/newsfirstlive-kannada/media/post_attachments/wp-content/uploads/2024/04/MAXWELL-1.jpg)
ಸತತ ಸೋಲುಗಳ ಬೆನ್ನು ಹತ್ತಿ ಹೋಗುತ್ತಿರುವ ಆರ್​ಸಿಬಿಗೆ ಮತ್ತೊಂದು ಆಘಾತ ಎದುರಾಗಿದೆ. ಆರ್​ಸಿಬಿ ನಂಬುಗೆಯ ಆಟಗಾರ, ಆಲ್​​ರೌಂಡರ್​ ಗ್ಲೇನ್ ಮ್ಯಾಕ್ಸ್​​ವೆಲ್​​ 2024 ಟೂರ್ನಿಯಿಂದಲೇ ಬ್ರೇಕ್ ತೆಗೆದುಕೊಂಡಿದ್ದಾರೆ. ಅನಿರ್ಧಿಷ್ಟಾವಧಿಗೆ ಬ್ರೇಕ್ ತೆಗೆದುಕೊಳ್ತಿರುವುದಾಗಿ ಮ್ಯಾಕ್ಸ್​ವೆಲ್ ಹೇಳಿದ್ದು, ಮುಂದಿನ ಪಂದ್ಯಗಳಿಗೆ ಮ್ಯಾಕ್ಸ್​ವೆಲ್ ಲಭ್ಯವಾಗುವ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಇದನ್ನೂ ಓದಿ:ಅಯ್ಯೋ ಪಾಪ.. 25 ದಿನಗಳಿಂದ ಅಮ್ಮನಿಗಾಗಿ ದುಃಖಿಸಿ, ದುಃಖಿಸಿ ಪ್ರಾಣಬಿಟ್ಟ ಮರಿಯಾನೆ
ಈ ಬಗ್ಗೆ ಮಾಹಿತಿ ನೀಡಿರುವ ಮ್ಯಾಕ್ಸ್​ವೆಲ್.. ನಾನು ಮಾನಸಿಕವಾಗಿ ಚೆನ್ನಾಗಿಲ್ಲ, ದೈಹಿಕವಾಗಿಯೂ ರೆಸ್ಟ್​ ಬೇಕಾಗಿದೆ. ಅದಕ್ಕಾಗಿ ನಾನು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರ. ಕಳೆದ ಪಂದ್ಯ ಮುಗಿದ ಬೆನ್ನಲ್ಲೇ ನಾನು ಕ್ಯಾಪ್ಟನ್ ಫಾಫ್ ಮತ್ತು ಕೋಚ್​​ ಬಳಿ ಹೋಗಿ ಮಾತನಾಡಿದ್ದೇನೆ. ನನ್ನ ಬದಲಿಗೆ ಬೇರೆಯವರ ಬಳಸಿಕೊಳ್ಳಿ. ನನಗೆ ಬ್ರೇಕ್ ನೀಡಿ ಎಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಯುವಕನಿಂದ ನಿರಂತರ ಕಿರುಕುಳ; ನೊಂದು ವಿಷ ಸೇವಿಸಿ ಪ್ರಾಣಬಿಟ್ಟ ಬಾಲಕಿ
ಮಾನಸಿಕವಾಗಿ ಮತ್ತು ದೈಹಿಕವಾಗಿ ವಿರಾಮ ಪಡೆಲು ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಟೂರ್ನಿಯಲ್ಲಿ ನನ್ನ ಅಗತ್ಯ ಬಿದ್ದರೆ, ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಂಡ ಬಳಿಕ ಮತ್ತೆ ಮರಳುತ್ತೇನೆ. ಅದು ಇನ್ನಷ್ಟು ಪರಿಣಾಮಕಾರಿ ಆಗಿರಲಿದೆ ಎಂಬ ಭಾವನೆ ನನ್ನದು ಎಂದಿದ್ದಾರೆ.
ಇದನ್ನೂ ಓದಿ:ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ನಟನ ಕೊಲೆ ಮಾಡಲು ಬಂದವರು ಅಂತಿಂಥ ಜನ ಅಲ್ಲ..!
ಈ ಬಾರಿಯ ಟೂರ್ನಿಯಲ್ಲಿ ಮ್ಯಾಕ್ಸ್​ವೆಲ್​​ ಉತ್ತಮ ಪ್ರದರ್ಶನ ನೀಡಿಲ್ಲ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್​​ನಲ್ಲೂ ಕಳಪೆ ಪ್ರದರ್ಶನ ತೋರಿಸಿದ್ದಾರೆ. ಹೀಗಾಗಿ ಮ್ಯಾಕ್ಸಿ ತೀವ್ರ ಟೀಕೆಗೆ ಒಳಗಾಗಿದ್ದರು. ಜೊತೆಗೆ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಇದೀಗ 2024ರ ಐಪಿಎಲ್​ನಿಂದಲೇ ಬ್ರೇಕ್ ತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us