newsfirstkannada.com

×

ಬರೋಬ್ಬರಿ 750 ವಿಕೆಟ್​ ಪಡೆದ ಸ್ಟಾರ್​​ ಆಲ್​ರೌಂಡರ್; ತನ್ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ R ಅಶ್ವಿನ್​​..!

Share :

Published September 23, 2024 at 4:30pm

Update September 23, 2024 at 4:31pm

    ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯ!

    ಮೊದಲ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ

    ಟೀಮ್​ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣ ಅನುಭವಿ ಆಟಗಾರ ಅಶ್ವಿನ್​​​​

ಇತ್ತೀಚೆಗೆ ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​​ ಇಂಡಿಯಾ ಬರೋಬ್ಬರಿ 280 ರನ್​ಗಳಿಂದ ಗೆದ್ದು ಬೀಗಿದೆ. ಟೀಮ್​ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದು ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್.

ಮೊದಲ ಟೆಸ್ಟ್​​ ಪಂದ್ಯದ ಫಸ್ಟ್​ ಇನ್ನಿಂಗ್ಸ್‌ನಲ್ಲಿ ಶತಕ ಹೊಡೆದು ತಂಡಕ್ಕೆ ಆಸರೆಯಾಗಿದ್ದ ಅಶ್ವಿನ್​ 2ನೇ ಇನ್ನಿಂಗ್ಸ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಟೀಮ್​ ಇಂಡಿಯಾ ಪರ 2ನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್​​ 6 ವಿಕೆಟ್‌ ಪಡೆದಿದ್ದೇ ಬಾಂಗ್ಲಾ ವಿರುದ್ಧ 280 ರನ್‌ಗಳ ಬೃಹತ್ ಗೆಲುವಿಗೆ ಕಾರಣ. ಈ ಮೂಲಕ ಇವರು ಟೆಸ್ಟ್​ ಕ್ರಿಕೆಟ್​​ನಲ್ಲಿ ಬರೋಬ್ಬರಿ 37ನೇ ಬಾರಿಗೆ ಇನ್ನಿಂಗ್ಸ್​ ಒಂದರಲ್ಲಿ 5 ವಿಕೆಟ್​​​ ಪಡೆದ ಶ್ರೇಷ್ಠ ದಾಖಲೆ ಬರೆದರು.

ತನ್ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಆರ್​​. ಅಶ್ವಿನ್​​​

ಇದಾದ ಬಳಿಕ ಮಾತಾಡಿದ ಆರ್​​. ಅಶ್ವಿನ್, ಇದು ನನಗೆ ದೊಡ್ಡ ಸವಾಲ್​. ನಾನು ಸಣ್ಣವನಿದ್ದಾಗ ಹರ್ಭಜನ್​ ಸಿಂಗ್​​​ ಬೌಲಿಂಗ್​ ಅನ್ನೇ ನಕಲು ಮಾಡುತ್ತಿದ್ದೆ. ನನಗೆ ಭಜ್ಜಿ ಯಾವಾಗಲೂ ಸ್ಫೂರ್ತಿ. ನಾನು ಹರ್ಭಜನ್​ ಸಿಂಗ್​ ಒಟ್ಟಿಗೆ ಆಡುತ್ತೇವೆ ಎಂದು ಭಾವಿಸಿರಲಿಲ್ಲ. ಐಪಿಎಲ್​​ನಿಂದ ಬಂದಿದ್ದ ಕಾರಣ ರೆಡ್​​ ಬಾಲ್​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವೇ ಅನ್ನೋ ಅನುಮಾನ ಇತ್ತು ಎಂದಿದ್ದರು.

ಅಶ್ವಿನ್ ದಾಖಲೆ

ಬಾಂಗ್ಲಾ ವಿರುದ್ಧ 2ನೇ ಇನ್ನಿಂಗ್ಸ್‌ನಲ್ಲಿ 88 ರನ್‌ಗಳಿಗೆ 6 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿಗೆ ನೆರವಾದರು. ಇದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ 750 ವಿಕೆಟ್ ಪೂರೈಸಿದರು. ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಸಾಧನೆ ಮಾಡಿದ 4ನೇ ಸ್ಪಿನ್ನರ್ ಎನಿಸಿಕೊಂಡರು.

ಇದನ್ನೂ ಓದಿ: KL ರಾಹುಲ್​ಗೆ ರವಿ ಶಾಸ್ತ್ರಿ ವಾರ್ನಿಂಗ್; ಈ ಬಾರಿ ಕನ್ನಡಿಗ ಮಾಡಿದ ತಪ್ಪೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬರೋಬ್ಬರಿ 750 ವಿಕೆಟ್​ ಪಡೆದ ಸ್ಟಾರ್​​ ಆಲ್​ರೌಂಡರ್; ತನ್ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ R ಅಶ್ವಿನ್​​..!

https://newsfirstlive.com/wp-content/uploads/2024/02/ASHWIN_TEST_500.jpg

Load More