2 ಸಾವಿರ ಬೆನ್ನಲ್ಲೇ 500 ರೂ. ನೋಟು ಬ್ಯಾನ್?
RBI ಗವರ್ನರ್ ಕೊಟ್ರು ಮಹತ್ವದ ಅಪ್ಡೇಟ್..!
RBI ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದೇನು?
ನವದೆಹಲಿ: ರೆಪೋ ರೇಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳುವ ಮೂಲಕ ಗೃಹ ಸಾಲ ಪಡೆದವರಿಗೆ ಆರ್ಬಿಐ ಸಿಹಿಸುದ್ದಿ ಕೊಟ್ಟಿತ್ತು. ಈ ಬೆನ್ನಲ್ಲೇ 500 ರೂ. ನೋಟುಗಳ ಬಗ್ಗೆಯೂ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮಹತ್ವದ ಅಪ್ಡೇಟ್ ಒಂದು ಕೊಟ್ಟಿದ್ದಾರೆ.
ಯೆಸ್, ಇತ್ತೀಚೆಗೆ 2000 ಸಾವಿರ ನೋಟು ಬ್ಯಾನ್ ಆದ ಬೆನ್ನಲ್ಲೇ ಯಾವಾಗ 500 ರೂ. ನೋಟುಗಳ ಚಲಾವಣೆ ನಿಂತು ಹೋಗುತ್ತದೋ ಎಂಬ ಚರ್ಚೆ ನಡೆಯುತ್ತಿತ್ತು. ಸದ್ಯ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, 500 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಯಾವುದೇ ಉದ್ದೇಶ ಇಲ್ಲ. ಜತೆಗೆ 1000 ರೂ. ನೋಟುಗಳನ್ನು ಮರು ಪರಿಚಯಿಸುವ ಯೋಜನೆಯೂ ಹಾಕಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು, ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಅರ್ಧದಷ್ಟು ಈಗಾಗಲೇ ವಾಪಸ್ ಬಂದಿವೆ. ವಾಪಸ್ ಬಂದಿರೋ ನೋಟುಗಳ ಮೌಲ್ಯ 1.82 ಲಕ್ಷ ಕೋಟಿ ರೂ. ಆಗಿದೆ. 500 ರೂ. ನೋಟುಗಳನ್ನು ಹಿಂಪಡೆಯುವ ಯೋಜನೆ ಇಲ್ಲ, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ