newsfirstkannada.com

RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?

Share :

Published September 26, 2024 at 10:34am

Update September 26, 2024 at 10:35am

    ಫ್ರಾಂಚೈಸಿಗಳಲ್ಲಿ ನಡೆಯುತ್ತಿದೆ ರಿಲೀಸ್, ರಿಟೈನ್ ಬಗ್ಗೆ ಚರ್ಚೆ

    2025ರ ಮೆಗಾ ಆಕ್ಷನ್​ಗೆ ಇನ್ನು ಕೆಲವು ತಿಂಗಳುಗಳ ಬಾಕಿ ಇದೆ

    ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ರಿಟೈನ್​ಗೆ ಕಾರಣ ಇದೆನಾ.?

2025ರ ಮೆಗಾ ಆಕ್ಷನ್ ನಡೆಯುವುದು ಇನ್ನು ಕೆಲವು ತಿಂಗಳಗಳ ಬಾಕಿ ಇದೆ. ಇದಕ್ಕಿಂತ ಮೊದಲೇ ಐಪಿಎಲ್​ ತಂಡಗಳು ಯಾವ ಪ್ಲೇಯರ್​ ಅನ್ನು ಉಳಿಸಿಕೊಳ್ಳಬೇಕು, ಯಾವ ಆಟಗಾರನನ್ನ ರಿಲೀಸ್ ಮಾಡಬೇಕು ಎನ್ನುವ ಲೆಕ್ಕದಲ್ಲಿವೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಕೊಹ್ಲಿ ಸೇರಿ 5 ಆಟಗಾರರನ್ನ ರಿಟೈನ್ ಮಾಡಿಕೊಳ್ಳುತ್ತೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಏನೆಂದು ಗಮನಿಸಬಹುದು.

ಈ 5 ಆಟಗಾರರನ್ನ ಆರ್​ಸಿಬಿ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಗೆ ಮುಖ್ಯ ಕಾರಣ?

ವಿರಾಟ್​ ಕೊಹ್ಲಿ: ಆರ್​ಸಿಬಿ ಮೊದಲು ರಿಟೈನ್ ಆಗೋ ಸ್ಟಾರ್ ಪ್ಲೇಯರ್. ಇಂಟರ್​​ನ್ಯಾಷನಲ್ ಟಿ20ಗೆ ವಿರಾಟ್ ಗುಡ್​​ಬೈ ಹೇಳಿದ್ದಾರೆ. ಆದರೆ ಫ್ರಾಂಚೈಸಿಗೆ ಇನ್ನಷ್ಟು ಕೊಡುಗೆ ನೀಡಬಹುದು. ಅಲ್ಲದೇ 2024ರ ಐಪಿಎಲ್​​ನಲ್ಲಿ ಅತಿ ಹೆಚ್ಚು ರನ್​ಗಳನ್ನ ಕೆಲೆ ಹಾಕಿದ್ದರು. ಕಳೆದ ಸೀಸನ್​​ನಲ್ಲಿ 741 ರನ್​ಗಳು ವಿರಾಟ್ ಹೆಸರಲ್ಲಿವೆ.

ಮೊಹಮ್ಮದ್​ ಸಿರಾಜ್: ಆರ್​ಸಿಬಿ ತಂಡಕ್ಕೆ ಬೇಕಾಗಿರುವ ಪೇಸ್ ಬೌಲರ್. ಫ್ರಾಂಚೈಸಿ ಸದಸ್ಯರಲ್ಲಿ ವಿರಾಟ್ ಕೊಹ್ಲಿಯಂತೆ ಸಿರಾಜ್ ಕೂಡ ಒಬ್ಬರಾಗಿದ್ದಾರೆ. ಕಳೆದ ಸೀಸನ್​​ನಲ್ಲಿ ಅವರ ಪ್ರದರ್ಶನ ಗಮನಿಸಿದರೆ ಫ್ರಾಂಚೈಸಿ ಮೊಹಮ್ಮದ್ ಸಿರಾಜ್ ಮೇಲೆ ನಂಬಿಕೆ ಇಟ್ಟು ಉಳಿಸಿಕೊಳ್ಳುವ ಸಾಧ್ಯತೆ ಗಾಡವಾಗಿದೆ.

ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

ಯಶ್ ದಯಾಳ್: ಈ ಯುವ ಪ್ಲೇಯರ್​ ಅನ್ನು ಖರೀದಿ ಮಾಡಿದಾಗ ನಕರಾತ್ಮಕ ಮಾತುಗಳು ಕೇಳಿ ಬಂದಿದ್ದವು. ಆದರೆ ಎಲ್ಲವನ್ನು ಸುಳ್ಳು ಮಾಡಿ ಯಶ್ ದಯಾಳ್ ಒಳ್ಳೆಯ ಪ್ರದರ್ಶನ ನೀಡಿ ಕಳೆದ ಸೀಸನ್​ನಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಪ್ರಮುಖ ಸಂದರ್ಭದಲ್ಲಿ ವಿಕೆಟ್ ಪಡೆದು ತಂಡವನ್ನ ದಡ ಸೇರಿಸಿದ್ದರು.

ರಜತ್ ಪಾಟೀದಾರ್: ಮಧ್ಯಮ ಕ್ರಮಾಂಕದಲ್ಲಿ ಸಾಲಿಡ್​ ಆಗಿ ಬ್ಯಾಟ್ ಬೀಸುವ ಯಂಗ್ ಪ್ಲೇಯರ್. ಅಲ್ಲದೇ ಕಳೆದ ಕೆಲ ವರ್ಷಗಳಿಂದ ಆರ್​ಸಿಬಿ ಜೊತೆ ರಜತ್ ಒಳ್ಳೆಯ ಟಚ್​ನಲ್ಲಿದ್ದಾರೆ. ಬಿರುಸಿನ ಬ್ಯಾಟಿಂಗ್​ಗೆ ಹೆಸರುವಾಸಿ. ಇನ್ನು ಸ್ಪರ್ಧಿ ಕೂಡ ಯಾರು ಇಲ್ಲ ಎಂದು ಹೇಳಬಹುದು. ಹೀಗಾಗಿ ರಜತ್ ರಿಟೈನ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಮಹಾಯುದ್ಧದ ಕಾರ್ಮೋಡ; ರಷ್ಯಾ- ಉಕ್ರೇನ್ ಘರ್ಷಣೆ ಮತ್ತೆ ಆರಂಭ.. ನ್ಯೂಕ್ಲಿಯರ್- ಕ್ಷಿಪಣಿ ದಾಳಿಗೆ ಪ್ಲಾನ್?

ವಿಲ್ ಜಾಕ್ಸ್​: ವಿದೇಶಿ ಪ್ಲೇಯರ್ ಆಗಿರುವ ಮ್ಯಾಕ್ಸ್​ವೆಲ್, ಕ್ಯಾಮರೂನ್ ಗ್ರೀನ್ ಆರ್​ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆಲ್​ರೌಂಡರ್ ಆಗಿದ್ದರು ಬ್ಯಾಟಿಂಗ್, ಬೌಲಿಂಗ್​ನಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಸದ್ಯ ತಂಡದಲ್ಲಿ ವಿಲ್ ಜಾಕ್ಸ್​ಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಕಳೆದ ಸಲ ಗುಜರಾತ್ ಜೊತೆ ಸಿಡಿಲಬ್ಬರದ ಶತಕ ಶರವೇದಲ್ಲಿ ಬಾರಿಸಿದ್ದರು. ಇಂಗ್ಲೆಂಡ್​ನ ಯಂಗ್ ಪ್ಲೇಯರ್ ಆಗಿರುವ ಜಾಕ್ಸ್ ಕೆಲ ವರ್ಷ ಆರ್​ಸಿಬಿಗೆ ಕೊಡುಗೆ ನೀಡಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?

https://newsfirstlive.com/wp-content/uploads/2024/09/RCB_KOHLI_WILL_JACKS.jpg

Load More