ಫ್ರಾಂಚೈಸಿಗಳಲ್ಲಿ ನಡೆಯುತ್ತಿದೆ ರಿಲೀಸ್, ರಿಟೈನ್ ಬಗ್ಗೆ ಚರ್ಚೆ
2025ರ ಮೆಗಾ ಆಕ್ಷನ್ಗೆ ಇನ್ನು ಕೆಲವು ತಿಂಗಳುಗಳ ಬಾಕಿ ಇದೆ
ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ರಿಟೈನ್ಗೆ ಕಾರಣ ಇದೆನಾ.?
2025ರ ಮೆಗಾ ಆಕ್ಷನ್ ನಡೆಯುವುದು ಇನ್ನು ಕೆಲವು ತಿಂಗಳಗಳ ಬಾಕಿ ಇದೆ. ಇದಕ್ಕಿಂತ ಮೊದಲೇ ಐಪಿಎಲ್ ತಂಡಗಳು ಯಾವ ಪ್ಲೇಯರ್ ಅನ್ನು ಉಳಿಸಿಕೊಳ್ಳಬೇಕು, ಯಾವ ಆಟಗಾರನನ್ನ ರಿಲೀಸ್ ಮಾಡಬೇಕು ಎನ್ನುವ ಲೆಕ್ಕದಲ್ಲಿವೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಕೊಹ್ಲಿ ಸೇರಿ 5 ಆಟಗಾರರನ್ನ ರಿಟೈನ್ ಮಾಡಿಕೊಳ್ಳುತ್ತೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಏನೆಂದು ಗಮನಿಸಬಹುದು.
ಈ 5 ಆಟಗಾರರನ್ನ ಆರ್ಸಿಬಿ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಗೆ ಮುಖ್ಯ ಕಾರಣ?
ವಿರಾಟ್ ಕೊಹ್ಲಿ: ಆರ್ಸಿಬಿ ಮೊದಲು ರಿಟೈನ್ ಆಗೋ ಸ್ಟಾರ್ ಪ್ಲೇಯರ್. ಇಂಟರ್ನ್ಯಾಷನಲ್ ಟಿ20ಗೆ ವಿರಾಟ್ ಗುಡ್ಬೈ ಹೇಳಿದ್ದಾರೆ. ಆದರೆ ಫ್ರಾಂಚೈಸಿಗೆ ಇನ್ನಷ್ಟು ಕೊಡುಗೆ ನೀಡಬಹುದು. ಅಲ್ಲದೇ 2024ರ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ಗಳನ್ನ ಕೆಲೆ ಹಾಕಿದ್ದರು. ಕಳೆದ ಸೀಸನ್ನಲ್ಲಿ 741 ರನ್ಗಳು ವಿರಾಟ್ ಹೆಸರಲ್ಲಿವೆ.
ಮೊಹಮ್ಮದ್ ಸಿರಾಜ್: ಆರ್ಸಿಬಿ ತಂಡಕ್ಕೆ ಬೇಕಾಗಿರುವ ಪೇಸ್ ಬೌಲರ್. ಫ್ರಾಂಚೈಸಿ ಸದಸ್ಯರಲ್ಲಿ ವಿರಾಟ್ ಕೊಹ್ಲಿಯಂತೆ ಸಿರಾಜ್ ಕೂಡ ಒಬ್ಬರಾಗಿದ್ದಾರೆ. ಕಳೆದ ಸೀಸನ್ನಲ್ಲಿ ಅವರ ಪ್ರದರ್ಶನ ಗಮನಿಸಿದರೆ ಫ್ರಾಂಚೈಸಿ ಮೊಹಮ್ಮದ್ ಸಿರಾಜ್ ಮೇಲೆ ನಂಬಿಕೆ ಇಟ್ಟು ಉಳಿಸಿಕೊಳ್ಳುವ ಸಾಧ್ಯತೆ ಗಾಡವಾಗಿದೆ.
ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್ ರಿಟೈನ್.. ಫ್ರಾಂಚೈಸಿಯಿಂದ ಕ್ಯಾಪ್ಟನ್ಗೆ ಬಿಗ್ ಶಾಕ್?
ಯಶ್ ದಯಾಳ್: ಈ ಯುವ ಪ್ಲೇಯರ್ ಅನ್ನು ಖರೀದಿ ಮಾಡಿದಾಗ ನಕರಾತ್ಮಕ ಮಾತುಗಳು ಕೇಳಿ ಬಂದಿದ್ದವು. ಆದರೆ ಎಲ್ಲವನ್ನು ಸುಳ್ಳು ಮಾಡಿ ಯಶ್ ದಯಾಳ್ ಒಳ್ಳೆಯ ಪ್ರದರ್ಶನ ನೀಡಿ ಕಳೆದ ಸೀಸನ್ನಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಪ್ರಮುಖ ಸಂದರ್ಭದಲ್ಲಿ ವಿಕೆಟ್ ಪಡೆದು ತಂಡವನ್ನ ದಡ ಸೇರಿಸಿದ್ದರು.
ರಜತ್ ಪಾಟೀದಾರ್: ಮಧ್ಯಮ ಕ್ರಮಾಂಕದಲ್ಲಿ ಸಾಲಿಡ್ ಆಗಿ ಬ್ಯಾಟ್ ಬೀಸುವ ಯಂಗ್ ಪ್ಲೇಯರ್. ಅಲ್ಲದೇ ಕಳೆದ ಕೆಲ ವರ್ಷಗಳಿಂದ ಆರ್ಸಿಬಿ ಜೊತೆ ರಜತ್ ಒಳ್ಳೆಯ ಟಚ್ನಲ್ಲಿದ್ದಾರೆ. ಬಿರುಸಿನ ಬ್ಯಾಟಿಂಗ್ಗೆ ಹೆಸರುವಾಸಿ. ಇನ್ನು ಸ್ಪರ್ಧಿ ಕೂಡ ಯಾರು ಇಲ್ಲ ಎಂದು ಹೇಳಬಹುದು. ಹೀಗಾಗಿ ರಜತ್ ರಿಟೈನ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ಮಹಾಯುದ್ಧದ ಕಾರ್ಮೋಡ; ರಷ್ಯಾ- ಉಕ್ರೇನ್ ಘರ್ಷಣೆ ಮತ್ತೆ ಆರಂಭ.. ನ್ಯೂಕ್ಲಿಯರ್- ಕ್ಷಿಪಣಿ ದಾಳಿಗೆ ಪ್ಲಾನ್?
ವಿಲ್ ಜಾಕ್ಸ್: ವಿದೇಶಿ ಪ್ಲೇಯರ್ ಆಗಿರುವ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಆರ್ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆಲ್ರೌಂಡರ್ ಆಗಿದ್ದರು ಬ್ಯಾಟಿಂಗ್, ಬೌಲಿಂಗ್ನಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಸದ್ಯ ತಂಡದಲ್ಲಿ ವಿಲ್ ಜಾಕ್ಸ್ಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಕಳೆದ ಸಲ ಗುಜರಾತ್ ಜೊತೆ ಸಿಡಿಲಬ್ಬರದ ಶತಕ ಶರವೇದಲ್ಲಿ ಬಾರಿಸಿದ್ದರು. ಇಂಗ್ಲೆಂಡ್ನ ಯಂಗ್ ಪ್ಲೇಯರ್ ಆಗಿರುವ ಜಾಕ್ಸ್ ಕೆಲ ವರ್ಷ ಆರ್ಸಿಬಿಗೆ ಕೊಡುಗೆ ನೀಡಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ