೆ ದರಕ್ಕೆ ಕಾರು ಕೊಟ್ಟ ಪುಣ್ಮಾತ್ಮ!
ಬರೋಬ್ಬರಿ 21ವರ್ಷಗಳ ಟಾಟಾ ಗ್ರೂಪ್ನ ಮುನ್ನಡೆಸಿದ್ದ ರತನ್ ಟಾಟಾ, ಸಂಸ್ಥೆಯ 40 ಪಟ್ಟು ಲಾಭವನ್ನ 50 ಮಟ್ಟಕ್ಕೆ ಏರಿಕೆ ಮಾಡಿದ್ರು. ಅವರ ಅಧಿಕಾರವಧಿಯ ಕೊನೆಯಲ್ಲಿ ಟಾಟಾ ಟೀ ಟೆಟ್ಲಿ ಹಾಗೂ ಟಾಟಾ ಮೋಟಾರ್ ಜಾಗ್ವಾರ್, ಲ್ಯಾಂಡ್ ರೋವರ್ ಹಾಗೂ ಟಾಟಾ ಸ್ಟೀಲ್ ಕೋರಸ್ ಹೀಗೆ ಹತ್ತು ಹಲವು ಸಂಸ್ಥೆಗಳನ್ನ ಸ್ವಾಧೀನ ಪಡೆಸಿಕೊಂಡಿದ್ರು. ಮುಖ್ಯವಾಗಿ ಇಡೀ ವಿಶ್ವದಲ್ಲೇ ಮಧ್ಯಮ ವರ್ಗಕ್ಕೆ ಅತೀ ಕಡಿಮೆ ದರಕ್ಕೆ ಟಾಟಾ ನ್ಯಾನೋ ಕಾರನ್ನ ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಟಾಟಾರವರದ್ದು.
ಇದನ್ನೂ ಓದಿ: ಪ್ರೇಮಿಗಳಲ್ಲಿ ಪರಸ್ಪರ ಜಗಳ; ವ್ಯವಹಾರದಲ್ಲಿ ಭಾರೀ ನಷ್ಟ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ
ಬ್ರಹ್ಮಚಾರಿ.. ಟಿನೇಜ್ ಲವ್ ಸ್ಟೋರಿಯೇ ರೋಚಕ!
ರತನ್ ಟಾಟಾ ಮದುವೆಯಾಗಿಲ್ಲ. ಆದ್ರೆ, ಯವ್ವನದಲ್ಲಿ ಅವರು ಪ್ರೀತಿಯ ಬಲೆಗೆ ಬಿದ್ದಿದ್ದು ನಿಜ. ಕೆಲ ವರ್ಷಗಳ ಹಿಂದಷ್ಟೇ ರತನ್ ಟಾಟಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಲವ್ ಸ್ಟೋರಿಯಲ್ಲಿ ಹಂಚಿ ಕೊಂಡಿದ್ರು.
ಟಾಟಾ ಟಿನೇಜ್ ಲವ್ ಸ್ಟೋರಿ!
ಕಾಲೇಜಿನ ನಂತರ, ನಾನು ಲಾಸ್ ಏಂಜಲೀಸ್‌ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ. ಅಲ್ಲಿ ನಾನು 2 ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಾರು ಖರೀದಿಸಿದೆ, ನನ್ನ ಕೆಲಸವನ್ನು ಇಷ್ಟಪಟ್ಟೆ. ಲಾಸ್ ಏಂಜಲೀಸ್‌ನಲ್ಲಿ ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದೆ ಮತ್ತು ನಮ್ಮಿಬ್ಬರ ಮದುವೆಯಾಗುವುದು ಖಚಿತವಾಗಿತ್ತು. ಅದೇ ಸಮಯದಲ್ಲಿ ನನ್ನ ಅಜ್ಜಿಯ ಆರೋಗ್ಯ ಸರಿ ಇರ್ಲಿಲ್ಲ. ಹೀಗಾಗಿ ಅವರನ್ನು ನೋಡಲೆಂದು ನಾನು ತಾಯ್ನಾಡಿಗೆ ಹಿಂದಿರುಗಲು ನಿರ್ಧರಿಸಿದ್ದೆ. ನಾನು ಮದುವೆಯಾಗ ಬಯಸಿದ್ದ ಹುಡುಗಿಯೂ ನನ್ನೊಂದಿಗೆ ಭಾರತಕ್ಕೆ ಬರುತ್ತಾಳೆಂದು ಭಾವಿಸಿದ್ದೆ. ಆದ್ರೆ, ಆಕೆ ಭಾರತಕ್ಕೆ ಬರ್ಲಿಲ್ಲ. 1962ರ ಇಂಡೋ-ಚೀನಾ ಯುದ್ಧದ ಕಾರಣ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಡ್ಲಿಲ್ಲ. ಇದಾದ ಬಳಿಕ ನಮ್ಮ ಸಂಬಂಧ ದೂರವಾಯ್ತು. ಇದಾದ ಮೇಲೆ ನನ್ನ ಬದುಕಿನಲ್ಲಿ ಬಹಳ ಮಂದಿ ಮಹಿಳೆಯರು ಬಂದು ಹೋದರು. ಆದರೆ ಯಾರೂ ತನ್ನ ಕೈಹಿಡಿಯಲಿಲ್ಲ.
-ರತನ್ ಟಾಟಾ, ಉದ್ಯಮಿ
75ಕ್ಕೆ ಟಾಟಾ ಗ್ರೂಪ್ಗೆ ರಾಜೀನಾಮೆ.. ಆದಾಯದ ಶೇ.60ರಷ್ಟು ದಾನ
28 ಡಿಸೆಂಬರ್ 2012 ಅಂದ್ರೆ, ರತನ್ ಟಾಟಾ ತಮ್ಮ 75ನೇ ವರ್ಷಕ್ಕೆ ಟಾಟಾ ಸಮೂಹ ಸಂಸ್ಥೆಗೆ ರಾಜೀನಾಮೆ ಕೊಟ್ರು. 2024 ರಲ್ಲಿ ಅವರ ಒಟ್ಟಾರೆ ನಿವ್ವಳ ಆಸ್ತಿ ಮೊತ್ತವು 3,800 ಕೋಟಿ ರೂಪಾಯಿ ಆಗುತ್ತದೆ. ಇದರಲ್ಲಿ ದಾನ ಸೇವಾ ಕಾರ್ಯಗಳಿಗೆ ನೀಡಿದ ಹಣ ಸೇರ್ಪಡೆಯಾಗಿಲ್ಲ. ಮತ್ತೊಂದು ಪ್ರಮುಖ ವಿಚಾರ ಏನಂದ್ರೆ, ದೇಶದ ಶ್ರೀಮಂತ ಉದ್ಯಮಿಯಾಗಿರೋ ರತನ್ ಟಾಟಾರ ಹೆಸರು ಶ್ರೀಮಂತರ ಪಟ್ಟಿಯಲ್ಲಿಲ್ಲ. ರತನ್ ಟಾಟಾ ಅವರು ತಮ್ಮ ಸಂಪಾದನೆಯ ಶೇ.60 ಕ್ಕೂ ಹೆಚ್ಚು ಹಣವನ್ನು ಟಾಟಾ ಚಾರಿಟಿಗೆ ನೀಡುತ್ತಿದ್ರು. ಕೋವಿಡ್ ಹೋರಾಟಕ್ಕೆ 1,500 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಅನ್ನೋದು ವಿಶೇಷ.
ಇದನ್ನೂ ಓದಿ: ಮದುವೆಯಾದ ಮೊದಲ ರಾತ್ರಿ ಮಧು ಮಂಚಕ್ಕೆ ಬಂದ ವರನಿಗೆ ಶಾಕ್; ಪತ್ನಿಯೊಂದಿಗೆ ಯಾರಿದ್ದರು ಗೊತ್ತಾ?
ರತನ್ ಟಾಟಾರ ಉದ್ಯಮ ಸಾಧನೆ, ಸೇವಾ ಕಾರ್ಯಕ್ಕೆ ಮೆಚ್ಚಿ ಕೇಂದ್ರ ಸರ್ಕಾರವು ಪದ್ಮಭೂಷಣ, ಪದ್ಮ ವಿಭೂಷಣ ನೀಡಿ ಗೌರವಿಸಿದೆ. ಅದೇನೆ ಹೇಳಿ ರತನ್ ಟಾಟಾರ ನಿಧನ. ಈ ದೇಶಕ್ಕೆ ಮಾತ್ರವಲ್ಲ. ವಿಶ್ವಕ್ಕೆ ತುಂಬಲಾರದ ನಷ್ಟ. ಕೈಗಾರಿಕೋದ್ಯಮಕ್ಕಂತೂ ಭಾರೀ ನಷ್ಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ