Advertisment

ರತನ್ ಟಾಟಾಗೆ ಕಾಡಿದ ಕಾಯಿಲೆ ಯಾವುದು? ಕ್ರಮೇಣ ಕೆಲವು ಅಂಗಗಳು ಕೆಲಸ ಮಾಡೋದನ್ನೇ ನಿಲ್ಲಿಸಿದ್ವು..

author-image
Ganesh
Updated On
ರತನ್ ಟಾಟಾಗೆ ಕಾಡಿದ ಕಾಯಿಲೆ ಯಾವುದು? ಕ್ರಮೇಣ ಕೆಲವು ಅಂಗಗಳು ಕೆಲಸ ಮಾಡೋದನ್ನೇ ನಿಲ್ಲಿಸಿದ್ವು..
Advertisment
  • ರತನ್ ಟಾಟಾ ನಿಧನ, ಇಡೀ ದೇಶದಲ್ಲಿ ದುಃಖದ ವಾತಾವರಣ
  • ಕಳೆದ ಕೆಲವು ದಿನಗಳಿಂದ ಟಾಟಾ ಆರೋಗ್ಯ ಚೆನ್ನಾಗಿರಲಿಲ್ಲ
  • ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ರತನ್ ಟಾಟಾ ನಿಧನ

ರತನ್ ಟಾಟಾ ನಿಧನದಿಂದ ದೇಶದಲ್ಲಿ ದುಃಖದ ವಾತಾವರಣವಿದೆ. ರತನ್ ಟಾಟಾ ಕೇವಲ ಉದ್ಯಮಿಯಾಗಿರಲಿಲ್ಲ, ಅದ್ಭುತ ವ್ಯಕ್ತಿ ಕೂಡ ಆಗಿದ್ದರು. ದೇಶದ ಪ್ರತಿಯೊಂದು ಮನೆಯಲ್ಲೂ ಅವರನ್ನು ನೆನಪಿಸುವ ಮೌಲ್ಯಯುತ ವಸ್ತುಗಳನ್ನ ಕಾಣಬಹುದು. ರತನ್ ಟಾಟಾ ದೇಶದ ಜನರ ಅಗತ್ಯಗಳಿಗೆ ಅನುಗುಣವಾಗಿ ವ್ಯಾಪಾರ ಮಾಡಿದವರು. ಕಳೆದ ಕೆಲವು ದಿನಗಳಿಂದ ರತನ್ ಟಾಟಾ ಆರೋಗ್ಯ ಚೆನ್ನಾಗಿರಲಿಲ್ಲ. ಮುಂಬೈನ ಪ್ರಸಿದ್ಧ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Advertisment

ಇದನ್ನೂ ಓದಿ:ಉಪ್ಪು, ಕಾರು ತಯಾರಿಕೆಯಿಂದ ಸಾಫ್ಟ್‌ವೇರ್‌ವರೆಗೆ.. ದಿಗ್ಗಜ ರತನ್ ಟಾಟಾರ ಅಸಾಧಾರಣ ಪಯಣ ಹೇಗಿತ್ತು..?

ರತನ್ ಟಾಟಾಗೆ ಏನಾಗಿತ್ತು..?

ರತನ್ ಟಾಟಾ ಲೋ ಬಿಪಿಯಿಂದ ಬಳಲುತ್ತಿದ್ದರು. ಇದರಿಂದ ಅವರ ಆರೋಗ್ಯ ಹದಗೆಡಲಾರಂಭಿಸಿತು. ಹೃದ್ರೋಗ ತಜ್ಞ ಡಾ.ಶಾರುಖ್ ಆಸ್ಪಿ ಗೋಲ್ವಾಲಾ ನೇತೃತ್ವದ ತಂಡ ರತನ್ ಟಾಟಾಗೆ ಚಿಕಿತ್ಸೆ ನೀಡುತ್ತಿದ್ದರು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ರತನ್ ಟಾಟಾ ಆರೋಗ್ಯ ಸುಧಾರಿಸಲಿಲ್ಲ.

ಮಾಹಿತಿಗಳ ಪ್ರಕಾರ ರತನ್ ಟಾಟಾ.. ಕಡಿಮೆ ರಕ್ತದೊತ್ತಡದಿಂದ ಉಂಟಾಗುವ ಹೈ-ಪೊಟೆನ್ಷನ್‌ನಿಂದ (hypotension) ಬಳಲುತ್ತಿದ್ದರು. ಇದರಿಂದಾಗಿ ಅವರ ದೇಹದ ಹಲವು ಭಾಗಗಳು ಕ್ರಮೇಣ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು. ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿದ್ದರು. ಇದು ವಯಸ್ಸಾದವರಿಗೆ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತದೆ.

Advertisment

ಇದನ್ನೂ ಓದಿ:ಅದು ರತನ್ ಟಾಟಾರ ಕನಸಿನ ಪ್ಲಾನ್ ಆಗಿತ್ತು.. ಮಾತು ಉಳಿಸಿಕೊಳ್ಳಲು ನಷ್ಟಗಳ ಬಗ್ಗೆ ಚಿಂತೆ ಮಾಡಿರಲಿಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment